ವಾಷಿಂಗ್ಟನ್: ಕೋವಿಡ್ ರೂಪಾಂತರಿ ಒಮಿಕ್ರಾನ್ ವಿರುದ್ಧವೂ ಫೈಜರ್ ಲಸಿಕೆಯಲ್ಲದೇ, ಮಾತ್ರೆಯೂ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಬಗ್ಗೆ ಕಂಪನಿಯು ತನ್ನ 2,250-ವ್ಯಕ್ತಿಗಳ ಮೇಲೆ ಅಧ್ಯಯನದ ನಡೆಸಿದ್ದು, ವೈರಸ್ ವಿರುದ್ಧದ ಹೋರಾಟದಲ್ಲಿ ಮಾತ್ರೆಗಳು ಆಶಾದಾಯಕ ರೀತಿಯ ಫಲಿತಾಂಶಗಳನ್ನು ದೃಢಪಡಿಸಿದೆ ಎಂದು ಹೇಳಿದೆ.
ಆರಂಭಿಕ ರೋಗಲಕ್ಷಣಗಳ ನಂತರ ಸ್ವಲ್ಪ ಸಮಯದ ನಂತರ ತೆಗೆದುಕೊಂಡಾಗ ಹೆಚ್ಚಿನ ಅಪಾಯದ ವಯಸ್ಕರಲ್ಲಿ ಔಷಧವು ಆಸ್ಪತ್ರೆ ಮತ್ತು ಸಾವುಗಳನ್ನು ಸುಮಾರು ಶೇ 89 ರಷ್ಟು ಕಡಿಮೆ ಮಾಡಿದೆ.
ಪ್ರಯೋಗಾಲಯ ಪರೀಕ್ಷೆಯಲ್ಲಿ ಫೈಜರ್ ಮಾತ್ರೆಗಳು ಒಮಿಕ್ರಾನ್ ರೂಪಾಂತರದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಉಳಿಸಿಕೊಂಡಿದೆ. ಇದನ್ನು ಅನೇಕ ತಜ್ಞರು ಕೂಡ ಊಹಿಸಿದ್ದರು. ಫೈಜರ್ ಆ್ಯಂಟಿ ವೈರಲ್ ಡ್ರಗ್ ಒಮಿಕ್ರಾನ್ನ ಪ್ರೋಟೀನ್‌ನ ವಿರುದ್ಧ ಹೋರಾಡುವಷ್ಟು ಬಲಯುತವಾಗಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: Karnataka Covid : ರಾಜ್ಯದಲ್ಲಿಂದು 263 ಮಂದಿಗೆ ಕೋವಿಡ್, 7 ಸೋಂಕಿತರ ಸಾವು
ಫೈಜರ್ ಮಾತ್ರೆಯ ಪರೀಕ್ಷಾ ವರದಿಯನ್ನು ಕಳೆದ ವಾರ ಔಷಧ ನಿಯಂತ್ರಣ ಮಂಡಳಿಗೆ ರವಾನಿಸಲಾಗಿದೆ. ಇದು ಯಶಸ್ಸು ಕಂಡಲ್ಲಿ ಕೊರೊನಾ ವಿರುದ್ಧ ಲಸಿಕೆಯ ಜೊತೆಗೆ ಮಾತ್ರೆಯೂ ಲಭ್ಯವಾಗಲಿದೆ. ಅಲ್ಲದೇ, ಫೈಜರ್ ಕಂಪನಿ ಹೇಳಕೊಂಡಂತೆ ಇದು ಶೇ.89 ರಷ್ಟು ಸಾವಿನ ಪ್ರಮಾಣವನ್ನು ತಡೆದು, ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿ ಆಸ್ಪತ್ರೆಗೆ ದಾಖಲಾಗುವುದನ್ನು ಇದು ತಡೆಯಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಇದಲ್ಲದೇ, ಮೆರ್ಕ್ ಕೂಡ ತನ್ನ ಮಾತ್ರೆಗಳು ಕೊರೊನಾ ವಿರುದ್ಧ ಶೇ.30 ರಷ್ಟು ಪರಿಣಾಮಕಾರಿಯಾಗಿದೆ. ಮಾತ್ರೆಗಳ ಅಂತಿಮ ಪರೀಕ್ಷೆ ಮಾತ್ರ ಬಾಕಿ ಇದೆ ಎಂದು ಕಂಪನಿ ಹೇಳಿಕೊಂಡಿದೆ.