ETV Bharat / international

ಶೇರಿಂಗ್ ಈಸ್ ಕೇರಿಂಗ್.. ಇದು ಕೊರೊನಾ ಬಿಕ್ಕಟ್ಟಿಗೆ ಇಂಡೋ-ಅಮೆರಿಕನ್ನರ ಮಂತ್ರ..

ಹಲವಾರು ಮಂದಿ ದೇಶದಿಂದ ಹೊರಗೆ ಕರೆದುಕೊಂಡಲು ಆಗ್ರಹಿಸುತ್ತಾರೆ. ಆದರೆ, ಸಾರಿಗೆ ಹಾಗೂ ಆರೋಗ್ಯ ಮಾರ್ಗದರ್ಶಿ ಸೂತ್ರಗಳು ಇದಕ್ಕೆ ಆಸ್ಪದ ನೀಡುವುದಿಲ್ಲ. ಕೊರೊನಾ ವೈರಸ್ ಕೆಲವರು ಅಪೇಕ್ಷಿಸುತ್ತಿರುವ ವಿಶೇಷ ಸ್ಥಾನಮಾನವನ್ನು ಒದಗಿಸುವುದಿಲ್ಲ.

Sharing is Caring: This is the mantra of Indo Americans for the Corona Crisis
ಶೇರಿಂಗ್ ಈಸ್ ಕೇರಿಂಗ್: ಇದು ಕೊರೊನಾ ಬಿಕ್ಕಟ್ಟಿಗೆ ಇಂಡೋ ಅಮೇರಿಕನ್ನರ ಮಂತ್ರ
author img

By

Published : Apr 5, 2020, 4:02 PM IST

ವಾಷಿಂಗ್ಟನ್: ಅಮೆರಿಕಾ ಸಂಯುಕ್ತ ಸಂಸ್ಥಾನವನ್ನು ನಡುಗಿಸುತ್ತಿರುವ ಕೊರೊನಾ ಸಾಂಕ್ರಾಮಿಕ ರೋಗ ಒಡ್ಡಿರುವ ಸವಾಲನ್ನು ಎದುರಿಸಲು ಅಲ್ಲಿರುವ ಅನಿವಾಸಿ ಭಾರತೀಯ ಕುಟುಂಬಗಳು ಸಜ್ಜಾಗಿವೆ. ಅಸಾಮಾನ್ಯ ರೀತಿಯಲ್ಲಿ ಈ ಸಾಂಕ್ರಾಮಿಕ ರೋಗದ ಸವಾಲನ್ನು ಇಂಡೋ-ಅಮೇರಿಕನ್ ಸಮುದಾಯ ಎದುರಿಸುತ್ತಿದೆ. ಸ್ಥಳೀಯವಾಗಿ ಇರುವ ಭಾರತೀಯ ಸಮುದಾಯ ಹಾಗೂ ವಿಮಾನ ರದ್ದಿನ ಕಾರಣಕ್ಕಾಗಿ ಭಾರತಕ್ಕೆ ಮರಳಲು ಸಾಧ್ಯವಾಗದೆ ಸಿಲುಕಿ ಹಾಕಿಕೊಂಡಿರುವ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಅವರು ನೆರವಿನ ಹಸ್ತ ಚಾಚುತ್ತಿದ್ದಾರೆ.

ಇಂಡೋ-ಅಮೇರಿಕನ್ ವೈದ್ಯರು ಹಾಗೂ ಹೋಟೆಲ್ ಮಾಲೀಕರು ಉಚಿತ ಔಷಧ ಹಾಗೂ ಕೋಣೆಗಳನ್ನು ನೀಡುವ ಮೂಲಕ ಸ್ಪಂದಿಸುತ್ತಿದ್ದಾರೆ. ಸಮುದಾಯದ ನಾಯಕರು ಅಗತ್ಯ ವಸ್ತುಗಳನ್ನು ವಿದ್ಯಾರ್ಥಿಗಳ ಕೋಣೆಗಳಿಗೆ ತಲುಪಿಸುತ್ತಿದ್ದಾರೆ. ಕೆಲವರಿಗೆ ಉಚಿತವಾಗಿ ತಮ್ಮ ಮನೆಗಳಲ್ಲೇ ವಾಸಿಸಲು ಅವಕಾಶ ನೀಡುತ್ತಿದ್ದಾರೆ.

