ETV Bharat / international

ಚೀನಾದ ಕೋವಿಡ್‌ ಲಸಿಕೆ ಸಿನೋವ್ಯಾಕ್‌ ಒಮಿಕ್ರಾನ್‌ಗೆ ಪರಿಣಾಮಕಾರಿಯಲ್ಲ - ಅಧ್ಯಯನದ ವರದಿ - Chinese vaccine Sinovac no match against Omicron variant says Study

ಚೀನಾದ ಕೋವಿಡ್‌ ಲಸಿಕೆ ಸಿನೋವ್ಯಾಕ್‌ ಒಮಿಕ್ರಾನ್‌ ವೈರಸ್‌ ಅನ್ನು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಉತ್ಪಾದಿಸುವುದಿಲ್ಲ ಎಂದು ಯೇಲ್‌ ವಿವಿ ಹಾಗೂ ಡೊಮಿನಿಕನ್‌ ರಿಪಬ್ಲಿಕ್‌ನ ಅಧ್ಯಯನವೊಂದು ತಿಳಿಸಿದೆ..

Chinese vaccine Sinovac no match against Omicron variant: Study
ಚೀನಾದ ಕೋವಿಡ್‌ ಲಸಿಕೆ ಸಿನೋವ್ಯಾಕ್‌ ಒಮಿಕ್ರಾನ್‌ಗೆ ಪರಿಣಾಮಕಾರಿಯಲ್ಲ - ಅಧ್ಯಯನ
author img

By

Published : Jan 22, 2022, 12:17 PM IST

ನವದೆಹಲಿ : ಜಗತ್ತಿನ 48 ದೇಶಗಳಿಂದ ಕೋಟ್ಯಂತರ ಮಂದಿ ಚೀನಾ ಕೋವಿಡ್‌ಗೆ ಅಭಿವೃದ್ಧಿಪಡಿಸಿರುವ ಸಿನೆೋವ್ಯಾಕ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಆದರೆ, ಈ ಲಸಿಕೆ ಒಮಿಕ್ರಾನ್‌ಗೆ ಯಾವುದೇ ರೀತಿಯಲ್ಲೂ ಪರಿಣಾಮಕಾರಿಯಲ್ಲ ಎಂದು ಅಧ್ಯಯನವೊಂದು ಹೇಳಿದೆ.

ನೇಚರ್‌ ಮೆಡಿಸಿನ್‌ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಈ ಮಾಹಿತಿ ತಿಳಿದು ಬಂದಿದೆ. ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಸಿನೋವ್ಯಾಕ್‌ ಎರಡು ಡೋಸ್‌ಗಳನ್ನು ಪಡೆದಿದ್ದ 101 ಮಂದಿಯ ರಕ್ತದ ಸೀರಮ್‌ ಪಡೆದು ಸಂಶೋಧನೆ ನಡೆಸಿದಾಗ ದೇಹದಲ್ಲಿ ಒಮಿಕ್ರಾನ್‌ ಸೋಂಕು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಉತ್ಪಾದಿಸುವುದಿಲ್ಲ ಎಂಬುದನ್ನು ತೋರಿಸಿದೆ.

ಒಮಿಕ್ರಾನ್‌ ವಿರುದ್ಧ ಫಿಜರ್‌-ಬಯೋಟೆಕ್‌ನ ಎಂಆರ್‌ಎನ್‌ಎ ಬೂಸ್ಟರ್‌ ಲಸಿಕೆ ಹಾಗೂ ಸಿನೋವ್ಯಾಕ್‌ ಎರಡರ ಫಲಿತಾಂಶಗಳು ಒಂದೇಯಾಗಿದೆ ಎಂದು ಎಂದು ಯೇಲ್ ವಿಶ್ವವಿದ್ಯಾಲಯ ಹಾಗೂ ಡೊಮಿನಿಕನ್‌ ರಿಪಬ್ಲಿಕ್‌ ತಿಳಿಸಿದೆ. ಮತ್ತೊಂದು ಅಧ್ಯಯನದಲ್ಲಿ mRNA ಲಸಿಕೆ ಸೀಮಿತ ರಕ್ಷಣೆ ನೀಡಲಿದೆ ಎಂದು ಹೇಳಿದೆ.

SARS-Cov-2 ವೈರಸ್‌ನ ಹಿಂದಿನ ತಳಿಗಳ ಸೋಂಕಿಗೆ ಒಳಗಾದ ವ್ಯಕ್ತಿಗಳು ಒಮಿಕ್ರಾನ್ ವಿರುದ್ಧ ಕಡಿಮೆ ರಕ್ಷಣೆಯನ್ನು ನೀಡಿದೆ ಎಂದು ವಾಲ್ಡೆಮರ್ ವಾನ್ ಜೆಡ್‌ಟ್ವಿಟ್ಜ್ ಇಮ್ಯುನೊಬಯಾಲಜಿ ಪ್ರಾಧ್ಯಾಪಕ ಹಾಗೂ ಹಿರಿಯ ಲೇಖಕ ಅಕಿಕೊ ಇವಾಸಾಕಿ ಹೇಳಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.