ETV Bharat / international

ಈವರೆಗೆ ಹಲವು ಅಂತಾರಾಷ್ಟ್ರೀಯ ಸಂಸ್ಥೆ ಹಾಗೂ ಒಪ್ಪಂದಗಳಿಂದ ಹೊರ ಬಂದಿರುವ ಅಮೆರಿಕ: ಇಲ್ಲಿದೆ ಲಿಸ್ಟ್​ - ಅಮೆರಿಕ ಸುದ್ದಿ

ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಅವುಗಳೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳಿಂದ ಅಮೆರಿಕ ವಿವಾದಾತ್ಮಕವಾಗಿ ಹಿಂದೆ ಸರಿದಿರುವುದು ಇದೇ ಮೊದಲಲ್ಲ. ಈವರೆಗಿನ ಹಲವು ಅಂತಾರಾಷ್ಟ್ರೀಯ ಸಂಸ್ಥೆ ಹಾಗೂ ಒಪ್ಪಂದಗಳಿಂದ ಅಮೆರಿಕ ಹೊರಬಂದಿದೆ.

America
ಅಮೆರಿಕ
author img

By

Published : May 31, 2020, 11:32 PM IST

ವಾಷಿಂಗ್ಟನ್​: ಕೊರೊನಾ ವೈರಸ್​ ಚೀನಾ ನಿಭಾಯಿಸಿದ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಟ್ರಂಪ್​, WHOದೊಂದಿಗಿನ ಅಮೆರಿಕದ ದಶಕಗಳ ಸದಸ್ಯತ್ವವನ್ನು ತಕ್ಷಣವೇ ನಿಲ್ಲಿಸುವುದಾಗಿ ಘೋಷಿಸಿದ್ದಾರೆ.

1948ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಯುಎಸ್ ಒಂದು ಪ್ರಮುಖ ಶಕ್ತಿಯಾಗಿತ್ತು. ಅಲ್ಲದೆ ಅಮೆರಿಕವು ಆರೋಗ್ಯ ಸಂಸ್ಥೆಗೆ ಹೆಚ್ಚು ಹಣ ಒದಗಿಸುವ ದೇಶವಾಗಿದೆ. ವರ್ಷಕ್ಕೆ 450 ದಶಲಕ್ಷ ಡಾಲರ್​ಅನ್ನು ಅಮೆರಿಕಾ ಒದಗಿಸುತ್ತದೆ. ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಒಪ್ಪಂದಗಳಿಂದ ಅಮೆರಿಕ ವಿವಾದಾತ್ಮಕವಾಗಿ ಹಿಂದೆ ಸರಿದಿರುವುದು ಇದೇ ಮೊದಲಲ್ಲ. ಈವರೆಗಿನ ಅಮೆರಿಕಾದ ಇಂತಹ ವರ್ತನೆಗೆ ಹಲವು ನಿದರ್ಶನಗಳಿವೆ.

ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ:

ನವೆಂಬರ್ 06, 1977ರಲ್ಲಿ ಅಮೆರಿಕ ಐಎಲ್ಒನಿಂದ ಹಿಂದೆ ಸರಿಯಿತು. ಇದಕ್ಕೆ 1934ರಲ್ಲಿ ಅದು ಸೇರಿಕೊಂಡಿತ್ತು.

ಯುನೆಸ್ಕೋ: ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ನೇತೃತ್ವದಲ್ಲಿ ಯುನೈಟೆಡ್ ಸ್ಟೇಟ್ಸ್, 195 ಸದಸ್ಯರ ಸಂಘಟನೆಯಿಂದ ಹಿಂದೆ ಸರಿದಿದೆ. 1984 ರಲ್ಲಿ ಹಣಕಾಸಿನ ದುರುಪಯೋಗ ಮತ್ತು ಅದರ ಕೆಲವು ನೀತಿಗಳಲ್ಲಿ ಯುಎಸ್ ವಿರೋಧಿ ಪಕ್ಷಪಾತದ ಆರೋಪದ ಮೇಲೆ ಅಮೆರಿಕ ಹೊರನಡೆದಿತ್ತು.

