ETV Bharat / international

ವಿಶ್ವಸಂಸ್ಥೆ ತಲುಪಿದ ಸಂಘರ್ಷ: ಇರಾನ್ ಜೊತೆ ಮಾತುಕತೆಗೆ ಸಿದ್ಧವೆಂದ ಅಮೆರಿಕ

ಅಮೆರಿಕ-ಇರಾನ್ ದೇಶಗಳ ನಡುವಿನ ಸಂಘರ್ಷ ವಿಶ್ವಸಂಸ್ಥೆ ಅಂಗಳ ತಲುಪಿದ್ದು, ಮಾತುಕತೆಗೆ ಸಿದ್ಧ ಎಂದು ಅಮೆರಿಕ ಹೇಳುತ್ತಿದೆ.

author img

By

Published : Jan 9, 2020, 4:41 PM IST

US Ready for serious negotiations Iranಮಾತುಕತೆಗೆ ಸಿದ್ದ ಎಂದ ಅಮೆರಿಕ
ಮಾತುಕತೆಗೆ ಸಿದ್ದ ಎಂದ ಅಮೆರಿಕ

ವಾಷಿಂಗ್ಟನ್: ಇರಾನ್‌ ಸೇನೆಯ ಕಮಾಂಡರ್‌ ಸುಲೇಮಾನಿ ಹತ್ಯೆ ನಂತರ ಅಮೆರಿಕ ಮತ್ತು ಇರಾನ್ ನಡುವೆ ಉಂಟಾಗಿರುವ ವೈಷಮ್ಯತೆಯನ್ನು ಶಮನಗೊಳಿಸುವ ಬಗ್ಗೆ ಮಾತುಕತೆಗೆ ತಾನು ಸಿದ್ದವಿರುವುದಾಗಿ ಅಮೆರಿಕ ಹೇಳುತ್ತಿದೆ.

ಈ ಬಗ್ಗೆ ವಿಶ್ವಸಂಸ್ಥೆಗೆ ಅಮೆರಿಕ ಪತ್ರ ಬರೆದಿದ್ದು, ತಮ್ಮ ಆತ್ಮರಕ್ಷಣೆಗಾಗಿ ಜನರಲ್ ಖಾಸಿಮ್ ಸುಲೇಮಾನಿ ಹತ್ಯೆ ಮಾಡಿದ್ದೇವೆ ಎಂದಿದೆ. ಅಂತರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ಉಂಟಾಗುವ ಅಪಾಯವನ್ನು ತಡೆಗಟ್ಟುವ ಗುರಿಯೊಂದಿಗೆ ಮಾತುಕತೆಗೆ ಸಿದ್ಧವಿರುವುದಾಗಿ ವಿಶ್ವಸಂಸ್ಥೆಯಲ್ಲಿರುವ ಅಮೆರಿಕ ರಾಯಬಾರಿ ಪತ್ರದ ಮುಖೇನ ತಿಳಿಸಿದ್ದಾರೆ.

ಆದ್ರೆ ಇನ್ನೊಂದೆಡೆ, ಇರಾಕ್​ನಲ್ಲಿರುವ ತಮ್ಮ ಸೇನಾನೆಲೆಗಳ ಮೇಲೆ ದಾಳಿ ನಡೆಸಿರುವ ಇರಾನ್, ತಾನೂ ಕೂಡಾ ಆತ್ಮರಕ್ಷಣೆಗೆ ದಾಳಿ ಮಾಡಿರುವುದಾಗಿ ತಿಳಿಸಿದೆ. ಇದ್ರ ಜೊತೆಗೆ, ಇರಾನ್‌ನ ವಿಶ್ವಸಂಸ್ಥೆ ರಾಯಭಾರಿ ಮಜೀದ್ ತಖ್ತ್ ರಾವಂಚಿ ಅವರು ಅಮೆರಿಕದ ಮಾತುಕತೆ ಪ್ರಸ್ತಾಪವನ್ನು ನಂಬಲಾಗದು. ಇರಾನ್ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಅಮೆರಿಕ ಜಾರಿಗೆ ತರುತ್ತಿದೆ ಎಂದು ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.