ಕೊರೊನಾ ವೈರಸ್ ಸೃಷ್ಟಿಸಿರುವ ಆತಂಕದಿಂದಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಮಾಧ್ಯಮದ ಶೀರೋನಾಮೆ-ಶೀರ್ಷಿಕೆ (ಹೆಡಿಂಗ್)ಗಳನ್ನು ಓದಿದರೆ, ಭಾರತದಲ್ಲಿರುವ ಇಂತಹ ಅನಿವಾಸಿ ಅಮೆರಿಕನ್ನರ ಬಗ್ಗೆ ಭೀತಿ ಉಂಟಾಗಬಹುದು. ಅಮೆರಿಕಾ ಈಗ ಕೊರೊನಾ ವೈರಸ್‌ನಿಂದ ಜಗತ್ತಿನಲ್ಲೇ ಅತ್ಯಂತ ಸಂಕಷ್ಟಕ್ಕೀಡಾಗಿರುವ ದೇಶ. ಯಾಕೆಂದರೆ, ಅಮೆರಿಕಾದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರಿದ್ದಾರೆ. ಎಲ್ಲಾ 50 ರಾಜ್ಯಗಳಿಗೂ ಕೊರೊನಾ ವೈರಸ್ ಹರಡಿದೆ. ನ್ಯೂಯಾರ್ಕ್ ಕೋವಿಡ್-19ರ ಕೇಂದ್ರ ಬಿಂದುವಾಗಿದೆ. ಈವರೆಗೆ, 2,16,768 ಕೋವಿಡ್-19 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಅದರಲ್ಲಿ 5,137 ಜನ ಸಾವನ್ನಪ್ಪಿದ್ದಾರೆ.

ಈ ಸಂಖ್ಯೆಗಳು ಅತ್ಯಂತ ಭೀಕರ ಸನ್ನಿವೇಶವೊಂದನ್ನ ಸೃಷ್ಟಿಸಿರುವುದನ್ನು ಸೂಚಿಸುತ್ತದೆ. ಅದರಲ್ಲಿ ಸಂಶಯವೇ ಇಲ್ಲ. ಜೊತೆಗೆ ಸಾವಿರಾರು ಕಿ.ಮೀ ದೂರದಲ್ಲಿರುವ ಕುಟುಂಬಗಳಲ್ಲಿ ಇದು ಆತಂಕ ಸೃಷ್ಟಿಸಿದೆ. ಆದರೆ, ಹಲವಾರು ಸಂಸ್ಥೆಗಳು ರಾತ್ರೋರಾತ್ರಿ ತಮ್ಮ ನಿಯಮಗಳನ್ನು ಬದಲಾಯಿಸಿಕೊಂಡು, ಈ ಸವಾಲಿಗೆ ಉತ್ತರ ಕಂಡು ಹಿಡಿಯಲು ಪ್ರಯತ್ನಿಸುತ್ತಿವೆ.

ಹಲವಾರು ಮಂದಿ ದೇಶದಿಂದ ಹೊರಗೆ ಕರೆದುಕೊಂಡಲು ಆಗ್ರಹಿಸುತ್ತಾರೆ. ಆದರೆ, ಸಾರಿಗೆ ಹಾಗೂ ಆರೋಗ್ಯ ಮಾರ್ಗದರ್ಶಿ ಸೂತ್ರಗಳು ಇದಕ್ಕೆ ಆಸ್ಪದ ನೀಡುವುದಿಲ್ಲ. ಕೊರೊನಾ ವೈರಸ್ ಕೆಲವರು ಅಪೇಕ್ಷಿಸುತ್ತಿರುವ ವಿಶೇಷ ಸ್ಥಾನಮಾನವನ್ನು ಒದಗಿಸುವುದಿಲ್ಲ.

