ವಿಲ್ಮಿಂಗ್ಟನ್: ಉತ್ತರ ಕೆರೊಲಿನಾದ ಬ್ರನ್ಸ್‌ವಿಕ್ ಕೌಂಟಿಯ ಮೂಲಕ ಸುಂಟರಗಾಳಿ ಬೀಸಿದ್ದು, ಮೂವರು ಕೊನೆಯುಸಿರೆಳೆದಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಮಧ್ಯರಾತ್ರಿ ಸುಂಟರಗಾಳಿ ಅಪ್ಪಳಿಸಿದ್ದು, ಅನೇಕ ಮನೆಗಳು ನಾಶಪಡಿಸಿವೆ. ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗುರುಳಿವೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ.
ಇದು ನಾನು ಈ ಹಿಂದೆಂದೂ ನೋಡಿರದ ಸುಂಟರಗಾಳಿ. ಬಹಳಷ್ಟು ವಿನಾಶವಾಶಗಿದ್ದು, ಇದು ದೀರ್ಘಕಾಲದ ಚೇತರಿಕೆ ಪ್ರಕ್ರಿಯೆಯಾಗಲಿದೆ ಎಂದು ಬ್ರನ್ಸ್‌ವಿಕ್ ಕೌಂಟಿ ಶೆರಿಫ್ ಜಾನ್ ಇಂಗ್ರಾಮ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ: ಭಾರಿ ಹಿಮಪಾತಕ್ಕೆ ಹೆಪ್ಪುಗಟ್ಟಿದ ಟೆಕ್ಸಸ್: 120 ಅಪಘಾತ, ವಿದ್ಯುತ್ ತುರ್ತು ಪರಿಸ್ಥಿತಿ ಘೋಷಣೆ!
ಇನ್ನೂ ಜನರು ಮನೆಗಳಲ್ಲಿ ಸಿಕ್ಕಿಬಿದ್ದಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ಬ್ರನ್ಸ್‌ವಿಕ್ ಕೌಂಟಿ ತುರ್ತುಸ್ಥಿತಿ ನಿರ್ವಹಣೆ ತಿಳಿಸಿದೆ. ವಿಲ್ಮಿಂಗ್ಟನ್ ಅಗ್ನಿಶಾಮಕ ಇಲಾಖೆ ಸುಂಟರಗಾಳಿಯ ನಂತರ ಕಾಣೆಯಾದ ಜನರನ್ನು ಹುಡುಕುವ ಸಲುವಾಗಿ ಸಹಾಯ ಮಾಡಲು ತಂಡಗಳನ್ನು ಕಳುಹಿಸುವುದಾಗಿ ಟ್ವೀಟ್ ಮಾಡಿದೆ.