ETV Bharat / international

ಬೋಯಿಂಗ್​ 737 ಮ್ಯಾಕ್ಸ್​ 8 ವಿಮಾನ ಸುರಕ್ಷತೆ ಅಪಸ್ವರ... ಹಾರಾಟ ಸ್ಥಗಿತ

ಚೀನಾದ ನಾಗರಿಕ ವಿಮಾನಯಾನ ಪ್ರಾಧಿಕಾರವು 100 ಬೊಯಿಂಗ್‌ 737 ಮ್ಯಾಕ್ಸ್‌ 8 ವಿಮಾನಗಳು ಎಷ್ಟು ಸುರಕ್ಷಿತ ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದು, ತನ್ನ ದೇಶದ ವಿಮಾನಯಾನ ಸಂಸ್ಥೆಗಳಿಗೆ ಬಿ- 737–8 ಮ್ಯಾಕ್ಸ್‌ ವಿಮಾನಗಳ ಹಾರಾಟ ಸ್ಥಗಿತಗೊಳಿಸುವಂತೆ ಆದೇಶಿಸಿದೆ

crash
author img

By

Published : Mar 12, 2019, 1:56 PM IST

ಬೀಜಿಂಗ್‌: ಇಥಿಯೋಪಿಯಾದ ಬೋಯಿಂಗ್‌ 737 ಮ್ಯಾಕ್ಸ್‌ ವಿಮಾನ ಪತನಗೊಂಡ ನಂತರ ಅದರ ವಿಮಾನಗಳ ಹಾರಾಟ ಸುರಕ್ಷತೆ ಬಗ್ಗೆ ಹಲವು ದೇಶಗಳು ಅಪಸ್ವರ ಎತ್ತಿವೆ.

ಚೀನಾದ ನಾಗರಿಕ ವಿಮಾನಯಾನ ಪ್ರಾಧಿಕಾರವು 100 ಬೊಯಿಂಗ್‌ 737 ಮ್ಯಾಕ್ಸ್‌ 8 ವಿಮಾನಗಳು ಎಷ್ಟು ಸುರಕ್ಷಿತ ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದು, ತನ್ನ ದೇಶದ ವಿಮಾನಯಾನ ಸಂಸ್ಥೆಗಳಿಗೆ ಬಿ- 737–8 ಮ್ಯಾಕ್ಸ್‌ ವಿಮಾನಗಳ ಹಾರಾಟ ಸ್ಥಗಿತಗೊಳಿಸುವಂತೆ ಆದೇಶಿಸಿದೆ. ಇದರ ಜೊತೆಗೆ ಇಂಡೋನೇಷ್ಯಾ ಮತ್ತು ಇಥಿಯೋಪಿಯಾ ಕೂಡ ಸುರಕ್ಷತೆಯ ವರದಿ ನೀಡುವಂತೆ ಸೂಚಿಸಿವೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾದ ಲಯನ್‌ ಏರ್‌ ಸಂಸ್ಥೆಯ ಬಿ- 737 ಮ್ಯಾಕ್ಸ್‌ ವಿಮಾನವು ಪತನಗೊಂಡಿತ್ತು. ಜಕಾರ್ತಾದಿಂದ ಹೊರಟಿದ್ದ ವಿಮಾನವು ಪತನಗೊಂಡುದ್ದು, ವಿಮಾನದಲ್ಲಿದ್ದ 189 ಜನರು ಸಾವಿಗೀಡಾದರು.

ಇಥೋಪಿಯನ್‌ ಏರ್‌ಲೈನ್ಸ್‌ ಕೂಡ ಮ್ಯಾಕ್ಸ್‌ 8 ವಿಮಾನ ಗಳ ಹಾರಾಟ ಸ್ಥಗಿತ ಪಡಿಸಿ, ಮುಂದಿನ ಸೂಚನೆಯವರೆಗೂ ವಿಮಾನಗಳು ಹಾರಾಟ ನಡೆಸುವುದಿಲ್ಲ ಎಂದಿದೆ. ಈವರೆಗೆ ಬೋಯಿಂಗ್‌ ಸಂಸ್ಥೆ 350ಕ್ಕೂ ಹೆಚ್ಚು ಬಿ–737 ಮ್ಯಾಕ್ಸ್‌ ವಿಮಾನಗಳನ್ನು ಹಲವು ರಾಷ್ಟ್ರಗಳ ವಿಮಾನಯಾನ ಸಂಸ್ಥೆಗಳಿಗೆ ಮಾರಾಟ ಮಾಡಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.