ETV Bharat / international

ಕೊರೊನಾ ತಡೆಗಟ್ಟುವ ಲಸಿಕೆ ಅಧ್ಯಯನ ಇನ್ನಷ್ಟು ಚುರುಕು: ವಿಶ್ವಸಂಸ್ಥೆ - ವಿಶ್ವಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್​ ಅಧನೋಮ್​ ಗೇಬ್ರೆಯೆಸಸ್​

ಈ ಮೊದಲು ಕೊರೊನಾ ಮಹಾಮಾರಿಗೆ ಲಸಿಕೆ ಕಂಡುಹಿಡಿಯಲು 12ರಿಂದ 18 ತಿಂಗಳು ಬೇಕಾಗಬಹುದು ಎನ್ನಲಾಗಿತ್ತು. ಆದರೆ ಈಗ ಈ ಪ್ರಕ್ರಿಯೆ ಚುರುಕು ಪೆಡೆದುಕೊಂಡಿದೆ. ಕೊರೊನಾ ಚಿಕಿತ್ಸೆಗಾಗಿ 40 ದೇಶಗಳು 8 ಬಿಲಿಯನ್​​ ಹಣದ ನೆರವು ನೀಡಲು ಮುಂದಾದ ಬಳಿಕ ಔಷಧಿ ಕಂಡುಕೊಳ್ಳುವ ಪ್ರಕ್ರಿಯೆ ತ್ವರಿತಗತಿಯಲ್ಲಿ ಸಾಗಿದ್ದು, ಈ ಅವಧಿಗೂ ಮೊದಲೇ ಲಸಿಕೆ ಬಳಕೆ ಲಭ್ಯವಾಗಬಹುದು ಎನ್ನಲಾಗಿದೆ.

UN says 7 or 8 `top' candidates for a COVID-19 vaccine exist
ಕೊರೊನಾ ತಡೆಗಟ್ಟುವ ಲಸಿಕೆ ಅಧ್ಯಯನ ಇನ್ನಷ್ಟು ಚುರುಕು: ವಿಶ್ವಸಂಸ್ಥೆ
author img

By

Published : May 12, 2020, 5:11 PM IST

ನ್ಯೂಯಾರ್ಕ್​​​: ಕೊರೊನಾ ವಿರುದ್ಧ ಹೋರಾಡುವ ಸಲುವಾಗಿ ವಿಶ್ವದಾದ್ಯಂತ ಈಗ ಔಷಧಿ ಕಂಡುಹಿಡಿಯಲು ತ್ವರಿತ ಅಧ್ಯಯನಗಳು ನಡೆಯುತ್ತಿವೆ. ಜೊತೆಗೆ ವಿಶ್ವಸಂಸ್ಥೆಯ ಮೂಲಕ ಈ ಅಧ್ಯಯನಕ್ಕಾಗಿ ಹಣಕಾಸಿನ ನೆರವು ಸಹ ನೀಡಲಾಗುತ್ತಿದೆ. ಈ ಕುರಿತು ವಿಶ್ವಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್​ ಅಧನೋಮ್​ ಗೇಬ್ರೆಯೆಸಸ್​ ಯುನ್​ನ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಜೊತೆ ನಡೆದ ವಿಡಿಯೊ ಸಂವಾದದಲ್ಲಿ ಮಾತನಾಡಿದ್ದು, ಕೊರೊನಾ ಔಷಧಿ ಕಂಡುಹಿಡಿಯುವ ಸಾಲಿನಲ್ಲಿ 7 ಅಥವಾ 8 ಉನ್ನತ ದೇಶಗಳು ಮುಂಚೂಣಿಯಲ್ಲಿವೆ ಎಂದಿದ್ದಾರೆ.

