ನ್ಯೂಯಾರ್ಕ್: ಈಗಾಗಲೇ ವಿಶ್ವದಾದ್ಯಂತ ಮಹಾಮಾರಿ ಕೊರೊನಾಗೆ 11,000ಕ್ಕೂ ಅಧಿಕ ಜನ ಪ್ರಾಣತೆತ್ತಿದ್ದು, ಇದನ್ನು ನಿಗ್ರಹಿಸಲು ವಿಶ್ವದಾದ್ಯಂತ ಶತಕೋಟಿ ಜನರು ತಮಗೆ ಮನೆಯಲ್ಲಿ ದಿಗ್ಬಂಧನ ಹೇರಿಕೊಂಡಿದ್ದಾರೆ.
ಕೊರೊನಾದಿಂದಾಗಿ ಇಡೀ ದೇಶವೇ ಸ್ತಬ್ದವಾಗಿದ್ದು, ಸಾರಿಗೆ ಸಂಪರ್ಕ, ಶಾಲಾ-ಕಾಲೇಜು, ಕಚೇರಿಗಳಿಗೆಲ್ಲಾ ಬೀಗ ಬಿದ್ದಿದ್ದು, ಲಕ್ಷಾಂತರ ಕೆಲಸಗಾರರು ಮನೆಯಿಂದಲೇ ಕೆಲಸ ನಿರ್ವಹಿಸುವಂತಾಗಿದೆ.
ವೈರಸ್ನಿಂದಾಗಿ ಸಾವಿನ ಸಂಖ್ಯೆ ವಿಶ್ವಾದ್ಯಂತ 11,000 ಗಡಿ ದಾಟಿದೆ, ಇಟಲಿ ಒಂದರಲ್ಲೇ 4,000 ಜನ ಇದುವರೆಗೂ ಪ್ರಾಣ ಬಿಟ್ಟಿದ್ದು, ಅದು ಇನ್ನೂ ಮುಂದುವರೆಯುತ್ತಲೇ ಇದೆ.
ಎಎಫ್‌ಪಿ ಲೆಕ್ಕಾಚಾರದ ಪ್ರಕಾರ, ವಿಶ್ವದ 35 ದೇಶಗಳ ಅಂದಾಜು 900 ಮಿಲಿಯನ್ ಜನ ತಮ್ಮ ಮನೆಗಳಲ್ಲೇ ಇರಲು ನಿರ್ಧರಿಸಿದ್ದಾರೆ. ಇನ್ನೂ 600 ಮಿಲಿಯನ್ ಜನರು ಸರ್ಕಾರದ ಲಾಕ್ಡೌನ್ ಆದೇಶದಿಂದಾಗಿ ಮನೆ ಸೇರಿಕೊಂಡಿದ್ದಾರೆ.