ಅಂತಿಮವಾಗಿ ಅಧಿಕೃತ ಮಾರ್ಗದರ್ಶಿ ಸೂತ್ರಗಳನ್ನು ಹಾಗೂ ಅಮೆರಿಕಾ ಸರ್ಕಾರದ ಸೂಚನೆಗಳನ್ನು ಪಾಲಿಸುವುದೇ ಎಲ್ಲರ ಮುಂದಿರುವ ಉತ್ತಮ ಆಯ್ಕೆ. ಈ ಸೂಚನೆಗಳನ್ನು ಅಮೆರಿಕಾ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ದಿನ ನಿತ್ಯ ಪ್ರಕಟಿಸಲಾಗುತ್ತಿರುತ್ತದೆ. ಇವುಗಳನ್ನು ಹೊರತುಪಡಿಸಿ, ಯಾವುದೇ ಗಾಳಿಸುದ್ದಿ ಅಥವಾ ವಾಟ್ಸಾಆ್ಯಪ್ ಸಂದೇಶವನ್ನು ನಂಬದಿರುವುದೇ ಒಳ್ಳೆಯದು. ಅಮೆರಿಕಾದಲ್ಲಿನ ಭಾರತೀಯರಿಗೆ ನಿಯಮಿತ ಸಂಪನ್ಮೂಲ ಹಾಗೂ ಮಾನವ ಶಕ್ತಿಯ ಹೊರತಾಗಿಯೂ ನೆರವು ನೀಡುತ್ತಿರುವ ಭಾರತದ ಅಧಿಕಾರಿಗಳಿಗೆ ಇಂತಹ ಗಾಳಿ ಸುದ್ದಿ ಹೆಚ್ಚಿನ ತಲೆನೋವು ಉಂಟು ಮಾಡುತ್ತಿವೆ.

ಗಮನ ಸೆಳೆಯುವುದಕ್ಕಾಗಿಯೇ ಟ್ವಿಟರ್ ಖಾತೆ ತೆರೆದು ದೂರು ನೀಡುವುದು ಇಂತಹ ಸನ್ನಿವೇಶದಲ್ಲಿ ಉಪಯೋಗಕಾರಿಯಾಗದು. ತಮ್ಮ ಕ್ಷೇತ್ರದ ಮತದಾರನ ಮಗನ ಅಥವಾ ಮಗಳನ್ನು ವಿಮಾನದ ಮೂಲಕ ಕರೆತನ್ನಿ ಎನ್ನುವ ರಾಜಕಾರಣಿಗಳ ಪತ್ರ ಕೂಡಾ ಅಧಿಕಾರಿಗಳ ಮೇಲಿನ ಹೊರೆಯನ್ನು ಜಾಸ್ತಿ ಮಾಡುತ್ತದೆಯೇ ಹೊರತು ಇನ್ನಿತರ ಯಾವುದೇ ರೀತಿಯಲ್ಲಿ ಉಪಯೋಗವಿಲ್ಲ. ಕೇವಲ ಟ್ವಿಟರ್ ಖಾತೆ ಹೊಂದಿಲ್ಲ ಎಂಬ ಕಾರಣಕ್ಕಾಗಿ ನೂರಾರು ಕಿ.ಮೀ ನಡೆಯುವ ಭಾರತದ ವಲಸಿಗರನ್ನು ಇಂತಹ ಪ್ರಯತ್ನಗಳು ಅಣಕಿಸುವಂತೆ ಮಾಡುತ್ತದೆ.

