ETV Bharat / international

ಅರ್ಧದಷ್ಟು ಯುವಕರಿಗೆ ಒಂದು ವರ್ಷದಲ್ಲಿ ಉದ್ಯೋಗ ಕಳೆದುಕೊಳ್ಳುವ ಚಿಂತೆ: ವಿಶ್ವ ಆರ್ಥಿಕ ವೇದಿಕೆ

ಕೊರೊನಾ ಬಿಕ್ಕಟ್ಟಿನಿಂದ ಜಾಗತಿಕವಾಗಿ ಸಾಕಷ್ಟು ಉದ್ಯೋಗಗಳು ನಷ್ಟವಾಗಿದ್ದು, ಅರ್ಧಕ್ಕಿಂತಲೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ವಿಶ್ವ ಆರ್ಥಿಕ ವೇದಿಕೆ ನಡೆಸಿದ ಸಮೀಕ್ಷೆಯೊಂದು ಬಹಿರಂಗಪಡಿಸಿದೆ

wef
ವಿಶ್ವ ಆರ್ಥಿಕ ವೇದಿಕೆ
author img

By

Published : Oct 21, 2020, 7:39 PM IST

ನವದೆಹಲಿ: ಕೊರೊನಾ ಬಿಕ್ಕಟ್ಟಿನಿಂದಾಗಿ ವಿಶ್ವದಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಯುವಜನರು ತಮ್ಮ ಉದ್ಯೋಗದ ಬಗ್ಗೆ ಚಿಂತಿಸುತ್ತಿದ್ದು, ಮುಂದಿನ 12 ತಿಂಗಳಲ್ಲಿ ತಮ್ಮ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ವಿಶ್ವ ಆರ್ಥಿಕ ವೇದಿಕೆ ನಡೆಸಿದ ಆನ್​ಲೈನ್​ ಸಮೀಕ್ಷೆಯಾದ 'ಜಾಬ್​ ರಿಸೆಟ್​ ಸಮ್ಮಿಟ್'ನ ವರದಿಯಲ್ಲಿ ಹೇಳಿದೆ.

ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿರುವ ಶೇಕಡಾ 57ರಷ್ಟು ಮಂದಿ ಭಾರತದಲ್ಲಿದ್ದಾರೆ. ಇವರಲ್ಲಿ 3ನೇ ಎರಡರಷ್ಟು ಮಂದಿ ತಮಗೆ ಮತ್ತೊಮ್ಮೆ ಉದ್ಯೋಗ ದೊರಕಿಸಿಕೊಳ್ಳುವ ಭರವಸೆಯಲ್ಲಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಈ ಸಮೀಕ್ಷೆಯಲ್ಲಿ ವಿವಿಧ ರೀತಿಯ ಅಂಕಿ - ಅಂಶಗಳು ಬಹಿರಂಗವಾಗಿವೆ. ಸಮೀಕ್ಷೆಯ ವರದಿಯಂತೆ ರಷ್ಯಾದಲ್ಲಿ ನಾಲ್ವರಲ್ಲಿ ಮೂವರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದರೆ, ಜರ್ಮನಿಯಲ್ಲಿ ನಾಲ್ವರಲ್ಲಿ ಓರ್ವನಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿಯಿದೆ.

ಭಾರತದಲ್ಲಿ ಶೇಕಡಾ 57ರಷ್ಟು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದು, ಇದರಲ್ಲಿ ಶೇಕಡಾ 25ರಷ್ಟು ಮಂದಿ ಅತಿ ಹೆಚ್ಚು ಭೀತಿ ಎದುರಿಸುತ್ತಿದ್ದು, ಶೇಕಡಾ 31ರಷ್ಟು ಮಂದಿ ಸ್ವಲ್ಪ ಮಟ್ಟಿಗೆ ಭೀತಿ ಎದುರಿಸುತ್ತಿದ್ದಾರೆ.

