ETV Bharat / international

ಇರಾನ್​ನ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಆಯ್ಕೆ! - ಇರಾನ್ ಅಧ್ಯಕ್ಷೀಯ ಚುನಾವಣೆ

ಇರಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಇಬ್ರಾಹಿಂ ರೈಸಿ ಜಯಭೇರಿ ಬಾರಿಸಿದ್ದಾರೆ. ಆಗಸ್ಟ್​ನಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ibrahim raisi
ಇಬ್ರಾಹಿಂ ರೈಸಿ
author img

By

Published : Jun 19, 2021, 4:11 PM IST

ದುಬೈ: ಇರಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಇಬ್ರಾಹಿಂ ರೈಸಿ ಜಯಭೇರಿ ಬಾರಿಸಿದ್ದಾರೆ. ಗೆದ್ದಿರುವ ಇಬ್ರಾಹಿಂ ರೈಸಿಗೆ ಮಾಜಿ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥ ಅಬ್ದುಲ್ ನಾಸರ್ ಹಾಗೂ ಮಾಜಿ ರೆವಲ್ಯೂಷನರಿ ಗಾರ್ಡ್ ಕಮಾಂಡರ್ ಮೊಹ್ಸೆನ್ ಶುಭ ಕೋರಿದ್ದಾರೆ.

ಇರಾನ್ ಅಧ್ಯಕ್ಷೀಯ ಚುನಾವಣೆಗೆ ಗುರುವಾರ ಮತದಾನ ನಡೆದಿದ್ದು, ಶುಕ್ರವಾರ ಮತ ಎಣಿಕೆ ನಡೆದಿದೆ. ಇಬ್ರಾಹಿಂ ರೈಸಿ ಜಯಭೇರಿ ಬಾರಿಸಿದ್ದು, ಇಂದು ವಿದೇಶಾಂಗ ಸಚಿವ ಮೊಹಮ್ಮದ್​ ಜಾವಾದ್​ ಜರೀಫ್ ​​ಇಬ್ರಾಹಿಂ ರೈಸಿ ಅವರ ಆಯ್ಕೆಯನ್ನು ಘೋಷಿಸಿದ್ದಾರೆ. ಆಗಸ್ಟ್​ನಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ನಾಲ್ವರು ಅಭ್ಯರ್ಥಿಗಳ ಪೈಕಿ ಮತದಾನದ ಆಧಾರದ ಮೇಲೆ, ನ್ಯಾಯಾಂಗ ಮುಖ್ಯಸ್ಥ ಇಬ್ರಾಹಿಂ ರೈಸಿ ಮುಂದಿದ್ದರು. ಇರಾನ್​ನ ಸೆಂಟ್ರಲ್​ ಬ್ಯಾಂಕ್​ನ ಮಾಜಿ ಮುಖ್ಯಸ್ಥ ಅಬ್ದುಲ್ ನಾಸರ್​​ ಮಧ್ಯಮ ವರ್ಗವನ್ನು ಪ್ರತಿನಿಧಿಸಿದ್ದರು. ಮಾಜಿ ಗಾರ್ಡ್ ಕಮಾಂಡರ್ ಮೊಹ್ಸೆನ್ ರೆಝೈ ಕೂಡ ಉತ್ತಮ ಪೈಪೋಟಿ ನೀಡಿದ್ದರು. ಶಾಸಕರಾಗಿರುವ ಅಮೀರ್ ಹೊಸೆನ್ ಗಾಜಿಜಾದೆಗೆ ಪ್ರಸ್ತುತ ಅಧ್ಯಕ್ಷ ಹಸನ್ ರೂಹಾನಿಯ ಬೆಂಬಲ ಇರುವುದರಿಂದ ಇವರದ್ದು ಎರಡು ಗಾಡಿಯ ಓಟ ಎಂದು ಟೀಕಿಸಲಾಗಿತ್ತು.

ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ರೈಸಿ, ಇರಾನ್​ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.