ವಾಷಿಂಗ್ಟನ್(ಅಮೆರಿಕ): ಮುಂಬೈ ದಾಳಿಗೆ ಸಹಕಾರ ನೀಡಿದ ಆರೋಪದಲ್ಲಿ ದೇಶಭ್ರಷ್ಟನಾಗಿರುವ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹವ್ವೂರ್ ರಾಣಾನನ್ನು ಬಿಡುಗಡೆ ಮಾಡದಿರಲು ಅಮೆರಿಕ ಸರ್ಕಾರ ಕ್ಯಾಲಿಫೋರ್ನಿಯಾದ ಫೆಡರಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಜಾಮೀನು ಅರ್ಜಿ ಇತ್ಯರ್ಥವಾಗುವ ಮೊದಲು ಬಿಡುಗಡೆಗೊಳಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಕ್ಯಾಲಿಫೋರ್ನಿಯಾದ ಫೆಡರಲ್ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಪಾಕಿಸ್ತಾನ ಮೂಲದ ಅಮೆರಿಕ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯ ಬಾಲ್ಯ ಸ್ನೇಹಿತನಾದ 59 ವರ್ಷದ ತಹವ್ವೂರ್ ರಾಣಾನನ್ನು ಲಾಸ್ ಏಂಜಲೀಸ್ನಲ್ಲಿ ಜೂನ್ 10ರಂದು ಬಂಧಿಸಲಾಗಿತ್ತು. ಈ ವೇಳೆ ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಭಾರತ ಮನವಿ ಸಲ್ಲಿಸಿತ್ತು.
ಓದಿ: ಮುಂಬೈ ದಾಳಿ ಆರೋಪಿ ತಹವ್ವೂರ್ ರಾಣಾ ಭಾರತಕ್ಕೆ ಹಸ್ತಾಂತರ ವಿಚಾರ: ಫೆ.12ಕ್ಕೆ ವಿಚಾರಣೆ
ಹಸ್ತಾಂತರ ವಿಚಾರಕ್ಕೆ ಸಂಬಂಧಿಸಿದಂತೆ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವ ವಿಚಾರಣೆಯನ್ನು ಅಮೆರಿಕದ ನ್ಯಾಯಾಲಯ ಫೆಬ್ರವರಿ 12ಕ್ಕೆ ನಿಗದಿ ಮಾಡಿದೆ. ಲಾಸ್ ಏಂಜಲೀಸ್ನ ಜಿಲ್ಲಾ ಕೋರ್ಟ್ ನ್ಯಾಯಾಧೀಶ ಜಾಕ್ವೆಲಿನ್ ಚೆಲೋನಿಯನ್ ಫೆಬ್ರವರಿ 12ರಂದು ಬೆಳಗ್ಗೆ 10 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತಹವ್ವೂರ್ ರಾಣಾ ವಿರುದ್ಧ ಯುದ್ಧ ಮಾಡಲು ಪಿತೂರಿ, ಭಯೋತ್ಪಾದನೆ ಕೃತ್ಯ, ಯುದ್ಧ, ಕೊಲೆ ಆರೋಪ ಮತ್ತು ಭಯೋತ್ಪಾದಕ ಕೃತ್ಯದ ಆರೋಪಗಳನ್ನು ಹೊರಿಸಲಾಗಿದ್ದು, ವಿಚಾರಣೆ ಕೂಡಾ ನಡೆಸಲಾಗುತ್ತಿದೆ.