ETV Bharat / international

ಅಮೆರಿಕದಲ್ಲಿ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಕೇಸ್; ದೋಷಿ ಡೆರೆಕ್‌ ಚೌವಿನ್‌ಗೆ 22.5 ವರ್ಷ ಜೈಲು ಶಿಕ್ಷೆ

ಅಮೆರಿಕಾದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಆಫ್ರಿಕಾ ಮೂಲದ ಅಮೆರಿಕ ಪ್ರಜೆ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದಲ್ಲಿ ಮೃತ ಕುಟುಂಬಸ್ಥರಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಫ್ಲಾಯ್ಡ್‌ರನ್ನು 9 ನಿಮಿಷ ಮೊಣಕಾಲಿನಿಂದ ತುಳಿದು ಅಮಾನವೀಯವಾಗಿ ವರ್ತಿಸಿದ್ದ ಡೆರೆಕ್‌ ಚೌವಿನ್‌ಗೆ ಮಿನ್ನಿಯಾಪೋಲಿಸ್ ಕೋರ್ಟ್‌ ಇಪ್ಪತ್ತೆರಡೂವರೆ ವರ್ಷ ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿದೆ.

author img

By

Published : Jun 26, 2021, 4:55 AM IST

US Ex-Police Officer Sentenced To 22.5 Years For George Floyd Murder
ಅಮೆರಿಕದಲ್ಲಿ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಕೇಸ್; ದೋಷಿ ಡೆರೆಕ್‌ ಚೌವಿನ್‌ಗೆ 22.5 ವರ್ಷ ಜೈಲು ಶಿಕ್ಷೆ

ಮಿನ್ನಿಯಾಪೋಲಿಸ್(ಅಮೆರಿಕ): ಆಫ್ರಿಕಾ ಮೂಲದ ಅಮೆರಿಕ ಪ್ರಜೆ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪೊಲೀಸ್ ಅಧಿಕಾರಿ, ದೋಷಿ ಡೆರೆಕ್ ಚೌವಿನ್‌ಗೆ ಇಪ್ಪತ್ತೆರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಿ ಅಲ್ಲಿನ ಕೋರ್ಟ್‌ ಮಹತ್ವದ ಆದೇಶ ನೀಡಿದೆ. ದಶಕಗಳಿಂದ ಅಮೆರಿಕದಲ್ಲಿ ನಡೆಯುತ್ತಿರುವ ಜನಾಂಗೀಯ ಹಲ್ಲೆ, ನಿಂದನೆ ಪ್ರಕರಣಗಳಲ್ಲಿ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಕೇಸ್‌ನಲ್ಲಿ ಸಿಕ್ಕ ದೊಡ್ಡ ವಿಜಯ ಇದಾಗಿದೆ.

ಮಿನ್ನಿಯಾಪೋಲಿಸ್ ಕೋರ್ಟ್‌ನ ನ್ಯಾಯಮೂರ್ತಿ ಪೀಟರ್ ಕಾಹಿಲ್, ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ದೋಷಿ ಚೌವಿನ್‌ ಮೃತ ಫ್ಲಾಯ್ಡ್ ಕುಟುಂಬಕ್ಕೆ ತಮ್ಮ ಸಂತಾಪವನ್ನು ಸೂಚಿಸಿದರು. ಬಳಿಕ 30 ವರ್ಷಕ್ಕಿಂತ ಕಡಿಮೆ ಶಿಕ್ಷೆಯನ್ನು ನೀಡುವಂತೆ ಮನವಿ ಮಾಡಿದರು.

ಫ್ಲಾಯ್ಡ್‌ ಅವರ 7 ವರ್ಷದ ಪುತ್ರಿ ರೆಕಾರ್ಡ್‌ ಮಾಡಿದ್ದ ಸಂದೇಶವನ್ನು ಕೋರ್ಟ್‌ ಆಲಿಸಿತು. ಜೊತೆಗೆ ಆರೋಪಿ ಚೌವಿನ್‌ ಅವರ ತಾಯಿಗೂ ಈ ಸಂದೇಶ ಕೇಳಲು ಅವಕಾಶ ನೀಡಿದ ನಂತರ ನ್ಯಾಯಮೂರ್ತಿ ಕಾಹಿಲ್‌, ಯಾವುದೇ ಭಾವನಾತ್ಮಕ ಅಥವಾ ಸಹಾನುಭೂತಿಯನ್ನು ಆಧರಿಸಿ ಈ ಶಿಕ್ಷೆ ನೀಡುತ್ತಿಲ್ಲ ಎಂದು ಹೇಳಿದರು.

