ಇಸ್ಲಾಮಾಬಾದ್: ಪಾಕಿಸ್ತಾನದ ದಕ್ಷಿಣ ವಾಜಿರಿಸ್ತಾನ್ ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ ನಾಲ್ಕು ಭಯೋತ್ಪಾದಕರು ಸಾವಿಗೀಡಾಗಿದ್ದು, ನಾಲ್ವರು ಸೈನಿಕರು ಹತರಾಗಿದ್ದಾರೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.
ಜಿಲ್ಲೆಯ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಗುರುವಾರ ತಡರಾತ್ರಿ ಸೈನಿಕರನ್ನು ಕೊಂದಿದ್ದಾರೆ ಎಂದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇನ್ನು ಎಂಟು ಸಂತ್ರಸ್ತರ ಗುರುತುಗಳನ್ನು ಐಎಸ್‌ಪಿಆರ್ ಬಹಿರಂಗಪಡಿಸಿಲ್ಲ.
ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿರುವ ದಕ್ಷಿಣ ವಾಜಿರಿಸ್ತಾನ್ ಕೆಲವು ವರ್ಷಗಳ ಹಿಂದೆ ಉಗ್ರಗಾಮಿತ್ವದ ತಾಣವಾಗಿತ್ತು. ಆದರೆ, ಭದ್ರತಾ ಪಡೆಗಳು ಭಯೋತ್ಪಾದಕರನ್ನು ಈ ಪ್ರದೇಶದಿಂದ ಓಡಿಸಿವೆ. ಈ ಪ್ರದೇಶವನ್ನು ಉಗ್ರಗಾಮಿತ್ವದಿಂದ ಮುಕ್ತವಾಗಿರಿಸಿದ್ದರೂ ಸಹ ಕೆಲವು ದಾಳಿಗಳು ಮುಂದುವರಿಯುತ್ತಲೇ ಇವೆ.
ಕಳೆದ ತಿಂಗಳು ಭದ್ರತಾ ಪಡೆಗಳು ಜಿಲ್ಲೆಯಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆ ನಡೆಸಿದ್ದವು. ತೀವ್ರವಾದ ಗುಂಡಿನ ದಾಳಿಯ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಸಾವಿಗೀಡಾಗಿದ್ದು, ಒಬ್ಬ ಗಾಯಗೊಂಡಿದ್ದ. ಆತನನ್ನು ಸೇನೆ ಬಂಧಿಸಲಾಗಿತ್ತು ಎಂದು ಐಎಸ್ಪಿಆರ್ ತಿಳಿಸಿದೆ.