ETV Bharat / international

ಪ್ರತಿಭಟನೆ ವೇಳೆ ಯುಎಸ್ ಕ್ಯಾಪಿಟಲ್ ಒಳಗೆ ಗುಂಡಿನ ಮೊರೆತ: ನಾಲ್ವರ ಸಾವು - ಅಮೆರಿಕದಲ್ಲಿ ಹಿಂಸಾತ್ಮಕ ಪ್ರತಿಭಟನೆ

ಪ್ರತಿಭಟನೆ ವೇಳೆ ಪೊಲೀಸರು ಹಾರಿಸಿದ ಗುಂಡು ತಗುಲಿ ಮಹಿಳೆ ಸೇರಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Woman shot inside US Capitol during protests dies
ಪ್ರತಿಭಟನೆ ವೇಳೆ ಯುಎಸ್ ಕ್ಯಾಪಿಟಲ್ ಒಳಗೆ ಗುಂಡಿನ ಮೊರೆತ
author img

By

Published : Jan 7, 2021, 7:19 AM IST

Updated : Jan 7, 2021, 6:16 PM IST

ವಾಷಿಂಗ್ಟನ್: ಯುಎಸ್ ಕ್ಯಾಪಿಟಲ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ವೇಳೆ ಗುಂಡು ತಗುಲಿ ಗಾಯಗೊಂಡಿದ್ದ ಮಹಿಳೆ ಸೇರಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆಯ ವಕ್ತಾರರು ಖಚಿತಪಡಿಸಿದ್ದಾರೆ.

ಯುಎಸ್ ಕ್ಯಾಪಿಟಲ್ ಕಟ್ಟಡದ ಒಳಗೆ ಪೊಲೀಸರು ಗುಂಡು ಹಾರಿಸಿದಾಗ ಗಾಯಗೊಂಡಿದ್ದ ಮಹಿಳೆಯನ್ನು ಏರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಮೃತಪಟ್ಟಿದ್ದಾಳೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆಯ ವಕ್ತಾರ ಡಸ್ಟಿನ್ ಸ್ಟರ್ನ್ಬೆಕ್ ಹೇಳಿದ್ದಾರೆ. ಇದೇ ವೇಳೆ ಇತರ ಮೂವರು ಸಹ ಹತರಾಗಿದ್ದಾರೆ ಎಂದು ಇತ್ತೀಚಿನ ವರದಿಗಳು ಖಚಿತ ಪಡಿಸಿವೆ.

  • #UPDATE | Violence at US Capitol: Woman who was shot inside the Capitol on Wednesday afternoon (local time) has died at a hospital, reports CNN

    — ANI (@ANI) January 6, 2021 " class="align-text-top noRightClick twitterSection" data=" ">

ಮಹಿಳೆಯ ಹೆಸರು ಅಥವಾ ಇನ್ನಿತರ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಚುನಾಯಿತ - ಅಧ್ಯಕ್ಷ ಜೋ ಬೈಡೆನ್ ಅವರ ಚುನಾವಣಾ ವಿಜಯದ ದೃಢೀಕರಣ ಕುರಿತು ಕಾಂಗ್ರೆಸ್ ಚರ್ಚೆ ಪ್ರಾರಂಭಿಸುತ್ತಿದ್ದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಯುಎಸ್ ಕ್ಯಾಪಿಟಲ್ ಕಟ್ಟಡವನ್ನು ಲಾಕ್​ಡೌನ್​ ಮಾಡಲಾಗಿದೆ.

ಓದಿ ಯುಎಸ್ ಕ್ಯಾಪಿಟಲ್ ಮುಂಭಾಗ ಉದ್ವಿಗ್ನ, ಗುಂಡಿನ ಮೊರೆತ:ಎಲ್ಲರೂ ಮನೆಗೆ ತೆರಳುವಂತೆ ಟ್ರಂಪ್​ ಮನವಿ!

ಭಾರೀ ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು. ಪರಿಸ್ಥಿತಿ ಪೊಲೀಸರ ಕೈಯಿಂದ ಜಾರುತ್ತಿದ್ದಂತೆ ಪ್ರತಭಟನಾಕಾರರಿಗೆ ಎಚ್ಚರಿಕೆ ನೀಡಿದರು ಪ್ರಯೋಜವಾಗಿಲ್ಲ. ಪೊಲೀಸ್​ ಮತ್ತು ಪ್ರತಿಭಟನಾಕಾರರ ನಡುವೆ ನೂಕು ನುಗ್ಗಲು ನಡೆಯಿತು. ಬಳಿಕ ಪೊಲೀಸರು ಲಘು ಲಾಠಿ ಜಾರ್ಜ್​ ನಡೆಸಿದ್ದಲ್ಲದೆ ಅಶ್ರುವಾಯು ಸಿಡಿಸಿದ್ದಾರೆ.

Last Updated : Jan 7, 2021, 6:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.