ಫಿಲಡೆಲ್ಫಿಯಾ : ನವೆಂಬರ್ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಪ್ರಚಾರ ಕಾರ್ಯ ಜೋರು ಪಡೆಯುತ್ತಿದ್ದು, ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಟ್ರಂಪ್ ಪರವಾಗಿ ಪ್ರಚಾರ ಮಾಡಲು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಫಿಲಡೆಲ್ಫಿಯಾದಲ್ಲಿ ಇಂಡಿಯನ್ ವಾಯ್ಸ್ ಆಫ್ ಟ್ರಂಪ್ ಎಂಬ ಕಾರ್ಯಕ್ರಮ ನಡೆಸಿದ್ದು, ಭಾರತೀಯ ಮೂಲಕ ಅಮೆರಿಕದ ವಾಸಿ ಹಾಗೂ ವಿಶ್ವಸಂಸ್ಥೆಯ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಅವರು ಟ್ರಂಪ್ ಅವರನ್ನು ಹಾಡಿ ಹೊಗಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮವಾಗಿ ಅಧಿಕಾರದಲ್ಲಿ ಸಾಗುತ್ತಿದ್ದಾರೆ. ಉಭಯ ದೇಶಗಳು ರಕ್ಷಣಾ, ವ್ಯಾಪಾರ ಮತ್ತು ಇತರ ಕ್ಷೇತ್ರಗಳಲ್ಲಿ ಪಾಲುದಾರಿಕೆ ಹೊಂದಿವೆ. ಕೊರೊನಾ ನಂತರ ಅಮೆರಿಕಾವು ಆಸ್ಟ್ರೇಲಿಯಾ ಮತ್ತು ಜಪಾನ್ ಜೊತೆಗೆ ಭಾರತದ ಜೊತೆಗೆ ಉತ್ತಮವಾದ ಬಾಂಧವ್ಯ ಹೊಂದಿದ್ದು, ಒಕ್ಕೂಟ ಮಾಡಿಕೊಂಡಿದೆ ಎಂದರು.
ಭಾತರ ದೇಶವು ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶವಾಗಿದ್ದು, ನಮ್ಮ ಮೌಲ್ಯಗಳನ್ನು ಹಂಚಿಕೊಳ್ಳಲು ಸಹಾಯಕವಾಗಿದೆ. ಭಾರತೀಯ ಅಮೆರಿಕನ್ ಸಮುದಾಯದವರು ಯುನೈಡೆಟ್ ಸ್ಟೇಟ್ಸ್ ಗೆ ಸಾಕಷ್ಟು ಕೊಡುಗೆ ನೀಡಿದೆ. ಅಮೆರಿಕವು ವಿಶ್ವದ ಅತ್ಯುತ್ತಮ ದೇಶವಾಗಿದೆ. ಇದೀಗ ನಾವು ಅವರನ್ನು ರಕ್ಷಿಸಿಬೇಕಿದೆ. ಟ್ರಂಪ್ ಅವರು ನಮಗೆ ವ್ಯವಹಾರ ನಡೆಸಲು ಅನುವು ಮಾಡಿಕೊಡುವ ಮೂಲಕ ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹ್ಯಾಲೆ ಭಾರತೀಯ ಅಮೆರಿಕನ್ನರಿಗೆ ಸಂದೇಶ ನೀಡಿದರು.
ದಕ್ಷಿಣ ಕೆರೊಲಿನಾದ ಎರಡು ಅವಧಿಯ ಗವರ್ನರ್ ಆಗಿದ್ದ ಹ್ಯಾಲೆ, ಇದೀಗ ಟ್ರಂಪ್ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.