ಢಾಕಾ(ಬಾಂಗ್ಲಾದೇಶ) : ಹೋಳಿ ಹಬ್ಬದ ಸಂಭ್ರಮದಲ್ಲಿರುವಾಗಲೇ ಬಾಂಗ್ಲಾದೇಶದ ಢಾಕಾದಲ್ಲಿರುವ ಇಸ್ಕಾನ್ ದೇವಸ್ಥಾನದ ಮೇಲೆ ದಾಳಿ ನಡೆಸಲಾಗಿದೆ. ಸುಮಾರು 200ಕ್ಕೂ ಅಧಿಕ ದುಷ್ಕರ್ಮಿಗಳು ಈ ದುಷ್ಕೃತ್ಯದಲ್ಲಿ ತೊಡಗಿದ್ದರು ಎಂಬ ಮಾಹಿತಿ ದೊರೆತಿದೆ.
ದೇವಸ್ಥಾನ ಧ್ವಂಸ ಮಾಡುತ್ತಿರುವ ಅನೇಕ ವಿಡಿಯೋಗಳು ವೈರಲ್ ಆಗಿದ್ದು, ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಗಳ ಟ್ವಿಟರ್ ಅಕೌಂಟ್ನಲ್ಲೂ ಶೇರ್ ಆಗಿದೆ. ಢಾಕಾದಲ್ಲಿರುವ ಇಸ್ಕಾನ್ ರಾಧಾಕಾಂತ ದೇವಸ್ಥಾನದ ಮೇಲಿನ ದಾಳಿ ಸಂಬಂಧ ಪೊಲೀಸರು ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಹಾಜಿ ಶಫಿವುಲ್ಲಾ ನೇತೃತ್ವದಲ್ಲಿ 200ಕ್ಕೂ ಅಧಿಕ ಮಂದಿ ಮಾರ್ಚ್ 17ರ ರಾತ್ರಿ ಇಸ್ಕಾನ್ ದೇವಸ್ಥಾನದ ಮೇಲೆ ಅಟ್ಯಾಕ್ ಮಾಡಿದ್ದು, ಅಲ್ಲಿನ ಮೂರ್ತಿ, ಹಣ ಸೇರಿದಂತೆ ಬೆಲೆ ಬಾಳುವ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದಾರೆ ಎಂಬ ಆರೋಪವಿದೆ. ಘಟನೆ ವೇಳೆ ಕೆಲ ಭಕ್ತರಿಗೆ ಗಾಯವಾಗಿರುವುದಾಗಿ ವರದಿಯಾಗಿದೆ.
-
The attack on the Radhakanta ISKCON temple in Dhaka is ongoing. The Devotees informed the police but the police are not taking any action. (17-03-22)#savebangladeshihindus pic.twitter.com/QGOuoygmGs
— Voice Of Bangladeshi Hindus 🇧🇩 (@VoiceOfHindu71) March 17, 2022 " class="align-text-top noRightClick twitterSection" data="
">The attack on the Radhakanta ISKCON temple in Dhaka is ongoing. The Devotees informed the police but the police are not taking any action. (17-03-22)#savebangladeshihindus pic.twitter.com/QGOuoygmGs
— Voice Of Bangladeshi Hindus 🇧🇩 (@VoiceOfHindu71) March 17, 2022The attack on the Radhakanta ISKCON temple in Dhaka is ongoing. The Devotees informed the police but the police are not taking any action. (17-03-22)#savebangladeshihindus pic.twitter.com/QGOuoygmGs
— Voice Of Bangladeshi Hindus 🇧🇩 (@VoiceOfHindu71) March 17, 2022
ಇದನ್ನೂ ಓದಿ: ಯೋ ಯೋ ಟೆಸ್ಟ್ನಲ್ಲಿ ಫೇಲ್ ಆದ್ರೂ ಐಪಿಎಲ್‌ನಲ್ಲಿ ಆಡಲು ಅನುಮತಿ ಪಡೆದ ಪೃಥ್ವಿ ಶಾ
ದುಷ್ಕರ್ಮಿಗಳ ದಾಳಿಯನ್ನು ಕೋಲ್ಕತ್ತಾ ಇಸ್ಕಾನ್ ಖಂಡಿಸಿದೆ. ಇಸ್ಕಾನ್ ಉಪಾಧ್ಯಕ್ಷ ರಾಧಾ ರಾಮನ್ ದಾಸ್ ಈ ಕುರಿತು ಮಾತನಾಡಿದ್ದು, ಹೋಳಿ ಹಬ್ಬದ ಮುನ್ನಾದಿನ ಈ ಘಟನೆ ನಡೆದಿದೆ. ಹಿಂದೂಗಳ ಮೇಲೆ ದಾಳಿ ಬಗ್ಗೆ ವಿಶ್ವಸಂಸ್ಥೆ ಮೌನವಾಗಿರುವುದು ಸರಿಯಲ್ಲ. ಬಾಂಗ್ಲಾದೇಶ, ಪಾಕಿಸ್ತಾನದಲ್ಲಿ ವಾಸವಾಗಿರುವ ಹಿಂದೂಗಳ ಮೇಲಿನ ದಾಳಿ ನೋಡಿಯೂ ಸಹ ಅದು ಸುಮ್ಮನಿರುವುದು ನಮಗೆ ಆಶ್ಚರ್ಯ ತಂದಿದೆ ಎಂದಿದ್ದಾರೆ.
ಕಳೆದ ವರ್ಷ ಕೂಡ ದುರ್ಗಾ ಪೂಜೆಯ ಸಂದರ್ಭದಲ್ಲೇ ಇಸ್ಲಾಂ ಮೂಲಭೂತವಾದಿಗಳು ಬಾಂಗ್ಲಾದೇಶದಲ್ಲಿ ದುರ್ಗಾ ದೇವಾಲಯಗಳು ಮತ್ತು ಇಸ್ಕಾನ್ ದೇವಸ್ಥಾನಗಳನ್ನು ಧ್ವಂಸಗೊಳಿಸಿರುವ ಘಟನೆಗಳು ನಡೆದಿದ್ದವು. ಇದಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.