ಸದ್ಯ ವಾಟ್ಸ್‌ಆ್ಯಪ್‌ನಲ್ಲಿ ಹರಡುತ್ತಿರುವ ಗಾಳಿ ಸುದ್ದಿಯಾದ ಏರ್ ಇಂಡಿಯಾ ವಿಮಾನಗಳು ಅಮೆರಿಕಾ ಪ್ರಜೆಗಳನ್ನು ಸ್ವದೇಶಕ್ಕೆ ತಲುಪಿಸಿ ಅಲ್ಲಿಂದ ಭಾರತೀಯರನ್ನು ವಾಪಸ್ ಕರೆದುಕೊಂಡು ಬಂದವು ಎಂಬುದು ಸತ್ಯವಲ್ಲ. ಅಮೆರಿಕಾದ ರಾಯಭಾರಿ ಕಚೇರಿಯೇ ತನ್ನ ಸಂಪನ್ಮೂಲಗಳನ್ನು ಬಳಸಿ ತನ್ನ ಪ್ರಜೆಗಳನ್ನು ಭಾರತದಿಂದ ಸ್ವದೇಶಕ್ಕೆ ಕರೆದೊಯ್ದಿತು. ಅದು ಡೆಲ್ಟಾ ಏರ್‌ಲೈನ್ಸ್‌ ವಿಮಾನಗಳನ್ನು ಬಳಸಿಕೊಂಡಿತೇ ಹೊರತು, ಏರ್ ಇಂಡಿಯಾ ವಿಮಾನಗಳನ್ನಲ್ಲ. ಇಂತಹ ತಪ್ಪು ಮಾಹಿತಿಗಳು, ವಾಟ್ಸ್‌ಆ್ಯಪ್ ಸಂದೇಶಗಳು ಅಧಿಕಾರಿಗಳ ಮೇಲಿನ ಒತ್ತಡ, ಸಂಶಗಳನ್ನು ಹೆಚ್ಚಿಸಿತೇ ಹೊರತು ಬೇರೇನೂ ಲಾಭ ಉಂಟುಮಾಡಲಿಲ್ಲ. "ವಾಸ್ತವಾಂಶಗಳನ್ನು ಮಾತ್ರ ಸ್ವೀಕರಿಸುವುದು ಒಳ್ಳೆಯದು," ಎನ್ನುತ್ತಾರೆ ಅಧಿಕಾರಿಗಳು.

"ಈಗೆಲ್ಲಿರುವಿರೋ ಅಲ್ಲೇ ಇರಿ," ಎಂಬುದು ಈಗಿನ ಮಟ್ಟಿಗೆ ಅತ್ಯುತ್ತಮ ಸಲಹೆ. ಉದ್ಯೋಗಿಗಳ ಕಡಿತದ ನಡುವೆಯೂ, ಭಾರತೀಯ ರಾಯಭಾರ ಕಚೇರಿ ಅತ್ಯಂತ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದೆ. ಕೇವಲ ಮೂರನೇ ಒಂದರಷ್ಟು ಅಧಿಕಾರಿಗಳು ಮಾತ್ರ ಕಚೇರಿಗೆ ಬರುತ್ತಿದ್ದು, ಉಳಿದವರು ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಹಾಗೂ ವೈಯಕ್ತಿಕ ಸುರಕ್ಷತೆಯ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.

ಭಾರತೀಯ ರಾಯಭಾರ ಕಚೇರಿ ಹಾಗೂ ಅದರ ಐದು ಕಾನ್ಸುಲೇಟ್‌ಗಳು ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ಉಳ್ಳ ಎಲ್ಲರಿಗೂ ನೆರವು ನೀಡಲು ಪ್ರಯತ್ನಿಸುತ್ತಿವೆ. ಅಮೆರಿಕಾ ಸರ್ಕಾರದ ನಾನಾ ಸಂಸ್ಥೆಗಳು ಹಾಗೂ ನೆರವಿನ ನಿರೀಕ್ಷೆಯಲ್ಲಿರುವ ಭಾರತೀಯರ ನಡುವೆ ಅದು ಸಂಪರ್ಕದಲ್ಲಿದೆ. ಈ ಪ್ರಯತ್ನವೂ ಅತ್ಯಂತ ಒತ್ತಡದ ಸಂಗತಿಯಾಗಿದೆ.