ಪ್ಯಾರಿಸ್ ಕ್ಲೈಮೇಟ್ ಒಪ್ಪಂದ: ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕವನ್ನು ಹಿಂತೆಗೆದುಕೊಳ್ಳುವುದಾಗಿ ಟ್ರಂಪ್ 2017 ರ ಜೂನ್‌ನಲ್ಲಿ ಘೋಷಿಸಿದರು. 2015ರ ಒಪ್ಪಂದವು ಅಮೆರಿಕದ ಆರ್ಥಿಕತೆಗೆ ಕೆಟ್ಟದು ಎಂದು ವಾದಿಸಿದ ಸಂಪ್ರದಾಯವಾದಿಗಳ ಪರ ಟ್ರಂಪ್ ನಿಂತರು.

ಇರಾನ್ ನ್ಯೂಕ್ಲಿಯರ್ ಡೀಲ್: ಇರಾನ್‌ನ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮವನ್ನು ತಡೆಯುವ ಒಪ್ಪಂದದಿಂದ ಅಮೆರಿಕವನ್ನು ಹೊರತರುವುದಾಗಿ ಟ್ರಂಪ್ 2018ರ ಮೇ ತಿಂಗಳಲ್ಲಿ ಘೋಷಿಸಿದರು. ಈ ಕ್ರಮವು ಯುನೈಟೆಡ್ ಸ್ಟೇಟ್ಸ್ ಅನ್ನು ತನ್ನ ಮಿತ್ರರಾಷ್ಟ್ರಗಳಿಂದ ಪ್ರತ್ಯೇಕಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಟಿಪಿಪಿ(TPP): 2017 ರಲ್ಲಿ ಅಧಿಕಾರ ವಹಿಸಿಕೊಂಡ ಸ್ವಲ್ಪ ಸಮಯದಲ್ಲೇ, ಟ್ರಂಪ್ 12 ಪೆಸಿಫಿಕ್ ರಿಮ್ ದೇಶಗಳನ್ನು ಒಳಗೊಂಡ ವ್ಯಾಪಾರ ಒಪ್ಪಂದವಾದ ಟ್ರಾನ್ಸ್-ಪೆಸಿಫಿಕ್ ಸಹಭಾಗಿತ್ವದಿಂದ ಅಮೆರಿಕವನ್ನು ಹೊರತಂದರು. ಇದನ್ನು ಅಮೆರಿಕದ ಕಾರ್ಮಿಕರಿಗಾಗಿ ಮಾಡುತ್ತಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.

ಯುನೆಸ್ಕೋ:ವಿಶ್ವಸಂಸ್ಥೆಯ ಸಾಂಸ್ಕೃತಿಕ ಸಂಘಟನೆಯಾದ ಯುನೆಸ್ಕೋದಿಂದ ಹಿಂದೆ ಸರಿಯುವುದಾಗಿ ಟ್ರಂಪ್ ಸರ್ಕಾರವು ಅಕ್ಟೋಬರ್ 2017 ರಲ್ಲಿ ಘೋಷಿಸಿತು.

ಯುಎನ್‌ಹೆಚ್‌ಆರ್‌ಸಿ(UNHRC): 2018 ರ ಜೂನ್‌ನಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ಟ್ರಂಪ್ ಸರ್ಕಾರ ಹಿಂದೆ ಸರಿಯಿತು.

ಯುಎನ್‌ಆರ್‌ಡಬ್ಲ್ಯೂಎ(UNRWA): ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗೆ ಸಹಾಯ ಮಾಡುವ ಯುಎನ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿಗೆ ತನ್ನ ದಶಕಗಳ ಹಣಕಾಸಿನ ಪೂರೈಕೆಯನ್ನು ಕೊನೆಗೊಳಿಸುವುದಾಗಿ ಟ್ರಂಪ್ ಸರ್ಕಾರವು ಆಗಸ್ಟ್ 2018 ರಲ್ಲಿ ಘೋಷಿಸಿತು.

ಯುಪಿಯು (ಯುನಿವರ್ಸಲ್ ಪೋಸ್ಟಲ್ ಯೂನಿಯನ್): ವಿಶ್ವದಾದ್ಯಂತ ಅಂಚೆ ನೀತಿಯನ್ನು ಸಂಘಟಿಸುವ ಯುನಿವರ್ಸಲ್ ಪೋಸ್ಟಲ್ ಯೂನಿಯನ್ (ಯುಪಿಯು)ನಿಂದ ಯುಎಸ್ ಹಿಂದೆ ಸರಿಯುವುದಾಗಿ ಟ್ರಂಪ್ ಕ್ಟೋಬರ್ 2018 ರಲ್ಲಿ ಘೋಷಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.