ETV Bharat / international

ರಷ್ಯಾದ ಕಲಾಶ್ನಿಕೋವ್ ಗ್ರೂಪ್‌ನ ಸುಧಾರಿತ ಎಸ್-8 ಎಲ್ ಗೈಡೆಡ್ ಕ್ಷಿಪಣಿ ಶಕ್ತಿ ಪ್ರದರ್ಶನ..

author img

By

Published : Aug 23, 2021, 2:41 PM IST

ಹೆಚ್‌ಇಎಫ್‌ ಸಿಡಿತಲೆ ಹೊಂದಿರುವ ಸುಧಾರಿತ 80-ಎಂಎಂ ಎಸ್‌-8ಎಲ್‌ ಗೈಡೆಡ್ ಕ್ಷಿಪಣಿಯನ್ನು ಸ್ಥಿರ ಮತ್ತು ಚಲಿಸುವ ಏಕ ಮತ್ತು ನೆಲದ ಗುರಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. B8V20 ಅಥವಾ B8M1 ರಾಕೆಟ್ ಲಾಂಚರ್‌ಗಳನ್ನು ಬಳಸಿಕೊಂಡು S-8L ಅನ್ನು ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳಿಂದ ಉಡಾವಣೆ ಮಾಡಬಹುದು..

Kalashnikov to present its new guided-missile at 'ARMY-2021' in Moscow
ರಷ್ಯಾದ ಕಲಾಶ್ನಿಕೋವ್ ಗ್ರೂಪ್‌ನ ಸುಧಾರಿತ ಎಸ್ -8 ಎಲ್ ಗೈಡೆಡ್ ಕ್ಷಿಪಣಿ ಶಕ್ತಿ ಪ್ರದರ್ಶನ

ಮಾಸ್ಕೋ(ರಷ್ಯಾ) : ಸುಧಾರಿತ ಎಸ್-8ಎಲ್ ಗೈಡೆಡ್ ಕ್ಷಿಪಣಿಯ ಆರಂಭಿಕ ಸಂಶೋಧನೆ ಮತ್ತು ಅಭಿವೃದ್ಧಿ ಪೂರ್ಣಗೊಂಡ ನಂತರ, ರಷ್ಯಾದ ಕಲಾಶ್ನಿಕೋವ್ ಗ್ರೂಪ್ ಹೊಸ ಉತ್ಪನ್ನವನ್ನು ಅಂತಾರಾಷ್ಟ್ರೀಯ ಮಿಲಿಟರಿ-ತಾಂತ್ರಿಕ ವೇದಿಕೆ "ARMY-2021"ನಲ್ಲಿ ಪ್ರಸ್ತುತಪಡಿಸಲು ಸಜ್ಜಾಗಿದೆ.

ಅರೆ-ಸಕ್ರಿಯ ಹೋಮಿಂಗ್ ಹೆಡ್ ಹೊಂದಿರುವ ಎಸ್-8ಎಲ್ ಗೈಡೆಡ್ ಕ್ಷಿಪಣಿಯನ್ನು ಎಲ್ಲಾ ರೀತಿಯ ಹೆಲಿಕಾಪ್ಟರ್‌ಗಳು ಅಥವಾ ವಿಮಾನಗಳು, ಯುಎವಿಗಳು ಸೇರಿದಂತೆ ವಿವಿಧ ವಾಹಕಗಳು ಬಳಸಬಹುದು ಎಂದು ಕಲಾಶ್ನಿಕೋವ್ ಗ್ರೂಪ್‌ನ ಮೊದಲ ಉಪ ಸಿಇಒ ಆಂಡ್ರೆ ಸೆಮೆನೋವ್ ಹೇಳಿದ್ದಾರೆ.

ಹೆಚ್‌ಇಎಫ್‌ ಸಿಡಿತಲೆ ಹೊಂದಿರುವ ಸುಧಾರಿತ 80-ಎಂಎಂ ಎಸ್‌-8ಎಲ್‌ ಗೈಡೆಡ್ ಕ್ಷಿಪಣಿಯನ್ನು ಸ್ಥಿರ ಮತ್ತು ಚಲಿಸುವ ಏಕ ಮತ್ತು ನೆಲದ ಗುರಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. B8V20 ಅಥವಾ B8M1 ರಾಕೆಟ್ ಲಾಂಚರ್‌ಗಳನ್ನು ಬಳಸಿಕೊಂಡು S-8L ಅನ್ನು ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳಿಂದ ಉಡಾವಣೆ ಮಾಡಬಹುದು.

ರಾಕೆಟ್‌ನ ಫೈರಿಂಗ್ ರೇಂಜ್ 6 ಕಿ.ಮೀ.ವರೆಗೆ ಇರುತ್ತದೆ. ಇದು ಲಘು-ಶಸ್ತ್ರಸಜ್ಜಿತ ಗುರಿಗಳನ್ನು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಬಹುದು. ಆರ್ಮಿ-2021 ವೇದಿಕೆಯಲ್ಲಿ ರಾಕೆಟ್ ಅನ್ನು ಹೆಲಿಕಾಪ್ಟರ್ ಮಾದರಿಯ ಯುಎವಿಯೊಂದಿಗೆ ಸಂಯೋಜಿಸಿ ಪ್ರದರ್ಶಿಸಲಾಗುತ್ತದೆ.

ಕಲಾಶ್ನಿಕೋವ್ ಗ್ರೂಪ್ ಮತ್ತು ಇದರ ಸಹಕಾರ ಕಂಪನಿಗಳು ಪ್ರಸ್ತುತ ಕ್ಷಿಪಣಿ ವಿಖ್ರ್-1 ಅನ್ನು ಮೂಲಕ ಗಾಳಿಯಲ್ಲೇ ವಿವಿಧ ರೀತಿಯ ಉಡಾವಣೆಯ ಅವಕಾಶಗಳನ್ನು ನೋಡುತ್ತಿದೆ. Mi-28N ಹೆಲಿಕಾಪ್ಟರ್‌ಗಳು ಪ್ರಮುಖವಾಗಿ ಈ ಪರೀಕ್ಷೆಗೆ ಒಳಪಡುತ್ತವೆ. ಆಧುನಿಕರಣಕ್ಕಾಗಿ ಇಂತಹ ಪ್ರಯೋಗ ನಡೆಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.