ETV Bharat / international

ಶೈಕ್ಷಣಿಕ ಗುಣಮಟ್ಟ ವಿಸ್ತರಣೆ:  ಸಾಲ ನೀಡಲು ಯುಎಸ್ ಹಣಕಾಸು ಸಂಸ್ಥೆ ನಿರ್ಧಾರ

ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ದೀರ್ಘಕಾಲೀನ ಬಂಡವಾಳದ ಅಗತ್ಯವನ್ನು ಪೂರೈಸುವ ಮೂಲಕ ಹೆಚ್ಚಿನ ಶಾಲೆಗಳನ್ನು ತಲುಪಲು ಬೆಂಗಳೂರು ಮೂಲದ 'ವರ್ತನಾ' ಹಣಕಾಸು ಸಂಸ್ಥೆಗೆ ಹಣಕಾಸಿನ ನೆರವು ನೀಡುತ್ತದೆ ಎಂದು ಯುಎಸ್ ಇಂಟರ್​ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಡಿಎಫ್‌ಸಿ) ಪ್ರಕಟಣೆಯಲ್ಲಿ ತಿಳಿಸಿದೆ.

author img

By

Published : May 5, 2020, 6:53 PM IST

school
ಶಾಲೆ

ವಾಷಿಂಗ್ಟನ್: ಭಾರತದಲ್ಲಿ ಕಡಿಮೆ ಆದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿರುವ ಶಾಲೆಗಳಿಗೆ ನಿರ್ಣಾಯಕ ಹಣಕಾಸು ಒದಗಿಸುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ವಿಸ್ತರಿಸಲು ಆರಂಭಿಕ ಹಂತದಲ್ಲಿರುವ ಭಾರತದ ಶಿಕ್ಷಣ ಸಂಸ್ಥೆಗಳಿಗೆ 15 ಮಿಲಿಯನ್ ಯುಎಸ್​ ಡಾಲರ್​ ಸಾಲವನ್ನು ನೀಡಲು ಅಮೆರಿಕ ಹಣಕಾಸು ಸಂಸ್ಥೆ ಒಪ್ಪಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ದೀರ್ಘಕಾಲೀನ ಬಂಡವಾಳದ ಅಗತ್ಯವನ್ನು ಪೂರೈಸುವ ಮೂಲಕ ಹೆಚ್ಚಿನ ಶಾಲೆಗಳನ್ನು ತಲುಪಲು ಬೆಂಗಳೂರು ಮೂಲದ 'ವರ್ತನಾ' ಹಣಕಾಸು ಸಂಸ್ಥೆಗೆ ಹಣಕಾಸಿನ ನೆರವು ನೀಡುತ್ತದೆ ಎಂದು ಯುಎಸ್ ಇಂಟರ್​ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಡಿಎಫ್‌ಸಿ) ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೊನಾ ವೈರಸ್​ನಿಂದ ಉಂಟಾಗುವ ಅಡೆತಡೆಗಳಿಗೆ ಹೊಂದಿಕೊಳ್ಳಲು ಮತ್ತು ಚೇತರಿಸಿಕೊಳ್ಳಲು ಶಾಲೆಗಳು ಕೆಲಸ ಮಾಡುತ್ತಿರುವುದರಿಂದ ಈ ನೆರವು ವಿಶೇಷವಾಗಿ ನಿರ್ಣಾಯಕವಾಗಿರುತ್ತದೆ ಎಂದು ಅಮೆರಿಕದ ಅಭಿವೃದ್ಧಿ ಬ್ಯಾಂಕ್ ಡಿಎಫ್‌ಸಿ ಹೇಳಿದೆ.

ಸಮಯೋಚಿತ ಸಾಲಗಳನ್ನು ನೀಡುವುದರ ಜೊತೆಗೆ, ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ದೂರದಿಂದಲೇ ತಮ್ಮ ಶಿಕ್ಷಣವನ್ನು ಮುಂದುವರೆಸಲು ಡಿಜಿಟಲ್ ಕಲಿಕೆ ಪರಿಕರಗಳು ಮತ್ತು ಬೋಧನಾ ವಿಧಾನಗಳನ್ನು ಜಾರಿಗೆ ತರಲು ವರ್ತನಾ ಶಾಲೆಗಳಿಗೆ ಸಹಾಯ ಮಾಡುತ್ತಿದೆ ಎಂದು ಅದು ಹೇಳಿದೆ.

2013ರಲ್ಲಿ ಬ್ರಜೇಶ್ ಮಿಶ್ರಾ ಮತ್ತು ಸ್ಟೀವ್ ಹಾರ್ಡ್‌ಗ್ರೇವ್ ಅವರು ಸ್ಥಾಪಿಸಿದ ವರ್ತನಾ ಸಂಸ್ಥೆಯು, 84,000 ಶಿಕ್ಷಕರು ಮತ್ತು 2.5 ಮಿಲಿಯನ್ ವಿದ್ಯಾರ್ಥಿಗಳನ್ನು ಹೊಂದಿರುವ 3,500 ಕ್ಕೂ ಹೆಚ್ಚು ಶಾಲೆಗಳಿಗೆ ನೆರವು ನೀಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.