ETV Bharat / international

Viral Video- ತಾಲಿಬಾನ್​ ಜೊತೆ ಮಾಜಿ ಅಧ್ಯಕ್ಷ ಘನಿ ಸಹೋದರ ಹಷ್ಮತ್ ಮಾತುಕತೆ! - ಅಫ್ಘಾನಿಸ್ತಾನ

ಕುಚೀಸ್​ ಗ್ರ್ಯಾಂಡ್ ಕೌನ್ಸಿಲ್​ನ ಮುಖ್ಯಸ್ಥ ಮತ್ತು ಕಾಬೂಲ್ ಮೂಲದ ದಿ ಘನಿ ಗ್ರೂಪ್​ನ ಅಧ್ಯಕ್ಷ ಹಷ್ಮತ್ ಘನಿ ತಾಲಿಬಾನ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾದ ವಿಡಿಯೋವೊಂದು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

Hashmat Ghani
ಹಷ್ಮತ್ ಮಾತುಕತೆ ವಿಡಿಯೋ ವೈರಲ್​
author img

By

Published : Aug 22, 2021, 12:15 PM IST

Updated : Aug 22, 2021, 12:47 PM IST

ಹೈದರಾಬಾದ್: ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅವರ ಸಹೋದರ ಹಷ್ಮತ್ ಘನಿ ತಾಲಿಬಾನ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ಹರಿದಾಡುತ್ತಿದ್ದಂತೆ ಹಷ್ಮತ್​ ಟ್ವೀಟೊಂದನ್ನು ಮಾಡಿದ್ದಾರೆ.

ಕುಚೀಸ್​ ಗ್ರ್ಯಾಂಡ್ ಕೌನ್ಸಿಲ್​ನ ಮುಖ್ಯಸ್ಥ ಮತ್ತು ಕಾಬೂಲ್ ಮೂಲದ ದಿ ಘನಿ ಗ್ರೂಪ್​ನ ಅಧ್ಯಕ್ಷ ಹಷ್ಮತ್ ಘನಿ ಟ್ವೀಟ್​ ಮಾಡಿದ್ದು, "ನಮ್ಮ ಜನಸಂಖ್ಯೆಯ ಅರ್ಧದಷ್ಟು ಜನರು ದಿನನಿತ್ಯದ ವೇತನವನ್ನು ಅವಲಂಬಿಸಿದ್ದಾರೆ. ಅಗತ್ಯವಿದ್ದಾಗ ಅವರ ಹಣವನ್ನು ತಡೆಯುವುದು ಅನಾಹುತಗಳಿಗೆ ಕಾರಣವಾಗಬಹುದು" ಎಂದು ಹೇಳಿದ್ದಾರೆ.

  • While we have to accept Taliban, it should not be used as the only reason to abandon people of Afghanistan by the West. Half of our population are dependent are daily wages. Freezing their money at the time of need could spell disasters, not just in #AFG for the region.

    — Hashmat Ghani (@GhaniHashmat) August 21, 2021 " class="align-text-top noRightClick twitterSection" data=" ">

ಅಷ್ಟೇ ಅಲ್ಲದೆ, ಇನ್ನೊಂದು ಟ್ವೀಟ್​ನಲ್ಲಿ "ತಾಲಿಬಾನ್ ಭದ್ರತೆಯನ್ನು ತರುವಲ್ಲಿ ಸಮರ್ಥರಾಗಿದ್ದಾರೆ. ಜೊತೆಗೆ ಕ್ರಿಯಾತ್ಮಕ ಸರ್ಕಾರವನ್ನು ನಡೆಸಲು ವಿದ್ಯಾವಂತ ಜನರ ಅಗತ್ಯತೆ ಇದೆ" ಎಂದು ಅವರು ಹೇಳಿದ್ದಾರೆ.

ತಾಲಿಬಾನ್ ನಾಯಕ ಖಲೀಲ್-ಉರ್-ರೆಹಮಾನ್ ಮತ್ತು ಧಾರ್ಮಿಕ ವಿದ್ವಾಂಸ ಮುಫ್ತಿ ಮಹಮೂದ್ ಜಾಕಿರ್ ಜೊತೆ ಹಷ್ಮತ್ ಘನಿ ಇರುವ ವಿಡಿಯೋ ವೈರಲ್​ ಆಗಿತ್ತು.

  • taliban are well capable of brining security but running a functional government require the input and collaboration of younger educated afghans .the so called expired politicians should be sidelined completely so failed experience of coalition government is not repeated

ತಾಲಿಬಾನ್​ ಕಾಬೂಲನ್ನು ವಶಪಡಿಸಿಕೊಂಡ ತಕ್ಷಣ, ಅಶ್ರಫ್ ಘನಿ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದ್ದರು. ಆ ಬಳಿಕ ಯುಎಇಯಲ್ಲಿ ಆಶ್ರಯ ಪಡೆದಿರುವ ಘನಿ, ಅಫ್ಘಾನಿಸ್ತಾನಕ್ಕೆ ಮರಳಲು ತಾಲಿಬಾನ್​ಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Last Updated : Aug 22, 2021, 12:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.