ಇದು ಸಾರ್ವಜನಿಕರ ಅಭಿಪ್ರಾಯವನ್ನು ಆಧರಿಸಿಲ್ಲ. ಆದರೆ ಕಾನೂನು ಮತ್ತು ಪ್ರಕರಣಕ್ಕೆ ನಿರ್ದಿಷ್ಟವಾದ ಸಂಗತಿಗಳನ್ನು ಆಧರಿಸಿದೆ. ಏಕೆಂದರೆ ಈ ಪ್ರಕರಣವು ವಿಶೇಷವಾಗಿ ಫ್ಲಾಯ್ಡ್ ಕುಟುಂಬಕ್ಕೆ ಆಗಿರುವ ಆಳ ಮತ್ತು ಅಗಾದವಾದ ನೋವನ್ನುಂಟು ಮಾಡಿದೆ ಎಂದರು.

ಇದನ್ನೂ ಓದಿ: ಅಮೆರಿಕದಲ್ಲಿ ಕೋಲಾಹಲ ಎಬ್ಬಿಸಿದ ಫ್ಲಾಯ್ಡ್‌ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ದೋಷಿ‌

ಅಮೆರಿಕದಲ್ಲಿ ಜನಾಂಗೀಯ ನಿಂದನೆಗಳನ್ನು ತಡೆಯಲು, ಸಾಮರಸ್ಯದ ಕಡೆಗೆ ಸಾಗಲು ಇದೊಂದು ಐತಿಹಾಸಿಕ ಹೆಜ್ಜೆ ಎಂದು ಜಾರ್ಜ್‌ ಫ್ಲಾಯ್ಡ್‌ ಕುಟುಂಬದ ಪರ ವಕೀಲ ಬೆನ್ ಕ್ರಂಪ್ ಟ್ವೀಟ್ ಮಾಡಿದ್ದಾರೆ.

ಅಧ್ಯಕ್ಷ ಜೋ ಬೈಡನ್, ಪರಿಗಣಿಸಲ್ಪಟ್ಟ ಎಲ್ಲಾ ಸಂದರ್ಭಗಳು ನನಗೆ ತಿಳಿದಿಲ್ಲ. ಆದರೆ ಮಾರ್ಗಸೂಚಿಗಳ ಪ್ರಕಾರ ಈ ಮಹತ್ವದ ಆದೇಶ ಸೂಕ್ತವೆಂದು ತೋರುತ್ತದೆ ಎಂದಿದ್ದಾರೆ.

ಮೇ 25, 2020 ಅಮೆರಿಕ ಇತಿಹಾಸದ 'ಕಪ್ಪು' ದಿನ

ಕಳೆದ ವರ್ಷ ಮೇ 25 ರಂದು ಫ್ಲಾಯ್ಡ್‌ ಅವರನ್ನು ಪೊಲೀಸ್‌ ಅಧಿಕಾರಿ ಡೆರೆಕ್‌ ಚೌವಿನ್‌ 9 ನಿಮಿಷ ಮೊಣಕಾಲಿನಿಂದ ತುಳಿದು ಅಮಾನವೀಯವಾಗಿ ವರ್ತಿಸಿದ್ದರು. ಈ ಮೂಲಕ ಕಪ್ಪುವರ್ಣೀಯ ವ್ಯಕ್ತಿಯ ಹತ್ಯೆಗೆ ಕಾರಣರಾಗಿದ್ದರು. ಪ್ಲಾಯ್ಡ್‌ ಸಾವು ಅಮೆರಿಕಾದೆಲ್ಲೆಡೆ ವ್ಯಾಪಕ ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾಗಿತ್ತು. ಮಾತ್ರವಲ್ಲದೆ, ಜನಾಂಗೀಯ ಭೇದಭಾವದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.