ಅಮೆರಿಕಾ ಸರಕಾರದ ಗೃಹ ಸಚಿವಾಲಯ, ಆಂತರಿಕ ಸುರಕ್ಷಾ ಇಲಾಖೆ (ಡಿಎಚ್‌ಎಸ್) ಹಾಗೂ ಅಮೇರಿಕಾ ನಾಗರಿಕ ಹಾಗೂ ವಲಸೆ ಸೇವೆಗಳು (ಯುಎಸ್‌ಸಿಐಐಎಸ್) ಇಲಾಖೆಗಳು ಅಮೇರಿಕಾದಲ್ಲಿ ಸಿಲುಕಿ ಹಾಕಿಕೊಂಡಿರುವ ಎಲ್ಲಾ ಭಾರತೀಯರಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿವೆ. ಭಾರತೀಯ ವಿದ್ಯಾರ್ಥಿಗಳು, ಎಚ್1 ಬಿ ವೀಸಾ ಹೊಂದಿರುವವರು, ವೀಸಾ ಅವಧಿ ಮುಗಿದಿರುವವರು, ಅಮೇರಿಕಾ ಪ್ರವಾಸದಲ್ಲಿರುವ ಕುಟುಂಬ ಸದಸ್ಯರು ಹೀಗೆ ಎಲ್ಲರ ಸಮಸ್ಯೆ ಈಗಾಗಲೆ ಅಮೇರಿಕಾ ಸರಕಾರದ ನಾನಾ ಇಲಾಖೆಗಳ ಅಧಿಕಾರಿಗಳ ಅರಿವಿಗೆ ಬಂದಿದೆ.

ಇದು ಕೇವಲ ಭಾರತೀಯರ ಸಮಸ್ಯೆಯಲ್ಲ. ಇತರ ದೇಶಗಳ ನಾಗರಿಕರು ಕೂಡಾ ಇದೇ ತೆರನಾದ ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲರೂ ಸಮಾನ ದು:ಖಿಗಳು; ಒಂದೇ ದೋಣಿಯ ಸಹ ಪಯಣಿಗರು. ಯುಎಸ್‌ಸಿಐಐಎಸ್ ಕೋವಿಡ್ 19 ಸಾಂಕ್ರಾಮಿಕ ರೋಗ ಸೃಷ್ಟಿಸಿರುವ ಈ ಅಸಾಮಾನ್ಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಈ ಎಲ್ಲರ ಬಗ್ಗೆ ಉದಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೂ ಯಾವ ಭಾರತೀಯರ ವೀಸಾ ಅವಧಿ ಮುಕ್ತಾಯ ಹಂತದಲ್ಲಿಇದೆಯೋ ಅವರು ವೀಸಾ ಅವಧಿ ವಿಸ್ತರಣೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಸೂಕ್ತ.

ಹಲವಾರು ಅಮೇರಿಕನ್ ವಿಶ್ವವಿದ್ಯಾನಿಲಯಗಳು ತಮ್ಮ ಹಾಸ್ಟೆಲ್‌ನ್ನು ಇನ್ನೂ ತೆರೆದಿಟ್ಟಿವೆ. ಅಲ್ಲಿ ಭಾರತೀಯ ವಿದ್ಯಾರ್ಥಿಗಳು ಕೊಠಡಿ ಪಡೆದಿದ್ದಾರೆ. ಇದೊಂದು ಅತ್ಯಂತ ಅಪೇಕ್ಷಣೀಯ ಹಾಗೂ ಅಪರೂಪದ ಹೃದಯವಂತಿಕೆಯ ನಿರ್ಧಾರ. ಏಕೆಂದರೆ ವಿಶ್ವವಿದ್ಯಾನಿಲಯದ ಕೆಲ ನೌಕರರು ಈ ಕಾರಣಕ್ಕಾಗಿ ಸೇವೆಗೆ ಹಾಜರಾಗಬೇಕಾಗುತ್ತದೆ. ಕೆಲ ವಿಶ್ವವಿದ್ಯಾನಿಲಯಗಳು ವಿದೇಶಿ ವಿದ್ಯಾರ್ಥಿಗಳಿಗೆ ಸಣ್ಣ ಮೊತ್ತದ ಧನ ಸಹಾಯ ಕೂಡಾ ಮಾಡುತ್ತಿವೆ. ಏಕೆಂದರೆ ಕ್ಯಾಂಪಸ್‌ನಲ್ಲಿ ಅವರು ಮಾಡುತ್ತಿರುವ ಕೆಲಸ ಅವರಿಗೆ ಸಾಕಾಗಲಾರದು ಎಂಬ ಕಾರಣಕ್ಕೆ.

