ETV Bharat / international

ಟ್ರಂಪ್ ಪುತ್ರನಿಗೂ ತಗುಲಿತ್ತು ಕೊರೊನಾ: ಗುಣಮುಖನಾದ ಬಳಿಕ ಮಾಹಿತಿ ನೀಡಿದ ಮೆಲಾನಿಯಾ - ಡೊನಾಲ್ಡ್ ಟ್ರಂಪ್ ಮಗನಿಗೆ ಕೊರೊನಾ

ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಪುತ್ರ ಬ್ಯಾರನ್​ ಕೂಡ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಸಂಪೂರ್ಣಗಿ ಗುಣಮುಖನಾದ ಬಳಿಕ ಮಾಹಿತಿ ನೀಡಲಾಗಿದೆ.

rump's son Barron tested positive for COVID-19
ಟ್ರಂಪ್ ಪುತ್ರನಿಗೆ ಕೊರೊನಾ ಸೋಂಕು
author img

By

Published : Oct 15, 2020, 9:31 AM IST

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಕೂಡ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಅಮೆರಿಕ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್​ ಕೋವಿಡ್ ಸೋಂಕಿಗೆ ತುತ್ತಾದ ನಂತರ ಬ್ಯಾರನ್​ಗೆ ಪರೀಕ್ಷೆ ನಡೆಸಿದಾಗ ಯಾವುದೇ ಸೋಂಕು ಕಂಡು ಬಂದಿರಲಿಲ್ಲ. ಆದರೆ ಕೆಲ ದಿನ ಬಿಟ್ಟು ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರುವುದು ಪತ್ತೆಯಾಗಿತ್ತು. 14 ವರ್ಷದ ಬ್ಯಾರನ್​ನಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ ಎಂದು ಶ್ವೇತಭವನದ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಬ್ಲಾಗ್‌ನಲ್ಲಿ ವಿವರಿಸಲಾಗಿದೆ.

"ಅವನನ್ನು ಮತ್ತೆ ಪರೀಕ್ಷಿಸಿದಾಗ ನನ್ನ ಭಯ ನಿಜವಾಯಿತು ಮತ್ತು ಬ್ಯಾರನ್​ಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು" ಎಂದು ಮೆಲಾನಿಯಾ ಹೇಳಿಕೊಂಡಿದ್ದಾರೆ. "ಅದೃಷ್ಟವಶಾತ್ ಅವನು ಆರೋಗ್ಯವಂತ ಬಾಲಕನಾಗಿದ್ದ ಮತ್ತು ಯಾವುದೇ ರೋಗ ಲಕ್ಷಣ ಇರಲಿಲ್ಲ. ಒಂದು ರೀತಿಯಲ್ಲಿ ನಾವು ಮೂವರು ಒಂದೇ ಸಮಯದಲ್ಲಿ ಸೋಂಕಿಗೆ ತುತ್ತಾಗಿದ್ದರಿಂದ ಸಂತೋಷಪಟ್ಟಿದ್ದೇವೆ. ನಾವು ಒಬ್ಬರಿಗೊಬ್ಬರು ಕಾಳಜಿ ವಹಿಸಿದೆವು ಮತ್ತು ಒಟ್ಟಿಗೆ ಸಮಯ ಕಳೆದೆವು. ಈಗ ಬ್ಯಾರನ್​ ಸಂಪೂರ್ಣ ಗುಣಮುಖನಾಗಿದ್ದಾನೆ" ಎಂದು ಮೆಲಾನಿಯಾ ತಿಳಿಸಿದ್ದಾರೆ.

ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್​ಗೆ ಕೋವಿಡ್ ಸೋಂಕು ತಗುಲಿದ್ದ ಬಗ್ಗೆ ಮೊದಲೇ ತಿಳಿಸಲಾಗಿತ್ತು. ಆದರೆ ಬ್ಯಾರನ್​ಗೆ ಸೋಂಕು ತಗುಲಿದ್ದ ವಿಚಾರದ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳಲಾಗಿತ್ತು. ಇದೀಗ ಸೋಂಕಿನಿಂದ ಗುಣಮುಖನಾದ ಬಳಿಕ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.