ETV Bharat / international

ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ

author img

By

Published : Nov 3, 2020, 5:51 AM IST

ಎಫ್​ಬಿ ಪೋಸ್ಟ್ ವದಂತಿಯಿಂದಾಗಿ ಸ್ಥಳೀಯ ಕೆಲ ಉದ್ರಿಕ್ತರು, ಕ್ಯುಮಿಲ್ಲಾ ಜಿಲ್ಲೆಯ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ.

Hindu homes attacked in Bangladesh
ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ

ಢಾಕಾ: ಬಾಂಗ್ಲಾದೇಶದ ಕ್ಯುಮಿಲ್ಲಾ ಮುರಾದ್‌ನೋಜರ್‌ನಲ್ಲಿ ಫೇಸ್‌ಬುಕ್ ಪೋಸ್ಟ್​​ನಲ್ಲಿ ಇಸ್ಲಾಂ ಧರ್ಮವನ್ನು ನಿಂದಿಸಲಾಗಿದೆ ಎಂಬ ವದಂತಿಗಳು ಹಬ್ಬಿದ್ದರಿಂದ ಉದ್ರಿಕ್ತ ಕೆಲ ಸ್ಥಳೀಯರು, ಹಿಂದೂ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.

ಹಿಂದೂ ಮನೆಗಳ ಮೇಲೆ ಭಾನುವಾರ ದಾಳಿ ಮಾಡಿ, ಬಳಿಕ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಚ್ಯುತಿ ತಂದ ಆರೋಪದಡಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರಲ್ಲಿ ಪುರ್ಬೊ ಧೌರ್​ನಲ್ಲಿರುವ ಶಿಶುವಿಹಾರ ಶಾಲೆಯ ಮುಖ್ಯೋಪಾಧ್ಯಾಯ ಮತ್ತು ಹತ್ತಿರದ ಆಂಡಿಕೋಟ್ ಗ್ರಾಮದ ನಿವಾಸಿ ಸೇರಿದ್ದಾರೆ. ಸ್ಥಳದಲ್ಲಿನ ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ನಂತರ ಕ್ಯುಮಿಲ್ಲಾ ಜಿಲ್ಲೆಯ ಡಿಸಿ ಮೊಹಮದ್ ಅಬುಲ್ ಫಜಲ್ ಮಿರ್ ತಿಳಿಸಿದ್ದಾರೆ.

ಪ್ಯಾರಿಸ್‍ನಲ್ಲಿರುವ ಶಿಕ್ಷಕನ ಶಿರಚ್ಛೇದ ಮಾಡಿ, ಅಮಾನವೀಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್​ರನ್ನು ಫ್ರಾನ್ಸ್​ನಲ್ಲಿ ಬಾಂಗ್ಲಾದೇಶದ ವ್ಯಕ್ತಿಯೊಬ್ಬ ಶ್ಲಾಘಿಸಿದ್ದ ಬಳಿಕ ಈ ದಾಳಿ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.