ಇಸ್ಲಾಮಾಬಾದ್: ಚಳಿಗಾಲದ ಮುಂಚೆಯೇ ಅಗತ್ಯ ಸಾಮಗ್ರಿಗಳ ತೀವ್ರ ಕೊರತೆಯನ್ನು ಎದುರಿಸುತ್ತಿರುವ ಅಫ್ಘಾನಿಸ್ತಾನಕ್ಕೆ ತಕ್ಷಣದ ಮಾನವೀಯ ಮತ್ತು ಆರ್ಥಿಕ ನೆರವು ನೀಡುವಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಂಗಳವಾರ ಮೊದಲ ಬಾರಿಗೆ ಜಂಟಿಯಾಗಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ದೂರವಾಣಿ ಸಂಭಾಷಣೆಯಲ್ಲಿ ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯನ್ನು ಚರ್ಚಿಸಿದರು ಎಂದು ಪಿಎಂ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಉಭಯ ನಾಯಕರು ಅಫ್ಘಾನಿಸ್ತಾನದ ಅಸ್ಥಿರತೆ ಹೋಗಲಾಡಿಸಲು ಮತ್ತು ಜನರ ಪಲಾಯನ ತಡೆಗಟ್ಟಲು ಮತ್ತು ದೇಶದ ಪುನರ್ನಿರ್ಮಾಣಕ್ಕಾಗಿ ನಿರಂತರ ತೊಡಗಿಸಿಕೊಳ್ಳಲು ಮಾನವೀಯ ಮತ್ತು ಆರ್ಥಿಕ ಸಹಾಯವನ್ನು ಒದಗಿಸಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಉನ್ನತ ಮಟ್ಟದ ಸಭೆಗಾಗಿ ಕತಾರ್‌ನಲ್ಲಿ ತಾಲಿಬಾನ್ ಪ್ರತಿನಿಧಿಗಳನ್ನು ಭೇಟಿ ಮಾಡಿದ ಒಂದು ದಿನದ ನಂತರ ಉಭಯ ನಾಯಕರು ದೂರವಾಣಿಯಲ್ಲಿ ಮಾತನಾಡಿದರು.
ಸೆಪ್ಟೆಂಬರ್‌ನಲ್ಲಿ, ಚೀನಾವು ತಾಲಿಬಾನ್ ಆಡಳಿತದಿಂದ ಸಂಕಷ್ಟಕ್ಕೀಡಾದ ಅಫ್ಘಾನಿಸ್ತಾನಕ್ಕೆ USD 31 ಮಿಲಿಯನ್ ಸಹಾಯಧನ ನೀಡಿದ್ದು, ಇದ್ರಲ್ಲಿ ಆಹಾರ ಪೂರೈಕೆ ಮತ್ತು ವೈದ್ಯಕೀಯ ಸೌಲಭ್ಯ ಸಹ ಸೇರಿದೆ. ಅಂತೆಯೇ, ಪಾಕಿಸ್ತಾನವು ತನ್ನ ಅಂತೆಯೇ, ಪಾಕಿಸ್ತಾನವು ಅಫ್ಘಾನಿಸ್ತಾನಕ್ಕೆ ಅಡುಗೆ ಎಣ್ಣೆ ಮತ್ತು ಔಷಧಗಳಂತಹ ಸರಬರಾಜುಗಳನ್ನು ಕಳುಹಿಸಿದೆ.