ETV Bharat / international

ಇಬ್ಬರೂ ರೋಗಿಗಳಿಗೆ ಒಂದೇ ವೆಂಟಿಲೇಟರ್​: ಟೆಕ್ಸಾಸ್​ ಎಂಜಿನಿಯರ್​ಗಳಿಂದ ಶೋಧ - ವೆಂಟಿಲೇಟರ್​ ಸ್ಪ್ಲಿಟರ್

ಕೊರೊನಾ ರೋಗಿಗಳು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುವುದನ್ನು ತಪ್ಪಿಸಲು ವೆಂಟಿಲೇಟರ್​ಗಳ ಮೊರೆ ಹೋಗಲಾಗುತ್ತದೆ. ಅಮೆರಿಕಾದ ಟೆಕ್ಸಾಸ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್‌ ತಂಡವೊಂದು ಪ್ರತಿ ಎರಡು ರೋಗಿಗಳಿಗೆ ಒಂದರಂತೆ ವೆಂಟಿಲೇಟರ್ ಸ್ಪ್ಲಿಟರ್‌ಗಳನ್ನು ತಯಾರಿಸಲು 3-ಡಿ ಪ್ರಿಂಟಿಂಗ್ ತಂತ್ರಜ್ಞಾನದ ಮೊರೆ ಹೋಗಿದೆ.

3D-printed ventilator
3-ಡಿ ಮುದ್ರಿತ ವೆಂಟಿಲೇಟರ್​
author img

By

Published : Jun 4, 2020, 9:13 PM IST

ಡೆಂಟನ್(ಅಮೆರಿಕಾ): ಕೊರೊನಾ ವೈರಸ್​ಗೆ ತತ್ತರಿಸಿರುವ ಹಲವು ದೇಶಗಳು ಸೀಮಿತ ವೆಂಟಿಲೇಟರ್‌ಗಳೊಂದಿಗೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿವೆ. ಅಮೆರಿಕದ ವಿಶ್ವವಿದ್ಯಾಲಯದ ತಂಡವೊಂದು ಒಂದೇ ವೆಂಟಿಲೇಟರ್​ನಡಿ ಇಬ್ಬರು ರೋಗಿಗಳಿಗೆ ಬಳಕೆಯಾಗುವಂತಹ ಸ್ಪ್ಲಿಟರ್‌ಗಳನ್ನು ತಯಾರಿಸಿದೆ.

ಅಮೆರಿಕಾದ ಉತ್ತರ ಭಾಗದ ಟೆಕ್ಸಾಸ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್‌ ತಂಡವೊಂದು ಈ ಪ್ರಯತ್ನಕ್ಕೆ ಕೈ ಹಾಕಿದ್ದು, ಪ್ರತಿ ಎರಡು ರೋಗಿಗಳಿಗೆ ಒಂದರಂತೆ ವೆಂಟಿಲೇಟರ್ ಸ್ಪ್ಲಿಟರ್‌ಗಳನ್ನು ತಯಾರಿಸಲು 3-ಡಿ ಪ್ರಿಂಟಿಂಗ್ ತಂತ್ರಜ್ಞಾನದ ಮೊರೆ ಹೋಗಿದೆ.

ವೈದ್ಯಕೀಯ ಅನ್ವಯಿಕೆಗಳಿಗೆ ತಕ್ಕಂತೆ ಜೈವಿಕ ಹೊಂದಾಣಿಕೆಯ ವಸ್ತುಗಳನ್ನು ಬಳಸಿ ತಯಾರಿಸಿಲಾದ ಈ ವೆಂಟಿಲೇಟರ್​ ಸ್ಪ್ಲಿಟರ್​​, ಕಾಲೇಜಿನ ಡಿಜಿಟಲ್ ಉತ್ಪಾದನಾ ಪ್ರಯೋಗಾಲಯದಲ್ಲಿ 20 ಸ್ಪ್ಲಿಟರ್‌ಗಳನ್ನು ಮುದ್ರಿಸುವ ಮೂಲಕ ಯಶಸ್ವಿಯಾಗಿದೆ. ಸ್ಪ್ಲಿಟರ್​​ಗಳು ಫ್ಲೋ ಲಿಮಿಟರ್ ಹೊಂದಿದ್ದು, ಪ್ರತಿ ಕೊರೊನಾ ರೋಗಿಗೆ ವೆಂಟಿಲೇಟರ್​​ ಮೂಲಕ ಗಾಳಿಯ ಹರಿವನ್ನು ಸರಿಹೊಂದಿಸಲು ಅವಕಾಶ ನೀಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮೊದಲು ಆಸ್ಪತ್ರೆಯಲ್ಲಿನ ವೆಂಟಿಲೇಟರ್‌ ಮಾದರಿಯನ್ನು ಪರೀಕ್ಷಿಸಿದ್ದು, ನಂತರ ನೂತನ ವೆಂಟಿಲೇಟರ್​​ ಸ್ಪ್ಲಿಟರ್​​ ವಿನ್ಯಾಸಕ್ಕೆ ಕೈಹಾಕಿದೆ. ಕೇವಲ ಎರಡು ದಿನಗಳಲ್ಲಿ ನೂತನ ವೆಂಟಿಲೇಟರ್​​ ಉತ್ಪಾದನೆಗೆ ಸಿದ್ಧವಾಗಿದೆ ಎಂದು ಎಂಜಿನಿಯರಿಂಗ್ ಕಾಲೇಜಿನ ಅಸೋಸಿಯೇಟ್ ಡೀನ್ ಆಂಡ್ರೆ ವೊವೊಡಿನ್ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಮೇ ತಿಂಗಳ ಆರಂಭದಲ್ಲಿ ಭಾರತೀಯ ಮೂಲದವರನ್ನೊಳಗೊಂಡ ಸಂಶೋಧಕರ ತಂಡ ಎರಡು ರೋಗಿಗಳ ನಡುವೆ ವೆಂಟಿಲೇಟರ್‌ಗಳನ್ನು ಹಂಚಿಕೊಳ್ಳಲು ಹೊಸ ವಿಧಾನವನ್ನು ಸಿದ್ದಪಡಿಸಿದ್ದರು. ಇದನ್ನು ತೀವ್ರ ಉಸಿರಾಟದ ತೊಂದರೆಯಲ್ಲಿರುವಾಗ ಮಾತ್ರ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಬಳಸಿಕೊಳ್ಳಲು ಸೂಚನೆ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.