ಡಲ್ಲಾಸ್: ಚಳಿಗಾಲದ ತೀವ್ರ ಉಷ್ಣಾಂಶ ಕುಸಿತದ ಜೊತೆಗೆ ಭಾರಿ ಹಿಮಪಾತದಿಂದಾಗಿ ಅಮೆರಿಕವು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದೆ.
ಟೆಕ್ಸಸ್ ರಾಜ್ಯದಲ್ಲಿ ಮೈನಸ್ 5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಅಲ್ಲಿನ ರಸ್ತೆಗಳಲ್ಲಿ ಹಿಮ ಸಂಗ್ರಹವಾಗುತ್ತಿರುವುದರಿಂದ ವಾಹನಗಳು ಅಪಘಾತಕ್ಕೀಡಾಗುತ್ತಿವೆ.
ಹೂಸ್ಟನ್ ನಗರ ಮತ್ತು ಸುತ್ತಮುತ್ತ ಸುಮಾರು 120 ರಸ್ತೆ ಅಪಘಾತಗಳು ಸಂಭವಿಸಿದ್ದು, 10 ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದೆ. ವಿಪರೀತ ಶೀತದಿಂದಾಗಿ ವಿದ್ಯುತ್ ಬಳಕೆಯಲ್ಲಿ ಹೆಚ್ಚಿನ ಹೆಚ್ಚಳದಿಂದಾಗಿ ವಿದ್ಯುತ್ ಕೊರತೆ ಉಂಟಾಗಿದೆ. ಟೆಕ್ಸಸ್‌ನ ವಿದ್ಯುತ್ ವಿಶ್ವಾಸಾರ್ಹತೆ ಮಂಡಳಿಯು (ಇಆರ್‌ಸಿವಿಒಟಿ) ವಿದ್ಯುತ್ ಕಡಿತಗೊಳಿಸಿದ್ದರಿಂದ ಸಾವಿರಾರು ಜನರು ಬಾಧಿತರಾಗಿದ್ದಾರೆ. ಇನ್ನೂ ಕೆಲವು ದಿನಗಳವರೆಗೆ ವಿದ್ಯುತ್ ಕಡಿತ ಆಗಲಿದ್ದು, ಜನರು ಇದಕ್ಕಾಗಿ ಸಿದ್ಧರಾಗಿರಬೇಕು ಎಂದು ಅಧಿಕಾರಿಗಳು ಮುನ್ಸೂಚನೆ ನೀಡಿದರು.
ಇದನ್ನೂ ಓದಿ: 46 ಪಿಕೆಕೆ ಶಂಕಿತ ಸದಸ್ಯರನ್ನು ಬಂಧಿಸಲು ಟರ್ಕಿ ಆದೇಶ
ಹವಾಮಾನ ಇಲಾಖೆಯು ಮಂಗಳವಾರ ರಾಜ್ಯದ ದಕ್ಷಿಣ ಭಾಗಗಳಲ್ಲಿ 30 ಸೆಂ.ಮೀ ಹಿಮದ ಮುನ್ಸೂಚನೆ ನೀಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾನುವಾರ ರಾತ್ರಿ ಟೆಕ್ಸಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಗಳಲ್ಲಿ ಸಹಕರಿಸುವಂತೆ ಕೇಂದ್ರ ವಿಪತ್ತು ನಿರ್ವಹಣಾ ಸಂಸ್ಥೆಗಳಿಗೆ ನಿರ್ದೇಶನ ನೀಡಿದರು. ಮತ್ತೊಂದೆಡೆ ಹಿಮಪಾತವು ವಿಮಾನ ಪ್ರಯಾಣಕ್ಕೆ ತೀವ್ರ ಅಡ್ಡಿ ಉಂಟುಮಾಡುತ್ತಿದೆ.