ETV Bharat / international

ಮಕ್ಕಳ ಲೊಕೇಷನ್ ಟ್ರ್ಯಾಕ್ ಮಾಡಲು ಹೊಸ ಐಡಿಯಾ... ಏನು ಹೊಸ ಐಡಿಯಾ?

ಈ ವಾಚ್​ನ ಸಹಾಯದಿಂದ ಮಕ್ಕಳಿರುವ ಸ್ಥಳವನ್ನು ಪೋಷಕರು ನೋಡಿಕೊಳ್ಳಬಹುದು. ಜೊತೆಗೆ ತುರ್ತು ಪರಿಸ್ಥಿತಿಯಿದ್ದರೆ, ಮಕ್ಕಳು ಪೋಷಕರಿಗೆ ಸೂಚನೆ ನೀಡಬಹುದು.

smartwatch
author img

By

Published : Jul 19, 2019, 5:36 PM IST

ಗ್ವಾಂಗ್​ಜೌ (ಚೀನಾ): ತಮ್ಮ ಮಕ್ಕಳ ಚಲನ - ವಲನಗಳ ಕುರಿತು ಪೋಷಕರು ನಿಗಾ ಇರಿಸುವುದಕ್ಕಾಗಿ ಚೀನಾ ಸರ್ಕಾರ ಹೊಸ ಕ್ರಮ ಕೈಗೊಂಡಿದೆ. ಅದೇನೆಂದರೆ 60 ಪ್ರಾಥಮಿಕ ಶಾಲೆಯ ಒಟ್ಟು 17,000 ವಿದ್ಯಾರ್ಥಿಗಳಿಗೆ ಜಿಪಿಎಸ್ ಅಳವಡಿತ ಸ್ಮಾರ್ಟ್​ವಾಚ್​ಗಳನ್ನು ನೀಡಿದೆ.

ಈ ವಾಚ್​ಗಳನ್ನು "ಸೇಫ್ ಕ್ಯಾಂಪಸ್ ಸ್ಮಾರ್ಟ್​ವಾಚ್" ಎಂದು ಕರೆಯಲಾಗುತ್ತಿದೆ. ಚೀನಾದ ಹೊಸ ತಂತ್ರಜ್ಞಾನದ ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಮ್ ಬೀಡೌ(BeiDou)ಗೆ ಈ ವಾಚ್​ಗಳನ್ನು ಇವುಗಳನ್ನು ಲಿಂಕ್ ಮಾಡಲಾಗಿದ್ದು, ಅವುಗಳನ್ನು ಧರಿಸಿರುವ ಮಕ್ಕಳನ್ನು 10 ಮೀಟರ್​ ಒಳಗೆ ಟ್ರ್ಯಾಕ್ ಮಾಡಬಹುದು.

ಈ ವಾಚ್​ನ ಸಹಾಯದಿಂದ ತಮ್ಮ ಮಕ್ಕಳ ಚಲನ-ವಲನ ಹಾಗೂ ಮಕ್ಕಳಿರುವ ಸ್ಥಳವನ್ನು ಪೋಷಕರು ನೋಡಿಕೊಳ್ಳಬಹುದು. ಜೊತೆಗೆ ತುರ್ತು ಪರಿಸ್ಥಿತಿಯಿದ್ದರೆ, ಮಕ್ಕಳು ಪೋಷಕರಿಗೆ ಸೂಚನೆ ನೀಡಬಹುದು.

ನೀರಿನಿಂದಾಗುವ ಅಪಾಯವನ್ನು ತಡೆಯಲು ಈ ವಾಚ್ ಸಹಾಯಕ. ಮಕ್ಕಳು ನೀರಿನ ಮೂಲಗಳು ಅಥವಾ ಅಧಿಕ ನೀರಿರುವ ಪ್ರದೇಶಗಳ ಬಳಿ ಹೋದರೆ, ಈ ವಾಚ್ ಪೋಷಕರಿಗೆ ಎಚ್ಚರಿಕೆಯ ನೋಟಿಫಿಕೇಷನ್ ಕಳುಹಿಸುತ್ತದೆ.

ಇಂಟರ್​ನ್ಯಾಷನಲ್ ಡಾಟಾ ಕಾರ್ಪೊರೇಷನ್ (IDC) ವರದಿ ಪ್ರಕಾರ, 2019ರಲ್ಲಿ ಈ ವಾಚ್​ಗೆ ಭಾರೀ ಬೇಡಿಕೆಯಿದ್ದು, 222.9 ಮಿಲಿಯನ್​ನಷ್ಟು ವಾಚ್​ಗಳು ಗ್ರಾಹಕರನ್ನು ತಲುಪುವ ನಿರೀಕ್ಷೆಯಿದೆ.

Intro:Body:

international

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.