ಕೆಲ ಭಾರತೀಯ ವಿದ್ಯಾರ್ಥಿಗಳು, ಭಾರತ ಅಂತಾರಾಷ್ಟ್ರೀಯ ವಾಯುಯಾನ ನಿಷೇಧ ಮಾಡುವ ಮುನ್ನವೇ ಭಾರತಕ್ಕೆ ಹಿಂತಿರುಗಿದ್ದರು. ಭಾರತಕ್ಕೆ ಹಿಂತಿರುಗಲು ಅಪೇಕ್ಷಿಸಿದ ಭಾರತೀಯರಿಗಾಗಿ ಭಾರತ ರಾಯಭಾರ ಕಚೇರಿ ಹೊಸ ಅನಿವಾಸಿ ನಾಗರಿಕ ಚೀಟಿ ವ್ಯವಸ್ಥೆಯನ್ನು ಆರಂಭಿಸಿದ್ದರು. ಆದರೆ ಕೆಲ ವಿದೇಶಿ ವಾಯುಯಾನ ಸಂಸ್ಥೆಗಳು, ಭಾರತದ ಲಾಕ್‌ಡೌನ್ ಅವಧಿಯ ಮೇಲಣ ಗೊಂದಲದ ಕಾರಣಕ್ಕಾಗಿ ದುಬೈ ಹಾಗೂ ಅಬುದಾಭಿಯಿಂದ ಮುಂದೆ ಹಾರಾಡದಿರಲು ನಿಶ್ಚಯಿಸಿದಾಗ ಗೊಂದಲ ಎದುರಾಗಿತ್ತು.

2 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಮೇರಿಕಾದ ನಾನಾ ವಿಶ್ವವಿದ್ಯಾನಿಲಯಗಳಲ್ಲಿ ಈಗ ನೋಂದಾವಣೆ ಮಾಡಿಕೊಂಡಿದ್ದಾರೆ. ಈ ಪೈಕಿ ಬಹುತೇಕ ಮಂದಿ ಅಲ್ಲಿಯೇ ಸಿಲುಕಿ ಹಾಕಿಕೊಂಡಿದ್ದಾರೆ. ದಿನವಿಡೀ ಕಾರ್ಯ ನಿರ್ವಹಿಸುವ ಸಹಾಯವಾಣಿಯನ್ನು ಈ ವಿದ್ಯಾರ್ಥಿಗಳಿಗಾಗಿ ಭಾರತೀಯ ರಾಯಭಾರ ಕಚೇರಿ ಈಗಾಗಲೆ ಆರಂಭಿಸಿದೆ. ಈ ಸಹಾಯವಾಣಿಯನ್ನು ಕೊರೊನಾ ಸಾಂಕ್ರಾಮಿಕ ರೋಗ ಹರಡಲು ಆರಂಭವಾಗುತ್ತಿದ್ದAತೆ ಆರಂಭಿಸಲಾಯಿತು. ಈ ಸಹಾಯ ವಾಣಿ ಆರಂಭಿಸಿದ ಮೊದಲ ವಾರದಲ್ಲೇ ತರಬೇತಿ ಹೊಂದಿದ ವಿದ್ಯಾರ್ಥಿಗಳು ಸುಮಾರು ೨೦೦ ರಷ್ಟು ಸಹಾಯ ಕರೆಗಳನ್ನು ತಮ್ಮ ಸಹ ವಿದ್ಯಾರ್ಥಿಗಳಿಂದ ಪಡೆದಿದ್ದರು. ಈ ಪೈಕಿ ೭೫%ದಷ್ಟು ಕರೆಗಳು ವೀಸಾ ಹಾಗೂ ಭಾರತಕ್ಕೆ ತೆರವು ಮಾಡುವ ವಿಷಯಗಳ ಮೇಲಾಗಿತ್ತು.

ಅಧಿಕಾರಗಳ ಪ್ರಕಾರ, ಕ್ಯಾಂಪಸ್ ವಿದ್ಯಾರ್ಥಿ ಮುಖಂಡರು, 45 ವಿದ್ಯಾರ್ಥಿ ರಾಯಭಾರಿಗಳು, ಹಾಗೂ ವಿಶ್ವವಿದ್ಯಾನಿಲಯಗಳ ಅಂತಾರಾಷ್ಟ್ರೀಯ ವಿದ್ಯಾರ್ಥಿ ಅಧಿಕಾರಿಗಳ ಮೂಲಕ ಭಾರತದ ರಾಯಭಾರ ಕಚೇರಿ ಸುಮಾರು ೫೦,೦೦೦ಕ್ಕೂ ಹೆಚ್ಚು ಭಾರತೀಯ ಮೂಲದ ವಿದ್ಯಾರ್ಥಿಗಳ ಜತೆಗೆ ಸಂವಹನ ಸಾಧಿಸಿದೆ. ಅವರಿಗೆ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿ, ಅವರಿಗೆ ನೈತಿಕ ಬಲ ತುಂಬಲಾಗಿದೆ.

