ETV Bharat / international

ಬಲೂಚಿಸ್ತಾನದಲ್ಲಿ ಮೂವರು ಉಗ್ರರ ಕೊಂದ ಪಾಕ್ ಸೇನೆ - ಪಾಕ್​ ಸೇನೆಯಿಂದ ಭಯೋತ್ಪಾದಕರ ಹತ್ಯೆ

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಬಲ್ಗತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

3-terrorists-killed-in-balochistan-in-follow-up-action-to-panjgur-attack-pak-military
ಬಲೂಚಿಸ್ತಾನದಲ್ಲಿ ಮೂವರು ಉಗ್ರರ ಕೊಂದ ಪಾಕ್ ಸೇನೆ
author img

By

Published : Feb 5, 2022, 6:27 AM IST

ಕ್ವೆಟ್ಟಾ(ಪಾಕಿಸ್ತಾನ): ಇತ್ತೀಚೆಗೆ ಪಾಕಿಸ್ತಾನದಲ್ಲಿ ಭಯೋತ್ಪಾದಕರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಪಾಕ್ ಸೇನೆ ಮತ್ತು ಭಯೋತ್ಪಾದಕರ ನಡುವಿನ ಕಾದಾಟ ತೀವ್ರಗೊಳ್ಳುತ್ತಿದೆ. ಈ ಬೆನ್ನಲ್ಲೇ ಬಲೂಚಿಸ್ತಾನ್ ಪ್ರಾಂತ್ಯದ ಬಲ್ಗತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಂಜ್ಗುರ್ ಮತ್ತು ನೌಶ್ಕಿ ಪ್ರದೇಶಗಳಲ್ಲಿ ಇತ್ತೀಚೆಗೆ ಪಾಕ್​ ಸೇನೆಯ ಪೋಸ್ಟ್​ಗಳ ಮೇಲೆ ದಾಳಿ ನಡೆಸಿದ ಭಯೋತ್ಪಾದಕರು ಸಾಕಷ್ಟು ಸೈನಿಕರನ್ನು ಕೊಂದಿದ್ದರು. ಈ ಕಾರ್ಯಾಚರಣೆಯ ಭಾಗವಾಗಿ ದಾಳಿ ನಡೆಸಿರುವ ಪಾಕ್ ಸೇನೆಯ ಫ್ರಾಂಟಿಯರ್ ಕಾರ್ಪ್ಸ್​​ ಮನೆಯೊಂದರ ಮೇಲೆ ದಾಳಿ ನಡೆಸಿ, ಮೂವರು ಭಯೋತ್ಪಾದಕರನ್ನು ಕೊಂದಿದೆ.

ಅಧಿಕೃತ ಮೂಲಗಳು ನೀಡಿದ ಸುಳಿವಿನ ಆಧಾರದ ಮೇಲೆ ಬಲ್ಗತಾರ್ ಪ್ರದೇಶದಲ್ಲಿ ಭಯೋತ್ಪಾದಕರನ್ನು ಸುತ್ತುವರೆಯಲಾಗಿದ್ದು, ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ಮಾಹಿತಿ ನೀಡಿದೆ.

ಇದನ್ನೂ ಓದಿ: ಎರಡು ಕಡೆ ಭೀಕರ ಅಪಘಾತ: ಮೂವರು ಪೊಲೀಸರು ಸೇರಿ 8 ಜನ ಸಾವು

ಹತ್ಯೆಗೀಡಾದ ಭಯೋತ್ಪಾದಕರನ್ನು ಕಮಾಂಡರ್‌ಗಳಾದ ಸುಮ್ಮೈರ್ ಅಲಿಯಾಸ್ ಬಹರ್, ಅಲ್ತಾಫ್ ಅಲಿಯಾಸ್ ಲಾಲಿಕ್ ಮತ್ತು ಫೈಲನ್ ಬಲೋಚ್ ಎಂದು ಗುರುತಿಸಲಾಗಿದೆ. ಈ ಭಯೋತ್ಪಾದಕರು ಹೋಶಬ್, ಪಂಜ್‌ಗುರ್ ಮತ್ತು ಇತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ವಿರುದ್ಧ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದ್ದರು. ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಬಲೂಚಿಸ್ತಾನದ ಗಡಿ ಪಟ್ಟಣವಾದ ಚಮನ್‌ನಲ್ಲಿ ಉಗ್ರರ ಮತ್ತೊಂದು ದಾಳಿ ನಡೆದಿದ್ದು, ಈ ದಾಳಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಭಯೋತ್ಪಾದಕರು ಹ್ಯಾಂಡ್ ಗ್ರೆನೇಡ್ ಮೂಲಕ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.