ಹೈದರಾಬಾದ್: ಕೊರೊನಾ ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿದ್ದರೂ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತ ವಿರುದ್ಧ ದ್ವೇಷ ಕಾರುವ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದಾರೆ.
ಕೊರೊನಾ ಹರುಡುವಿಕೆಯ ಕುರಿತು ಯುಎಸ್ ಮೂಲದ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶವೊಂದರಲ್ಲಿ, ವಿಷಯವನ್ನು ತಿರುಗಿಸಿ ಕಾಶ್ಮೀರ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಪ್ರಸ್ತಾಪಿಸಿದ ಖಾನ್, ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಶಕದಲ್ಲೇ ಅತ್ಯಂತ ಕೆಟ್ಟ ಹಿಂದೂ-ಮುಸ್ಲಿಂ ಗಲಭೆ ನಡೆದಿದೆ ಎಂದು ಕಳವಳ ವ್ಯಕ್ತಪಡಿಸಿದ ಖಾನ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಹಿಂದೂ ರಾಷ್ಟ್ರೀಯವಾದಿ ಸರ್ಕಾರವೂ, ವಿವಾದಾದ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತರುವ ಮೂಲಕ ಭಾರತದ ಕೋಟ್ಯಂತರ ಜನರ ಹಕ್ಕನ್ನು ಕಸಿದುಕೊಂಡಿದೆ ಎಂದು ಆರೋಪಿಸಿದ್ದಾರೆ.
"ವಿಶ್ವದ ಕೆಟ್ಟ ದುಃಸ್ವಪ್ನವೊಂದು ಸಂಭವಿಸಿದೆ. ಜನಾಂಗೀಯ ದ್ವೇಷವನ್ನು ಹರಡುವ ಪಕ್ಷವೊಂದು ಕೋಟ್ಯಂತರ ಜನರ ರಾಷ್ಟ್ರೀಯತೆಯನ್ನು ಕಿತ್ತುಕೊಂಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಖಾನ್ ಕೆಂಡ ಕಾರಿದರು.