ETV Bharat / international

ಹೊಸ ವೈರಸ್​ ಸೋಂಕು ಖಚಿತ ಪಡಿಸಿದ ಜಪಾನ್​.. ಯಾವುದೀ ಭಯಾನಕ ರೋಗ! - ಕರೋನವೈರಸ್ ಸೋಂಕಿನ ಮೊದಲ ಪ್ರಕರಣವನ್ನ ಖಚಿತಪಡಿಸಿದ ಜಪಾನ್

ಕರೋನವೈರಸ್ ಸೋಂಕು ಇತ್ತೀಚೆಗೆ ಚೀನಾದಲ್ಲಿ ಮೊದಲ ಬಾರಿಗೆ ಕಂಡು ಬಂದಿತ್ತು. ಆ ರಾಷ್ಟ್ರದಲ್ಲಿ 40 ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದು, ಒಂದು ಸಾವು ಸಹ ಸಂಭವಿಸಿತ್ತು. ಕರೋನ ವೈರಸ್​ಗಳು ಸಾಮಾನ್ಯವಾಗಿ ಶೀತ ರೀತಿಯ ರೋಗಲಕ್ಷಣಗಳನ್ನು ಉಂಟುಮಾಡುತ್ತವೆ ಮತ್ತು ಸೀನುವಿಕೆ, ಕೆಮ್ಮು ಅಥವಾ ನೇರ ಸಂಪರ್ಕದ ಮೂಲಕ ಬೇರೆಯವರಿಗೆ ಹರಡುತ್ತವೆ.

coronavirus infection
ಹೊಸ ಕರೋನವೈರಸ್ ಸೋಂಕಿನ ಮೊದಲ ಪ್ರಕರಣವನ್ನ ಖಚಿತಪಡಿಸಿದ ಜಪಾನ್
author img

By

Published : Jan 16, 2020, 3:19 PM IST

ಟೋಕಿಯೊ: ಹೊಸ ಪರಿಧಮನಿಯ ಕೊರೊನಾವೈರಸ್‌ನಿಂದ ಉಂಟಾದ ನ್ಯುಮೋನಿಯಾ ತರಹದ ಅನಾರೋಗ್ಯದ ಮೊದಲ ಪ್ರಕರಣ ಜಪಾನ್‌ನಲ್ಲಿ ಪತ್ತೆಯಾಗಿದೆ ಎಂದು ಆ ರಾಷ್ಟ್ರದ ಆರೋಗ್ಯ ಸಚಿವಾಲಯ ಗುರುವಾರ ದೃಢಪಡಿಸಿದೆ.

ಚೀನಾದಲ್ಲಿ ಇತ್ತೀಚೆಗೆ ಈ ವೈರಸ್ ಪತ್ತೆಯಾಗಿದ್ದು, ಅಲ್ಲಿ 40 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಒಂದು ಸಾವೂ ಕೂಡಾ ಸಂಭವಿಸಿತ್ತು. ಈ ವೈರಸ್​ ಪೀಡಿತ ರೋಗಿಯು ಜಪಾನ್‌ನ ಕನಗಾವಾ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದು, ಆತ ಚೀನಾ ಮೂಲದ ವ್ಯಕ್ತಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ತಿಂಗಳ ಆರಂಭದಲ್ಲಿ ವೈರಸ್​ ಪೀಡಿತ ವ್ಯಕ್ತಿ ಚೀನಾದ ಹುಬೈ ಪ್ರಾಂತ್ಯದ ವುಹಾನ್‌ಗೆ ಭೇಟಿ ನೀಡಿದ್ದರು. ಈ ವೇಳೆ ಈ ವ್ಯಕ್ತಿಗೆ ಕೊರೋನಾ ವೈರಸ್​​​​ ಹರಡಿ ಸೋಂಕು ಕಂಡು ಬಂದಿದೆ ಎಂದು ಜಪಾನ್​ ಸಚಿವರು ಸ್ಪಷ್ಟ ಪಡಿಸಿದ್ದಾರೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫೆಕ್ಷಕ್ಸ್ ಡಿಸೀಸಸ್ ನಡೆಸಿದ ಪರೀಕ್ಷೆಗಳು ಈ ವೈರಸ್​ ಇರುವುದನ್ನು ದೃಢ ಪಡಿಸಿವೆ.

ಈ ರೋಗ ಹರಡಿದ್ದು ಹೇಗೆ? : ರೋಗಿಯು ವುಹಾನ್​​​​​ ಮೀನು ಹಾಗೂ ಸಮುದ್ರಾಹಾರ ಮಾರುಕಟ್ಟೆಗಳಿಗೆ ಭೇಟಿ ನೀಡಿದ ವೇಳೆ ಈ ವೈರಸ್​ ಸೇರಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ರೋಗಿಯು ತಾವು ಯಾವುದೇ ಕಾರಣಕ್ಕೂ ಮಾರುಕಟ್ಟೆಗೆ ಭೇಟಿ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ವಾರದ ಆರಂಭದಲ್ಲಿ ಥಾಯ್ಲೆಂಡ್​​ನಲ್ಲಿ ಚೀನಾ ಹೊರತಾಗಿ ಮೊದಲ ಪ್ರಕರಣ ವರದಿಯಾಗಿತ್ತು. ಈ ಪ್ರಕರಣದ ಬಳಿಕ ಜಪಾನ್​ನಲ್ಲೂ ಈ ಭಯಾನಕ ವೈರಸ್​ ಪತ್ತೆಯಾಗಿದೆ. ಇನ್ನು ದಕ್ಷಿಣ ಕೊರಿಯಾ ಕೂಡ ಅನುಮಾನಾಸ್ಪದ ವೈರಸ್​ ಹರಡುವಿಕೆಯನ್ನ ವರದಿ ಮಾಡಿದೆ.

ಮುನ್ನೆಚ್ಚರಿಕೆ ನೀಡಿದ ಸರ್ಕಾರ: ಅನುಮಾನಾಸ್ಪದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಕಾಣುವಂತೆ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜಪಾನ್​ ಸರ್ಕಾರ ತನ್ನ ಪ್ರಜೆಗಳಿಗೆ ಮನವಿ ಮಾಡಿದೆ.

ಈ ವೈರಸ್​ ಹೇಗೆ ಹರಡುತ್ತೆ:

ಕರೋನವೈರಸ್​ಗಳು ಸಾಮಾನ್ಯವಾಗಿ ಶೀತ-ರೀತಿಯ ರೋಗಲಕ್ಷಣಗಳನ್ನು ಉಂಟುಮಾಡುತ್ತವೆ ಮತ್ತು ಸೀನುವಿಕೆ, ಕೆಮ್ಮು ಅಥವಾ ನೇರ ಸಂಪರ್ಕದ ಮೂಲಕ ಹರಡುತ್ತವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.