ETV Bharat / international

ಮೆಕ್ಸಿಕೋ ಟ್ರಕ್ ದುರಂತ : ಬದುಕುಳಿದವರು ಹೇಳಿದ್ದು ಹೀಗೆ.. - ಮೆಕ್ಸಿಕೋ ಟ್ರಕ್ ದುರಂತ

ಬದುಕುಳಿದವರು ಆಸ್ಪತ್ರೆಗೆ ತೆರಳಿದ ನಂತರ ಅವರು ಯಾರೆಲ್ಲ ಸಾವನ್ನಪ್ಪಿರಬಹುದು, ತಮ್ಮೊಂದಿಗೆ ಯಾರಿದ್ದರು ಎಂದು ಕೆಲ ಮಾಹಿತಿ ನೀಡಿದರು. ಟ್ರಕ್​ ರಸ್ತೆಗೆ ಪಲ್ಟಿಯಾದಾಗ ಮಧ್ಯದಲ್ಲಿದ್ದ ನಾವು ಬದುಕುಳಿದೆವು. ಬದಿಯಲ್ಲಿದ್ದ ಕೆಲವರಿಗೆ ಟ್ರಕ್​ ಗೋಡೆಗಳು ಹೊಡೆದು ತೀವ್ರ ಪೆಟ್ಟಾಗಿ ಸಾವನ್ನಪ್ಪಿರಬಹುದೆಂದರು. ಜೊತೆಗೆ ತಾವು ಬದುಕುಳಿದಿದ್ದಕ್ಕೆ ದೇವರಿಗೆ ಧನ್ಯವಾದ ಸಮರ್ಪಿಸಿದರು..

ಮೆಕ್ಸಿಕೋ ಟ್ರಕ್ ದುರಂತ
Mexico truck crash
author img

By

Published : Dec 11, 2021, 5:08 PM IST

ಚಿಯಾಪಾಸ್ (ಮೆಕ್ಸಿಕೋ) : ವಲಸಿಗರನ್ನು ಹೊತ್ತು ಸಾಗುತ್ತಿದ್ದ ಸರಕು ಸಾಗಣೆ ಟ್ರಕ್​ ಉರುಳಿ ಪಾದಚಾರಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 49 ಮಂದಿ ಸಾವನ್ನಪ್ಪಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಿನ್ನೆ ದಕ್ಷಿಣ ಮೆಕ್ಸಿಕೋದಲ್ಲಿ ನಡೆದಿತ್ತು.

ಬದುಕುಳಿದವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಬದುಕುಳಿದವರ ಅಂಗಾಂಗಗಳು ಹಾನಿಗೊಂಡಿವೆ. ಅದೆಷ್ಟೋ ಮಂದಿಗೆ ತೀವ್ರವಾಗಿ ಪೆಟ್ಟಾಗಿ ನೋವಿನಲ್ಲಿ ನರಳುತ್ತಿದ್ದಾರೆ.

ಅಪಘಾತದ ನಂತರ ಸಹಾಯ ಮಾಡಲು ಧಾವಿಸಿದ ಸ್ಥಳೀಯ ನಿವಾಸಿಗಳಲ್ಲಿ ಎನ್ಮ್ಯಾನುಯೆಲ್ ರಾಮ್ನ್ ಹೆರ್ನೆಂಡೆಜ್ ಒಬ್ಬರು. ಹೆಚ್ಚು ವಲಸಿಗರು ಇದ್ದ ಕಾರಣ ಅತಿಯಾದ ತೂಕ ಈ ಘಟನೆಗೆ ಕಾರಣವಾಗಿರಬಹುದು ಎಂದು ಹೇಳಿದರು. ಬದುಕುಳಿದವರ ಮೂಳೆ ಮುರಿದಿವೆ.

ಅಂಗಾಗಗಳು ದುರ್ಬಲಗೊಂಡಿವೆ. ದೇಹದ ಬಹುತೇಕ ಭಾಗಗಳಿಗೆ ತೀವ್ರತರ ಪೆಟ್ಟಾಗಿದೆ. ಆದ್ರೆ, ಸಾವನ್ನಪ್ಪಿದವರನ್ನು ನೆನೆಸಿಕೊಂಡರೆ, ಅಪಘಾತದ ತೀವ್ರತೆಗೆ ಆ ಕ್ಷಣದಲ್ಲೇ ಉಸಿರುಗಟ್ಟಿ ಸತ್ತಿರಬಹುದೇನೋ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬದುಕುಳಿದವರು ಆಸ್ಪತ್ರೆಗೆ ತೆರಳಿದ ನಂತರ ಅವರು ಯಾರೆಲ್ಲ ಸಾವನ್ನಪ್ಪಿರಬಹುದು, ತಮ್ಮೊಂದಿಗೆ ಯಾರಿದ್ದರು ಎಂದು ಕೆಲ ಮಾಹಿತಿ ನೀಡಿದರು. ಟ್ರಕ್​ ರಸ್ತೆಗೆ ಪಲ್ಟಿಯಾದಾಗ ಮಧ್ಯದಲ್ಲಿದ್ದ ನಾವು ಬದುಕುಳಿದೆವು. ಬದಿಯಲ್ಲಿದ್ದ ಕೆಲವರಿಗೆ ಟ್ರಕ್​ ಗೋಡೆಗಳು ಹೊಡೆದು ತೀವ್ರ ಪೆಟ್ಟಾಗಿ ಸಾವನ್ನಪ್ಪಿರಬಹುದೆಂದರು. ಜೊತೆಗೆ ತಾವು ಬದುಕುಳಿದಿದ್ದಕ್ಕೆ ದೇವರಿಗೆ ಧನ್ಯವಾದ ಸಮರ್ಪಿಸಿದರು.

ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಂದಿಷ್ಟು ಮಂದಿ ಮಾತನಾಡಿ, ಟ್ರಕ್ ಅಪ್ಪಳಿಸಿದ ಆ ಕ್ಷಣದಲ್ಲಿ ಕಿರುಚಾಟ ಮತ್ತು ರಕ್ತದ ಭೀಕರ ದೃಶ್ಯವನ್ನು ನೋಡಬೇಕಾಯಿತು. ನಮ್ಮ ಮೇಲೆ ಕೆಲವರು ಬಿದ್ದಿದ್ದರು. ನಾವು ಹೊರ ಬರುತ್ತಿದ್ದಂತೆ ಮತ್ತೆ ಕೆಲವರ ಧ್ವನಿ ಕೇಳಿಸಿ ಅವರನ್ನು ಹೊರಗೆ ಕರೆತರಲಾಯಿತು. ಸತ್ತವರ ರಾಶಿಯಿಂದ ನಾವು ಜೀವಂತವಾಗಿ ಹೊರ ಬರಬೇಕಾಯಿತು ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಮೆಕ್ಸಿಕೋದಲ್ಲಿ ಟ್ರಕ್ ದುರಂತ: 49 ಮಂದಿ ಸಾವು, 58 ಮಂದಿಗೆ ಗಾಯ

ಟ್ರಕ್​ನಲ್ಲಿ ಅತಿ ಹೆಚ್ಚು ಜನರನ್ನು ತುಂಬಲಾಗಿತ್ತು. ಹೆಚ್ಚಿನ ಭಾರವೇ ಅಪಘಾತಕ್ಕೆ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.