ವಾಷಿಂಗ್ಟನ್: ಮಿಲಿಟರಿ ಆಸ್ಪತ್ರೆಯಲ್ಲಿ ಕೊರೊನಾದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯ ತಿಳಿಸಿದ್ದಾರೆ.
ಟ್ರಂಪ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ನೌಕಾ ಕಮಾಂಡರ ಡಾ.ಸೇನ್ ಕಾನ್ಲೇ, ಮಿಲಿಟರಿ ಆಸ್ಪತ್ರೆಯಲ್ಲಿ ಟ್ರಂಪ್ ಅವರು ವೀಕೆಂಡ್ ಅನ್ನು ಉತ್ತಮವಾಗಿ ಕಳೆಯುತ್ತಿದ್ದಾರೆ. ಕಳೆದ 24 ಗಂಟೆಗಳಿಂದ ಅವರಿಗೆ ಜ್ವರ ಇಲ್ಲ ಎಂದಿದ್ದಾರೆ.
ಸದ್ಯ ಟ್ರಂಪ್ ಅವರು ಆಕ್ಸಿಜನ್ ಮೇಲೆ ಇಲ್ಲ. ಆದ್ರೆ ಇದಕ್ಕೂ ಮುನ್ನ ಅಧ್ಯಕ್ಷರಿಗೆ ಆಕ್ಸಿಜನ್ ಹಾಕಲಾಗಿತ್ತಾ ಎಂಬುದರ ಬಗ್ಗೆ ಮಾಹಿತಿ ನೀಡಲು ಅವರು ನಿರಾಕರಿಸಿದರು. ಟ್ರಂಪ್ ಅವರಿಗೆ ಕೆಮ್ಮು, ಉಸಿರಾಟದ ಸಮಸ್ಯೆಯಲ್ಲಿ ಚೇತರಿಕೆಯಾಗುತ್ತಿದೆ. ಅವರಿಗೆ ಉತ್ತಮ ಮನೋಭಾವ ಇದೆ ಎಂದು ಹೇಳಿದರು.
ಅಧ್ಯಕ್ಷರಿಗೆ ಶುಕ್ರವಾರ ಕೊರೊನಾ ದೃಢಪಟ್ಟ ಹಿನ್ನೆಲೆ ಟ್ರಂಪ್ ಅವರು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.