ETV Bharat / international

ಇರಾಕ್​ನ ಅತಿದೊಡ್ಡ ಮಿಲಿಟರಿ ವಾಯುನೆಲೆ ಮೇಲೆ ನಾಲ್ಕು ರಾಕೆಟ್​ಗಳ ದಾಳಿ! - ಇರಾಕ್​ ವಾಯುನೆಲೆ ಮೇಲೆ ಕತ್ಯುಷಾ ರಾಕೆಟ್‌ಗಳು ದಾಳಿ

ಮೂರು ರಾಕೆಟ್‌ಗಳು ವಾಯುನೆಲೆಯ ಕಟ್ಟಡಕ್ಕೆ ಅಪ್ಪಳಿಸಿದ್ದು, ಸಣ್ಣ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಆದರೆ, ನಾಲ್ಕನೆಯದು ಖಾಲಿ ಪ್ರದೇಶಕ್ಕೆ ನುಗ್ಗಿದೆ. ಈ ರಾಕೆಟ್‌ಗಳನ್ನು ನೆರೆಯ ಪ್ರಾಂತ್ಯದ ದಿಯಾಲಾದಿಂದ ಹಾರಿಸಲಾಯಿತು ಎಂದು ಹೇಳಿದರು..

rockets hit Iraq air base  Katyusha rockets struck Balad Air Base  Baghdad air base news  ಇರಾಕ್​ ವಾಯುನೆಲೆ ಮೇಲೆ ರಾಕೆಟ್​ ದಾಳಿ  ಇರಾಕ್​ ವಾಯುನೆಲೆ ಮೇಲೆ ಕತ್ಯುಷಾ ರಾಕೆಟ್‌ಗಳು ದಾಳಿ  ಬಾಲಾದ್ ವಾಯುನೆಲೆ ಸುದ್ದಿ
ಇರಾಕ್​ ವಾಯುನೆಲೆ ಮೇಲೆ ರಾಕೆಟ್​ ದಾಳಿ
author img

By

Published : Mar 18, 2022, 2:36 PM IST

ಬಾಗ್ದಾದ್ : ರಾಜಧಾನಿ ಬಾಗ್ದಾದ್‌ನ ಉತ್ತರದಲ್ಲಿರುವ ಇರಾಕ್‌ನ ಅತಿದೊಡ್ಡ ಮಿಲಿಟರಿ ವಾಯುನೆಲೆಯಾದ ಬಲದ್ ವಾಯುನೆಲೆಗೆ ನಾಲ್ಕು ಕತ್ಯುಷಾ ರಾಕೆಟ್‌ಗಳು ಅಪ್ಪಳಿಸಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ರಾಕೆಟ್‌ಗಳು ಬಾಗ್ದಾದ್‌ನಿಂದ ಉತ್ತರಕ್ಕೆ 90 ಕಿ.ಮೀ ದೂರದಲ್ಲಿರುವ ಸಲಾಹುದಿನ್ ಪ್ರಾಂತ್ಯದ ಬಲದ್ ವಾಯುನೆಲೆಗೆ ಅಪ್ಪಳಿಸಿವೆ. ಈ ಘಟನೆಯಿಂದ ಯಾವುದೇ ಸಾವು-ನೋವುಗಳಿಗೆ ಕಾರಣವಾಗಿಲ್ಲ ಎಂದು ಪ್ರಾಂತೀಯ ಪೊಲೀಸರಿಂದ ಕರ್ನಲ್ ಮೊಹಮ್ಮದ್ ಅಲ್-ಬಾಜಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಓದಿ: ‘ಯಾರು ಈ ಹಾಟ್ ಬೇಬ್?’.. ನಟಿಯ ಜತೆಗೆ ಮಾತುಗಳಲ್ಲಿ ಮಗ್ನರಾದ ವಿಜಯ್​ ದೇವರಕೊಂಡ!

ಮೂರು ರಾಕೆಟ್‌ಗಳು ವಾಯುನೆಲೆಯ ಕಟ್ಟಡಕ್ಕೆ ಅಪ್ಪಳಿಸಿದ್ದು, ಸಣ್ಣ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಆದರೆ, ನಾಲ್ಕನೆಯದು ಖಾಲಿ ಪ್ರದೇಶಕ್ಕೆ ನುಗ್ಗಿದೆ. ಈ ರಾಕೆಟ್‌ಗಳನ್ನು ನೆರೆಯ ಪ್ರಾಂತ್ಯದ ದಿಯಾಲಾದಿಂದ ಹಾರಿಸಲಾಯಿತು ಎಂದು ಹೇಳಿದರು.

ಬಲದ್​ ಏರ್​ಬೇಸ್​ನಲ್ಲಿ ಇರಾಕ್​ನ ಎಫ್-16 ಫೈಟರ್​ಗಳಿವೆ. ಅಪರಿಚಿತ ಸೇನಾಪಡೆಗಳ ರಾಕೆಟ್ ದಾಳಿಗಳ ಮಧ್ಯೆ US ತಾಂತ್ರಿಕ ತಂಡವು ಈಗಾಗಲೇ ಆ ನೆಲೆಯಿಂದ ಹಿಂದೆ ಕಾಲ್ಕಿತ್ತಿದೆ. ಡಿಸೆಂಬರ್ 29, 2021ರಂದು ಪ್ರಧಾನಮಂತ್ರಿ ಮುಸ್ತಫಾ ಅಲ್-ಕಧಿಮಿ ಇರಾಕ್‌ನಲ್ಲಿ US ನೇತೃತ್ವದ ಸಮ್ಮಿಶ್ರ ಪಡೆಗಳ ಯುದ್ಧ ಕಾರ್ಯಾಚರಣೆಯ ಅಂತ್ಯವನ್ನು ದೃಢಪಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.