ETV Bharat / international

ಕರಾಚಿ ಶ್ವೇತಭವನದಲ್ಲಿ ದಾವೂದ್ ಇಬ್ರಾಹಿಂ ವಾಸ: ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್​ - ಉಗ್ರ ಸಂಘಟನೆ

ಹಲವು ವರ್ಷಗಳಿಂದ ದಾವೂದ್​ ವಿಚಾರವಾಗಿ ಸುಳ್ಳು ಹೇಳುತ್ತಿದ್ದ ಪಾಕ್​ ಸರ್ಕಾರ ಕೊನೆಗೂ ಸತ್ಯ ಬಾಯ್ಬಿಟ್ಟಿದೆ.

Dawood Ibrahim
Dawood Ibrahim
author img

By

Published : Aug 22, 2020, 8:07 PM IST

ಕರಾಚಿ: ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ, 1993 ಮುಂಬೈ ಸರಣಿ ಬಾಂಬ್​ ಸ್ಫೋಟದ ರೂವಾರಿ ದಾವೂದ್​ ಇಬ್ರಾಹಿಂ ಕರಾಚಿಯಲ್ಲಿರುವುದಾಗಿ ಅಲ್ಲಿನ ಸರ್ಕಾರ ಒಪ್ಪಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಪಾಕ್​ ವಿದೇಶಾಂಗ ಸಚಿವ ಮೆಹಮೂದ್ ಖುರೇಷಿ, ಉಗ್ರ ಸಂಘಟನೆ 88 ನಾಯಕರ ಲಿಸ್ಟ್​ ರಿಲೀಸ್​ ಮಾಡಿದ್ದು,ಅದರಲ್ಲಿ ಭೂಗತ ಪಾತಕಿಯ ಹೆಸರಿದೆ.

ಪಾಕಿಸ್ತಾನದಲ್ಲಿ 88 ಉಗ್ರ ಸಂಘಟನೆಗಳ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರಿ ಆದೇಶ ಹೊರಡಿಸಲಾಗಿದ್ದು, ಅದರ ಮುಖಂಡರಿಗೆ ಪತ್ರದ ಮೂಲಕ ತಿಳಿಸಲಾಗುತ್ತಿದೆ. ಇದರಲ್ಲಿ ಕರಾಚಿಯಲ್ಲಿರುವ ದಾವೂದ್ ಇಬ್ರಾಹಿಂಗೂ ಪತ್ರ ರವಾನೆಯಾಗಿದೆ. ಪಾಕ್​​ ಸರ್ಕಾರದಿಂದಲೇ ಅಲ್ಲಿನ ಉಗ್ರ ಸಂಘಟನೆಗಳಿಗೆ ಹಣ ರವಾನೆಯಾಗುತ್ತಿದ್ದು, ಇದೀಗ ಅದಕ್ಕೆ ಕಡಿವಾಣ​ ಹಾಕುವ ವಿಚಾರವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್, ಜೆಎಂನ ಮೊಹಮ್ಮದ್ ಮಸೂದ್ ಅಜರ್ ಮತ್ತು ಜಕಿಯೂರ್ ರೆಹಮಾನ್ ಲಖ್ವಿ, ದಾವೂದ್​ ಇಬ್ರಾಹಿಂ ಸೇರಿದಂತೆ ಭಯೋತ್ಪಾದಕ ಮುಖಂಡರ ಹೆಸರು ಪಟ್ಟಿಯಲ್ಲಿದೆ. ಲಭ್ಯವಾಗಿರುವ ವರದಿಗಳ ಪ್ರಕಾರ ದಾವೂದ್ ಇಬ್ರಾಹಿಂ ಕರಾಚಿಯ ಶ್ವೇತಭವನದಲ್ಲಿ ವಾಸಿಸುತ್ತಿದ್ದು, ಮನೆ ಸಂಖ್ಯೆ 37, ರಸ್ತೆ ಸಂಖ್ಯೆ 30, ವಸತಿ ಪ್ರಾಧಿಕಾರ, ಕರಾಚಿ ಎಂದು ಉಲ್ಲೇಖಗೊಂಡಿದೆ.

ಕಳೆದ ಕೆಲ ದಿನಗಳ ಹಿಂದೆ ದಾವೂದ್​ ಇಬ್ರಾಹಿಂಗೆ ಕೊರೊನಾ ಸೋಂಕು ಇರುವುದು ಕನ್ಫರ್ಮ್​ ಆಗಿತ್ತು. ಅವರಿಗೆ ಅಲ್ಲಿನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.