ಗನ್ಸು(ಚೀನಾ): ನೂರು ಕಿಲೋಮೀಟರ್ ಮೌಂಟೇನ್ ಮ್ಯಾರಥಾನ್ ಸ್ಪರ್ಧೆಯ ವೇಳೆ ಪ್ರತಿಕೂಲ ವಾತಾವರಣದಿಂದಾಗಿ 21 ಮಂದಿ ಸಾವನ್ನಪ್ಪಿದ್ದು, ಐವರು ನಾಪತ್ತೆಯಾಗಿರುವ ಘಟನೆ ಚೀನಾದ ಗನ್ಸು ಪ್ರಾಂತ್ಯದಲ್ಲಿ ನಡೆದಿದೆ.
ಕ್ಸಿನ್ಹುವಾ ನ್ಯೂಸ್ ಏಜೆನ್ಸಿಯ ವರದಿ ಪ್ರಕಾರ, ಬೈಯಿನ್ ನಗರದ ಜಿಂಗ್ಟೈ ಕೌಂಟಿ ಟೂರಿಸ್ಟ್ ಸೈಟ್ನಲ್ಲಿ ಶನಿವಾರ ಬೆಳಗ್ಗೆ ಘಟನೆ ಸಂಭವಿಸಿದೆ. ಬಳಿಕ ಮ್ಯಾರಥಾನ್ ಸ್ಥಗಿತಗೊಳಿಸಲಾಗಿದ್ದು, ಕಾಣೆಯಾದವರಿಗಾಗಿ ಸ್ಥಳೀಯ ಸರ್ಕಾರ ಹುಡುಕಾಟ ಕೈಗೊಂಡಿದೆ.
ಇದನ್ನೂ ಓದಿ: 'ಮೊಸಳೆಗಳು ಮುಗ್ದ': ಪ್ರಧಾನಿ ವಿರುದ್ಧ ಮಾರ್ಮಿಕವಾಗಿ ವ್ಯಂಗ್ಯವಾಡಿದ ರಾಹುಲ್
ಶೋಧ ಕಾರ್ಯಾಚರಣೆ ವೇಳೆ ತಾಪಮಾನದಲ್ಲಿ ಭಾರಿ ಇಳಿಕೆಯಾಗಿದ್ದು, ರಕ್ಷಣಾ ಕಾರ್ಯಕ್ಕೆ ತೊಂದರೆಯುಂಟಾಗಿದೆ. ಈವರೆಗೆ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದ 151 ಮಂದಿಯನ್ನು ರಕ್ಷಿಸಲಾಗಿದೆ. ಐದು ಮಂದಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.