ಬೀಜಿಂಗ್: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೋವಿಡ್-19 (ಕೊರೊನಾ ವೈರಸ್) ಗೆ ಬಲಿಯಾದವರ ಸಂಖ್ಯೆ 1,770ಕ್ಕೆ ಏರಿಕೆಯಾಗಿದ್ದು, ಭಾನುವಾರ ಒಂದೇ ದಿನ 105 ಜನ ಸಾವನ್ನಪ್ಪಿದ್ದಾಗಿ ವರದಿಯಾಗಿದೆ.
2,048 ಹೊಸ ಪ್ರಕರಣಗಳು ವರದಿಯಾಗಿದ್ದು, ಈವರೆಗೆ ಒಟ್ಟು 70,548 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿನಿಂದ ಬಳಲುತ್ತಿದ್ದ 10,844 ಮಂದಿ ಗುಣಮುಳರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇನ್ನು ಜಪಾನ್ ಬಂದರಿಗೆ ಬಂದ ನಿರ್ಬಂಧಿತ ಕ್ರೂಸ್ನಲ್ಲಿ 355 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಸೂರ್ಯೋದಯದ ನಾಡಲ್ಲಿ ಒಟ್ಟು 413 ಪ್ರಕರಣಗಳು, ಒಂದು ಸಾವು ವರದಿಯಾದಂತಾಗಿದೆ.