ಬೀಜಿಂಗ್ : ಕೆಂಪು ಗ್ರಹದ ಮೇಲ್ಮೈಯಲ್ಲಿ ಮತ್ತೊಂದು ಬಾಹ್ಯಾಕಾಶ ನೌಕೆಯನ್ನು ಕೆಳಗಿಳಿಸುವ ಅಮೆರಿಕದ ಪ್ರಯತ್ನಕ್ಕೆ ಒಂದು ವಾರ ಮುಂಚಿತವಾಗಿ ಚೀನಾದ ಬಾಹ್ಯಾಕಾಶ ನೌಕೆ ಮಂಗಳನ ಸುತ್ತ ಕಕ್ಷೆಗೆ ಪ್ರವೇಶಿಸಲು ಸಿದ್ಧವಾಗಿದೆ.
ಟಿಯಾನ್ವೆನ್-1 ಎಂದು ಹೆಸರಿಸಲಾದ ಚೀನಾದ ಆರ್ಬಿಟರ್-ರೋವರ್ ಕಾಂಬೊ 470 ಮಿಲಿಯನ್ ಕಿಲೋಮೀಟರ್ (290 ಮಿಲಿಯನ್ ಮೈಲಿ) ಪ್ರಯಾಣಕ್ಕೆ ಆರು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ.
ಇದನ್ನೂ ಓದಿ: ಮೊದಲ ಮಗುವಿಗೆ ಜನ್ಮ ನೀಡಿದ ರಾಜಕುಮಾರಿ ಯುಜಿನಿ.. ಸಂತಸದಲ್ಲಿ ಬ್ರಿಟನ್ ರಾಜ ಕುಟುಂಬ!
ಕಳೆದ ವರ್ಷ ಜುಲೈನಲ್ಲಿ ಈ ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಐದು ಟನ್ ತೂಕದ ಟಿಯಾನ್ವೆನ್ -1 ನೌಕೆ, ರೋವರ್ ಮತ್ತು ಲ್ಯಾಂಡರ್‌ನ ಒಳಗೊಂಡಿದ್ದು, ಮಂಗಳನ ಮಣ್ಣಿನ ಬಗ್ಗೆ ಅಧ್ಯಯನ ನಡೆಸಲಿದೆ.