ETV Bharat / international

ಇರಾನ್​​ ಉಪಾಧ್ಯಕ್ಷೆ ಮಸೌಮೆಹ್ ಎಬ್ತೆಕರ್​​​ಗೂ ತಗುಲಿದ ಕೊರೊನಾ - iran coronavirus outbreak

ಇರಾನಿನ ಉಪಾಧ್ಯಕ್ಷೆ ಮಸೌಮೆಹ್ ಎಬ್ಟೆಕರ್ ಅವರು ಕೊರೊನಾ ವೈರಸ್​​​ ಪರೀಕ್ಷೆಗೆ ಒಳಗಾಗಿದ್ದು, ಅವರಿಗೂ ಕೂಡ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.

Iranian Vice President tests positive for coronavirus

author img

By

Published : Feb 28, 2020, 6:24 AM IST

Updated : Feb 28, 2020, 6:35 AM IST

ಟೆಹ್ರಾನ್ (ಇರಾನ್​): ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ವಿಶ್ವದ ಇತರ ದೇಶಗಳಲ್ಲೂ ಆವರಿಸುತ್ತಿದೆ. ಇರಾನ್​ ಉಪಾಧ್ಯಕ್ಷೆ ಮಸೌಮೆಹ್ ಎಬ್ತೆಕರ್ ಅವರಿಗೂ ಕೂಡ ಕೊರೊನಾ ಸೋಂಕು​ ತಗುಲಿದೆ ಎಂದು ವರದಿಯಾಗಿದೆ.

ಇರಾನ್​ ಉಪಾಧ್ಯಕ್ಷೆ ಮಸೌಮೆಹ್ ಎಬ್ತೆಕರ್ ಕೂಡ ಪರೀಕ್ಷೆಗೊಳಗಾಗಿದ್ದು, ವರದಿಯಲ್ಲಿ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ. ಇನ್ನು ಇರಾನ್​ನಲ್ಲಿ ಇದುವರೆಗೆ 26 ಮಂದಿ ಮಾರಣಾಂತಿಕ ಸೋಂಕಿನಿಂದ ಮೃತಪಟ್ಟಿದ್ದಾರೆ. ಅಲ್ಲದೆ 106 ಹೊಸ ಪ್ರಕರಣಗಳು ಸೇರಿದಂತೆ, ಒಟ್ಟಾರೆ 245 ಜನರಲ್ಲಿ ಸೋಂಕು ಕಂಡುಬಂದಿದೆ.

ವೈರಸ್ ಹರಡುವುದನ್ನು ತಡೆಗಟ್ಟಲು ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ಇತರ ಶಿಕ್ಷಣ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಚೀನಾದಲ್ಲಿ ಮೊಟ್ಟಮೊದಲಿಗೆ ಕಂಡು ಬಂದ ಕೊರೊನಾ ವೈರಸ್​ನಿಂದ ಇದುವರೆಗೂ ಅಲ್ಲಿ 2700ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಅಲ್ಲದೆ ವಿಶ್ವದ ಅನೇಕ ದೇಶಗಳಲ್ಲಿ ಸೋಂಕಿಗೆ ಸಾವಿನ ಸಂಖ್ಯೆ ಏರುತ್ತಲೇ ಇದೆ.

Last Updated : Feb 28, 2020, 6:35 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.