ETV Bharat / international

ಡಿಸ್ಚಾರ್ಜ್ ಬಳಿಕ ಮೊದಲ ಬಾರಿಗೆ ಸಾರ್ವಜನಿಕರೆದುರು ಕಾಣಿಸಿಕೊಂಡ ಟ್ರಂಪ್​ - ಸಾರ್ವಜನಿಕವಾಗಿ ಕಾಣಿಸಿಕೊಂಡ ಟ್ರಂಪ್​

ಕೋವಿಡ್​ನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಹೊರಬಂದ ಬಳಿಕ ಶನಿವಾರ ಮೊದಲ ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಜನರನ್ನುದ್ದೇಶಿಸಿ 18 ನಿಮಿಷಗಳ ಕಾಲ ಮಾತನಾಡಿದರು.

Trump
ಡೊನಾಲ್ಡ್ ಟ್ರಂಪ್
author img

By

Published : Oct 11, 2020, 7:38 AM IST

Updated : Oct 11, 2020, 8:02 AM IST

ವಾಷಿಂಗ್ಟನ್: ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಹೊರಬಂದ ಬಳಿಕ ಮೊದಲ ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಶನಿವಾರ ಶ್ವೇತಭವನದ ಬಾಲ್ಕನಿಯಲ್ಲಿ ನಿಂತ ಟ್ರಂಪ್​ ಮುಖಕ್ಕೆ ಹಾಕಿದ್ದ ಮಾಸ್ಕ್​ ತೆಗೆದು, ಹೊರಗಡೆ ನೆರೆದಿದ್ದ ನೂರಕ್ಕೂ ಹೆಚ್ಚು ಜನರನ್ನುದ್ದೇಶಿಸಿ 18 ನಿಮಿಷಗಳ ಕಾಲ ಮಾತನಾಡಿದರು. ನಾನು ಆರಾಮಾಗಿದ್ದೇನೆ. ನಿಮ್ಮ ಪ್ರಾರ್ಥನೆ ಹಾಗೂ ಶುಭಾಶಯಗಳಿಗೆ ಧನ್ಯವಾದಗಳು ಎಂದು ಜನತೆಗೆ ಟ್ರಂಪ್​ ಕೃತಜ್ಞತೆ ಅರ್ಪಿಸಿದರು.

ಅವರ ಕೈಯಲ್ಲಿ ಇಂಜೆಕ್ಷನ್​ ಚುಚ್ಚಿದ್ದ ಜಾಗದಲ್ಲಿ ಬ್ಯಾಂಡೇಜ್​ ಗೋಚರಿಸುತ್ತಿತ್ತು. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೂರು ವಾರಗಳು ಬಾಕಿಯಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ​ ಜೋ ಬಿಡೆನ್ ವಿರುದ್ಧ ಇದೇ ವೇಳೆ ಟ್ರಂಪ್​ ಹರಿಹಾಯ್ದರು.

​ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್​ಗೆ ಅಕ್ಟೋಬರ್​ 2 ರಂದು ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು. ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರದಿಂದ ಟ್ರಂಪ್ ಡಿಸ್ಚಾರ್ಜ್​ ಆಗಿ ಬಂದು ಐದು ದಿನಗಳ ಬಳಿಕವೂ ಟ್ರಂಪ್​​ರ ಕೋವಿಡ್​ ವರದಿ ನೆಗೆಟಿವ್​ ಬಂದಿದೆಯೇ, ಇಲ್ಲವೇ ಎಂಬುದರ ಕುರಿತು ಮಾಹಿತಿ ಬಹಿರಂಗಪಡಿಸಲು ಶ್ವೇತಭವನದ ಅಧಿಕಾರಿಗಳು ನಿರಾಕರಿಸಿದ್ದರಿಂದ ಟ್ರಂಪ್​ರ ಆರೋಗ್ಯ ಸ್ಥಿತಿಗತಿ ನಿಗೂಢವಾಗಿತ್ತು.

ನಿನ್ನೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಟ್ರಂಪ್​, ಸೋಂಕಿನಿಂದ ಚೇತರಿಸಿಕೊಂಡಿದ್ದು, ಕೊರೊನಾ ವೈರಸ್​ಗೆ ತುತ್ತಾಗುವ ಇತರರಿಗೆ ಸಹಾಯ ಮಾಡಲು ಪ್ಲಾಸ್ಮಾ ದಾನಕ್ಕೆ ಸಿದ್ಧರಿರುವುದಾಗಿ ತಿಳಿಸಿದ್ದರು.

Last Updated : Oct 11, 2020, 8:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.