ವಿದ್ಯಾರ್ಥಿ ಸ್ವಯಂ ಸೇವಕರು, ಈ ವಿದ್ಯಾರ್ಥಿಗಳು ಕೇಳಿದ ಸಾಮಾನ್ಯ ಪ್ರಶ್ನೆಗಳಾದ ವೀಸಾ ಸಮಸ್ಯೆ, ಹೊಸ ವಿದ್ಯಾರ್ಥಿ ವೀಸಾ ವ್ಯವಸ್ಥೆ, ಮತ್ತಿತರ ವಿಷಯಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಲಾಗಿದೆ. ಈ ವಿದ್ಯಾರ್ಥಿ ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ಒಂದೇ ದೋಣಿಯ ಸಹಪಯಣಿಗರಾಗಿರುವುದರಿಂದ ಎಲ್ಲರಿಗೂ ಸಮರ್ಪಕ ಉತ್ತರ ನೀಡಲು ಸಾಧ್ಯವಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಭಾರತ ಮೂಲದ ಅಮೇರಿಕಾ ವೈದ್ಯರ ಸಂಘದ ವೈದ್ಯರು (ಎಎಪಿಐ) ಕೂಡಾ ಈ ಪ್ರಯತ್ನದ ಅವಿಭಾಜ್ಯ ಅಂಗವೇ ಆಗಿದ್ದರು. ಈ ಸಂಘದ ಸದಸ್ಯ ವೈದ್ಯರು, ವಿದ್ಯಾರ್ಥಿಗಳಿಗೆ ಹಾಗೂ ಇತರರಿಗೆ ಉಚಿತ ವೈದ್ಯಕೀಯ ಸಲಹೆ ನೀಡಿದ್ದಾರೆ. ಜತೆಗೆ ಸಂಕಷ್ಟದಲ್ಲಿರುವವರಿಗೆ ಔಷಧೀಯ ನೆರವು ಕೂಡಾ ನೀಡಿದ್ದಾರೆ.

ಏಷ್ಯನ್ ಅಮೇರಿಕನ್ ಹೊಟೆಲ್ ಓನರ್ಸ್ ಅಸೋಸಿಯೇಶನ್ (ಎಎಎಚ್‌ಒಎ)ಯ ಸದಸ್ಯ ಹೊಟೆಲ್‌ಗಳ ಮಾಲೀಕರು ಕ್ಯಾಂಪಸ್ ಮುಚ್ಚಿದ ಕಾರಣಕ್ಕಾಗಿ ತೊಂದರೆ ಅನುಭವಿಸುತ್ತಿದ್ದ ಹಲವಾರು ಭಾರತೀಯ ವಿದ್ಯಾರ್ಥಿಗಳಿಗೆ ಉಚಿತ ಹೊಟೆಲ್ ಕೊಠಡಿಗಳನ್ನು ನೀಡುತ್ತಿದ್ದಾರೆ. ಕೆಲವು ಹೊಟೆಲ್ ಮಾಲೀಕರು ಉಚಿತ ಊಟೋಪಚಾರ ಕೂಡಾ ನೀಡುತ್ತಿದ್ದಾರೆ. ಈ ಎಲ್ಲಾ ಪ್ರಯತ್ನಗಳ ಹಿಂದಿನ ಸಂದೇಶವೊಂದೇ. ವಿಶ್ವವನ್ನೇ (ಅಮೇರಿಕಾ-ಭಾರತವೂ ಸೇರಿದಂತೆ) ನಡುಗಿಸಿದ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲರೂ ಜತೆಯಾಗಿ ಮುನ್ನಡೆಯಬೇಕು ಹಾಗೂ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.