ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವು (ಯುಎನ್‌ಡಿಪಿ) ಓಷನ್ ಇನ್ನೋವೇಶನ್ ಚಾಲೆಂಜ್ (ಒಐಸಿ) 2020ರ ವಿಜೇತರನ್ನು ಘೋಷಿಸಿದೆ.
ಒಐಸಿ ಯುಎನ್‌ಡಿಪಿ ಪ್ರಾರಂಭಿಸಿದ ಒಂದು ವಿಶಿಷ್ಟ ಕಾರ್ಯವಿಧಾನವಾಗಿದ್ದು, ಸ್ವೀಡನ್ ಮತ್ತು ನಾರ್ವೆಯ ಬೆಂಬಲದೊಂದಿಗೆ, ಓಶನ್ ಎಸ್‌ಡಿಜಿ 14ರ ಪ್ರಗತಿಯನ್ನು ವೇಗಗೊಳಿಸಲು ಸಾಗರ ಮತ್ತು ಕರಾವಳಿ ರಕ್ಷಣೆಗೆ ನವೀನ ವಿಧಾನಗಳನ್ನು ಗುರುತಿಸುವ, ಹಣಕಾಸು ಒದಗಿಸುವ ಮತ್ತು ಮಾರ್ಗದರ್ಶನ ನೀಡುವ ಮೂಲಕ ಜೀವನೋಪಾಯವನ್ನು ಉಳಿಸಿಕೊಳ್ಳುವ ಮತ್ತು ಮುನ್ನಡೆಯಲು 'ನೀಲಿ ಆರ್ಥಿಕತೆ'ಯನ್ನು ಅಭಿವೃದ್ಧಿಪಡಿಸುವುದಾಗಿದೆ.
ವಿಜೇತ ಆವಿಷ್ಕಾರಗಳು ಪ್ಲಾಸ್ಟಿಕ್ ಉತ್ಪನ್ನಗಳಂತೆ ಹಾನಿಕರವಲ್ಲದ ಸಾವಯವ ಉತ್ಪನ್ನಗಳನ್ನು ಬಳಸುವಂತಹ ಸಮುದ್ರ ಮಾಲಿನ್ಯವನ್ನು ಕಡಿಮೆ ಮಾಡಲು ತಾಂತ್ರಿಕ, ನೀತಿ ಮತ್ತು ನಿಯಂತ್ರಕ ವಿಧಾನಗಳ ವೈವಿಧ್ಯಮಯ ವ್ಯಾಪ್ತಿಯನ್ನು ಒಳಗೊಂಡಿವೆ.
ಸಾಗರಗಳ ವಿಶ್ವಸಂಸ್ಥೆಯ ವಿಶೇಷ ರಾಯಭಾರಿ ಪೀಟರ್ ಥಾಮ್ಸನ್ 202ರ ಇನ್ನೋವೇಟರ್‌ಗಳಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿ, "ಗ್ರಹದ ಮೇಲ್ಮೈಯ 70%ದಷ್ಟು ಭಾಗವನ್ನು ಆವರಿಸಿರುವ ಸಮುದ್ರದ ರಕ್ಷಣೆ ಅತ್ಯಗತ್ಯ" ಎಂದು ಹೇಳಿದರು.