ಯಾಂಗೋನ್(ಮ್ಯಾನ್ಮಾರ್) : ಗಣಿಯೊಂದರಲ್ಲಿ ಭೂಕುಸಿತ ಉಂಟಾಗಿ ಸುಮಾರು 70 ಮಂದಿ ಕಾಣೆಯಾಗಿದ್ದಾರೆ ಎಂದು ಎಎಫ್ಬಿ ವರದಿ ಮಾಡಿದೆ. ಹಪ್ಕಂತ್ನಲ್ಲಿರುವ ಪಚ್ಚೆ ಕಲ್ಲಿನ ಗಣಿಯಲ್ಲಿ ಅವಘಡ ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉತ್ತರ ಮ್ಯಾನ್ಮಾರ್ನ ಕಚಿನ್ ರಾಜ್ಯದಲ್ಲಿ ಈ ಗಣಿ ಇದೆ. ಓರ್ವ ವ್ಯಕ್ತಿ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ರಕ್ಷಣಾ ಸಿಬ್ಬಂದಿಯನ್ನು ಉಲ್ಲೇಖಿಸಿ ಎಎಫ್ಬಿ ವರದಿ ಮಾಡಿದೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
2020ರ ಜುಲೈ ತಿಂಗಳಲ್ಲೂ ಇದೇ ಗಣಿಯಲ್ಲಿ ಭೂಕುಸಿತ ಉಂಟಾಗಿ ಕನಿಷ್ಠ ನೂರು ಮಂದಿ ಬಲಿಯಾಗಿದ್ದರು. ಪಚ್ಚೆ ಕಲ್ಲುಗಳು ನೈಸರ್ಗಿಕವಾಗಿ ಸಿಗುವ ಖನಿಜಗಳಾಗಿವೆ. ಆಭರಣಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ.
ಹಸಿರು ಬಣ್ಣದ ಪಚ್ಚೆ ಕಲ್ಲು ಹೆಚ್ಚು ಜನಪ್ರಿಯವಾಗಿದ್ದು, ಇತರ ಬಣ್ಣಗಳಲ್ಲಿ ಅಂದರೆ ಸಾಮಾನ್ಯವಾಗಿ ಹಳದಿ ಮತ್ತು ಬಿಳಿ ಬಣ್ಣಗಳಲ್ಲೂ ಕಂಡು ಬರುತ್ತವೆ.
ಇದನ್ನೂ ಓದಿ: ಚಂಡಮಾರುತಕ್ಕೆ ತತ್ತರಿಸಿದ ಫಿಲಿಪ್ಪಿನ್ಸ್... ಸಾವಿನ ಸಂಖ್ಯೆ 375ಕ್ಕೇರಿಕೆ!