ಈ ಮೊದಲು ಕೊರೊನಾ ಮಹಾಮಾರಿಗೆ ಔಷಧಿ ಕಂಡುಕೊಳ್ಳಲು 12ರಿಂದ 18 ತಿಂಗಳು ಬೇಕಾಗಬಹುದು ಎನ್ನಲಾಗಿತ್ತು. ಆದರೆ ಈಗ ಈ ಪ್ರಕ್ರಿಯೆ ಚುರುಕು ಪೆಡೆದುಕೊಂಡಿದೆ. ಕೊರೊನಾ ಚಿಕಿತ್ಸೆಗಾಗಿ 40 ದೇಶಗಳು 8 ಬಿಲಿಯನ್​​ ಹಣದ ನೆರವು ನೀಡಲು ಮುಂದಾದ ಬಳಿಕ ಔಷಧಿ ಕಂಡುಕೊಳ್ಳುವ ಪ್ರಕ್ರಿಯೆ ತ್ವರಿತಗತಿಯಲ್ಲಿ ಸಾಗಿದ್ದು, ಈ ಅವಧಿಗೂ ಮೊದಲೇ ಔಷಧಿ ಬಳಕೆ ಲಭ್ಯವಾಗಬಹುದು ಎಂದಿದ್ದಾರೆ.

ಇನ್ನೂ ಕೊರೊನಾಗೆ ಚುಚ್ಚುಮದ್ದು ಅಧ್ಯಯನಕ್ಕಾಗಿ 8 ಬಿಲಿಯನ್​ ಮೊತ್ತ ಸಾಕಾಗುವುದಿಲ್ಲ. ಇದಕ್ಕೆ ಇನ್ನೂ ಹೆಚ್ಚುವರಿ ಹಣದ ಅಗತ್ಯವಿದೆ. ಇದಕ್ಕೂ ಮುಖ್ಯವಾಗಿ ಆ ಲಸಿಕೆ ಎಲ್ಲರಿಗೂ ತಲುಪಬೇಕು, ದೇಶದ ಪ್ರತಿಯೊಬ್ಬರಿಗೂ ದೊರೆಯುವಂತಾಗಬೇಕು, ಯಾರು ಸಹ ಈ ಔಷಧಿಯಿಂದ ಹೊರಗುಳಿಯಬಾರದು ಎಂದಿದ್ದಾರೆ.

ಔಷಧಿ ಕಂಡುಕೊಳ್ಳಲು 100ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಅದರಲ್ಲಿ 7ರಿಂದ 8 ಅಭ್ಯರ್ಥಿಗಳು ಅಗ್ರಸ್ಥಾನದಲ್ಲಿದ್ದಾರೆ. ನಾವು ಕೆಲವೇ ಕೆಲವು ಅರ್ಭರ್ಥಿಗಳ ಮೇಲೆ ಗಮನ ಹರಿಸಿದ್ದೇವೆ ಅವರ ಅಧ್ಯಯನ ಉತ್ತಮ ಫಲಿತಾಂಶ ತರಲಿದೆ. ಇದರಿಂದ ಇನ್ನುಳಿದ ಸಂಶೋಧಕರಿಗೂ ನೆರವಾಗಲಿದೆ ಎಂದಿದ್ದಾರೆ. ಅಲ್ಲದೆ ಲಸಿಕೆಗಳ ಅಭಿವೃದ್ಧಿ ಹಾಗೂ ರೋಗ ನಿರೋಧಕಗಳ ಅಧ್ಯಯನದಲ್ಲಿ 400ಕ್ಕೂ ಹೆಚ್ಚು ವಿಜ್ಞಾನಿಗಳ ಒಕ್ಕೂಟ ದುಡಿಯುತ್ತಿದೆ ಎಂದಿದ್ದಾರೆ.

ಈವರೆಗೆ ಕೊರೊನಾದಿಂದ 4 ದಶಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದರೆ, 2,75,000 ಜನರು ವಿಶ್ವದಾದ್ಯಂತ ಮೃತಪಟ್ಟಿರುವ ವರದಿ ವಿಶ್ವಸಂಸ್ಥೆಗೆ ಲಭಿಸಿದೆ ಎಂದು ಟೆಡ್ರೊಸ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.