27 ರಾಷ್ಟ್ರಗಳ 12 ಸಾವಿರ ಉದ್ಯೋಗಸ್ಥ ಯುವಕರನ್ನು ಸಮೀಕ್ಷೆಗೆ ಒಣಪಡಿಸಿದ್ದು, ರಷ್ಯಾದಲ್ಲಿ ಶೇಕಡಾ 75, ಸ್ಪೇನ್​ನಲ್ಲಿ ಶೇಕಡಾ 73, ಮಲೇಷ್ಯಾದಲ್ಲಿ ಶೇಕಡಾ 71, ಜರ್ಮನಿಯಲ್ಲಿ ಶೇಕಡಾ 26, ಸ್ವೀಡನ್​ನಲ್ಲಿ ಶೇಕಡಾ 30, ಅಮೆರಿಕ ಹಾಗೂ ನೆದರ್​ಲ್ಯಾಂಡ್​​ನಲ್ಲಿ ಶೇಕಡಾ 36ರಷ್ಟು ಮಂದಿ ಉದ್ಯೋಗ ನಷ್ಟದ ಭೀತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ವಿಶ್ವದಲ್ಲಿ ಶೇಕಡಾ 67ರಷ್ಟು ಮಂದಿ ಭವಿಷ್ಯದಲ್ಲಿ ಉದ್ಯೋಗ ಪಡೆಯಲು ಹೊಸ ಕೌಶಲ್ಯಗಳ ಅನಿವಾರ್ಯತೆ ಇದೆ ಎಂದು ಭಾವಿಸಿದ್ದಾರೆ. ಸ್ಪೇನ್​ನಲ್ಲಿ 10 ಉದ್ಯೋಗಿಗಳಲ್ಲಿ 9 ಉದ್ಯೋಗಿಗಳು ಹೊಸ ಕೌಶಲ್ಯ ಅನಿವಾರ್ಯ ಎಂದು ಒಪ್ಪಿಕೊಂಡಿದ್ದಾರೆ. ಜಪಾನ್​​ , ಸ್ವೀಡನ್, ರಷ್ಯಾದಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಈ ಮಾತನ್ನು ಒಪ್ಪುತ್ತಾರೆ.

ಹೊಸ ಉದ್ಯೋಗ ಪಡೆಯಲು ಕೌಶಲ್ಯ ವೃದ್ಧಿಸಿಕೊಳ್ಳುವ ಸಾಮರ್ಥ್ಯ ಸ್ಪೇನ್ ಶೇಕಡಾ 86, ಪೆರುವಿನಲ್ಲಿ ಶೇಕಡಾ 84, ಮೆಕ್ಸಿಕೋದಲ್ಲಿ ಶೇಕಡಾ 83, ಜಪಾನ್​ನಲ್ಲಿ ಶೇಕಡಾ 45, ಸ್ವೀಡನ್​ನಲ್ಲಿ ಶೇಕಡಾ 46, ರಷ್ಯಾದಲ್ಲಿ ಶೇಕಡಾ 48 ರಷ್ಟಿದೆ. ಈ ವಿಚಾರದಲ್ಲಿ ಭಾರತ ಮುಂದಿದ್ದು, ಶೇಕಡಾ 80ರಷ್ಟು ಮಂದಿ ಕೌಶಲ್ಯ ವೃದ್ಧಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ.

ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ, ಈ ಬಾರಿ ಉದ್ಯೋಗ ಸೃಷ್ಟಿಯ ಪ್ರಮಾಣ ತೀವ್ರವಾಗಿ ಕುಸಿದಿದೆ. ಇದು ಈಗಿರುವ ಉದ್ಯೋಗದ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರ್ಥಿಕ ವೇದಿಕೆಯ ವ್ಯವಸ್ಥಾಪಕ ನಿರ್ದೇಶಕ ಸಾಡಿಯಾ ಜಾಹೀದ್​ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.