ETV Bharat / international

ಕಾಬೂಲ್​ ಬಾಂಬ್​ ಸ್ಪೋಟ : ಪಾದ್ರಿ ಸೇರಿ ಇಬ್ಬರ ದುರ್ಮರಣ - ಕಾಬೂಲ್ ಸ್ಫೋಟದಲ್ಲಿ ಸಾವಿನ ಸಂಖ್ಯೆ ಹೆಚ್ಚಳ

ಅಫ್ಘಾನ್ ರಾಜಧಾನಿ ಕಾಬೂಲ್‌ನಲ್ಲಿ ಇತ್ತೀಚಿಗೆ ತಾಲಿಬಾನ್ ದಾಳಿಯೂ ಹೆಚ್ಚುತ್ತಿದ್ದು, ಪ್ರಮುಖವಾಗಿ ಸರ್ಕಾರಿ ಅಧಿಕಾರಿಗಳು, ನಾಗರಿಕ ಸಮಾಜದ ಮುಖಂಡರು ಹಾಗೂ ಪತ್ರಕರ್ತರನ್ನು ಗುರಿಯಾಗಿಸಿ ಕೊಲ್ಲಲಾಗುತ್ತಿದೆ ಎಂಬುದು ತಿಳಿದುಬಂದಿದೆ. ಆದರೆ, ಇದುವರೆಗೂ ಬಾಂಬ್​ ದಾಳಿಯ ಹೊಣೆಗಾರಿಕೆಯನ್ನು ಯಾವುದೇ ಸಂಘಟನೆಗಳೂ ಹೊತ್ತಿಲ್ಲ..

afghan-officials-bombings-in-kabul-kill-2-including-cleric
ಕಾಬೂಲ್​ ಬಾಂಬ್​ ಸ್ಪೋಟ
author img

By

Published : Feb 2, 2021, 8:16 PM IST

ಕಾಬೂಲ್ ​: ಅಫ್ಘಾನ್ ರಾಜಧಾನಿ ಕಾಬೂಲ್​ನಲ್ಲಿ ನಡೆದ ಬಾಂಬ್​ ದಾಳಿಯಲ್ಲಿ ಇಸ್ಲಾಮಿಸ್ಟ್ ಸಂಘಟನೆಯ ಮುಖ್ಯಸ್ಥರಾಗಿರುವ ಪ್ರಮುಖ ಪಾದ್ರಿ ಸೇರಿದಂತೆ ಕನಿಷ್ಠ ಇಬ್ಬರು ಮೃತರಾಗಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟದ ಕುರಿತು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಮಾತನಾಡಿ, ಪಾದ್ರಿಯ ಸಾವನ್ನು "ಅಫ್ಘಾನಿಸ್ತಾನದ ಘನತೆ ಮತ್ತು ಉಜ್ವಲ ಭವಿಷ್ಯದ ಮೇಲಿನ ಭಯೋತ್ಪಾದಕ ದಾಳಿ" ಎಂದು ಖಂಡಿಸಿದ್ದಾರೆ.

ಮೊದಲ ಬಾಂಬ್‌ನ ಕಾಬೂಲ್‌ನ ಕೇಂದ್ರ ಮಿಲಿಟರಿ ವಾಹನಕ್ಕೆ ಜೋಡಿಸಲಾಗಿದ್ದು, ಅದು ಸ್ಫೋಟಗೊಂಡ ಪರಿಣಾಮ ಇಬ್ಬರು ಮಿಲಿಟರಿ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಕಾಬೂಲ್ ಪೊಲೀಸ್ ಮುಖ್ಯಸ್ಥರ ವಕ್ತಾರ ಫರ್ಡಾವ್ಸ್ ಫರಮಾರ್ಜ್ ತಿಳಿಸಿದ್ದಾರೆ.

ಸ್ಪೋಟದ ಒಂದು ಗಂಟೆಯ ನಂತರ ನಗರದ ಉತ್ತರ ಭಾಗದಲ್ಲಿ ನಡೆದ 2ನೇ ಬಾಂಬ್ ಬ್ಲಾಸ್ಟ್​ನಲ್ಲಿ ಪಾದ್ರಿ ಮೊಹಮ್ಮದ್ ಅಟೆಫ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಇತರ ಇಬ್ಬರು ಗಾಯಗೊಂಡಿದ್ದಾರೆ.

ಪಶ್ಚಿಮ ಕಾಬೂಲ್‌ನಲ್ಲಿ 3ನೇ ಬಾಂಬ್ ಸ್ಪೋಟಗೊಂಡಿದ್ದರ ಪರಿಣಾಮ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಫರಮಾರ್ಜ್ ಹೇಳಿದ್ದಾರೆ.

ಘನಿಯಲ್ಲಿರುವ ಅಧ್ಯಕ್ಷರ ಭವನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉದ್ದೇಶಿತ ಅಪರಾಧಗಳು ಮತ್ತು ಹತ್ಯೆಗಳ ಸರಣಿಯಲ್ಲಿ ಇತ್ತೀಚಿಗೆ ನಡೆದಿರುವ ಹತ್ಯೆಯೆಂದರೆ ಅದು ಅಟೆಫ್​ ಅವರದ್ದು ಎಂದು ತಿಳಿಸಿದ್ದಾರೆ.

ಅಟೆಫ್ ಅವರು ಅಫ್ಘಾನಿಸ್ತಾನದ ಇಸ್ಲಾಮಿಸ್ಟ್ ಸಂಘಟನೆಯಾದ ಜಾಮಿಯತ್-ಎ-ಎಸ್ಲಾದ ಕೇಂದ್ರ ಮಂಡಳಿಯ ಮುಖ್ಯಸ್ಥರಾಗಿದ್ದರು. ಅಟೆಫ್ ಅವರ ಹತ್ಯೆಯನ್ನು ದೇಶದ ರಾಷ್ಟ್ರೀಯ ಸಾಮರಸ್ಯ ಮಂಡಳಿಯ ಅಧ್ಯಕ್ಷರಾದ ಅಬ್ದುಲ್ಲಾ ಅಬ್ದುಲ್ಲಾ ಖಂಡಿಸಿದ್ದು, "ಅಟೆಫ್ ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯದ ಬೆಂಬಲಿಗರಾಗಿದ್ದರು" ಎಂದು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಓದಿ: ಮೂರು ವಲಸೆ ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕಲಿರುವ ಜೋ ಬೈಡನ್​

ಕಾಬೂಲ್‌ನಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಹಾಗೂ ಇತರೆಡೆ ಇತ್ತೀಚೆಗೆ ನಡೆದಿದ್ದ ಉಗ್ರರ ದಾಳಿಯಲ್ಲಿ ಸುಮಾರು 50 ಮಂದಿ ಅಸುನೀಗಿದ್ದರು. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್​ ಸ್ಟೇಟ್ ವಹಿಸಿಕೊಂಡಿತ್ತು.

ಅಫ್ಘಾನಿಸ್ತಾನದ ಪ್ರಮುಖ ಯುಎಸ್‌ ನೆಲೆಯನ್ನು ಗುರಿಯಾಗಿಸಿಕೊಂಡು ಡಿಸೆಂಬರ್‌ನಲ್ಲಿ ನಡೆದ ರಾಕೆಟ್ ದಾಳಿಯ ಜವಾಬ್ದಾರಿಯನ್ನು ಐಎಸ್ ವಹಿಸಿಕೊಂಡಿದೆ.

ಅಫ್ಘಾನ್ ರಾಜಧಾನಿ ಕಾಬೂಲ್‌ನಲ್ಲಿ ಇತ್ತೀಚಿಗೆ ತಾಲಿಬಾನ್ ದಾಳಿ ಹೆಚ್ಚುತ್ತಿದ್ದು, ಪ್ರಮುಖವಾಗಿ ಸರ್ಕಾರಿ ಅಧಿಕಾರಿಗಳು, ನಾಗರಿಕ ಸಮಾಜದ ಮುಖಂಡರು ಹಾಗೂ ಪತ್ರಕರ್ತರನ್ನು ಗುರಿಯಾಗಿಸಿ ಕೊಲ್ಲಲಾಗುತ್ತಿದೆ ಎಂದು ಯುಎಸ್ ಸರ್ಕಾರದ ವಾಚ್​ಡಾಗ್ 'ಸಿಗಾರ್​' ವರದಿ ಮಾಡಿದೆ.

ಯುದ್ಧದಿಂದ ಹಾನಿಗೊಳಗಾದ ದೇಶದಲ್ಲಿ ಯುಎಸ್ ಖರ್ಚು ಮಾಡುವ ಶತಕೋಟಿ ಡಾಲರ್‌ಗಳನ್ನು ಮೇಲ್ವಿಚಾರಣೆ ಮಾಡುವ ಸಿಗಾರ್ ಪ್ರಕಾರ, 2020ರಲ್ಲಿ ನಡೆದಿರುವ ಕೊಲೆಯ ಪ್ರಮಾಣ ಸುಮಾರು ಶೇ.17ರಷ್ಟು ಹೆಚ್ಚಿದೆ ಎಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.