ETV Bharat / international

ಮಂಗಳ ಗ್ರಹದಿಂದ ವರ್ಣರಂಜಿತ ಚಿತ್ರಗಳನ್ನು ನಾಸಾಗೆ ಕಳುಹಿಸಿದ ರೋವರ್​​ - ಪರ್ಸೆವೆರೆನ್ಸ್ ರೋವರ್

ನಾಸಾ ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳ ಪರಿಶ್ರಮದ ಫಲವಾದ ರೋವರ್, ಮಂಗಳ ಗ್ರಹದಿಂದ ವರ್ಣರಂಜಿತ ಫೋಟೋಗಳನ್ನು ಕಳುಹಿಸುತ್ತಿದೆ.

rover
ಮಂಗಳ ಗ್ರಹದಿಂದ ವರ್ಣರಂಜಿತ ಚಿತ್ರಗಳನ್ನು ನಾಸಾಗೆ ಕಳುಹಿಸಿದ ರೋವರ್​​
author img

By

Published : Feb 20, 2021, 1:39 PM IST

Updated : Feb 20, 2021, 3:22 PM IST

ಕ್ಯಾಲಿಫೋರ್ನಿಯಾ (ಅಮೆರಿಕ): ಮೊನ್ನೆಯಷ್ಟೇ ಮಂಗಳ ಗ್ರಹದ ಮೇಲೆ ಲ್ಯಾಂಡ್​ ಆಗಿರುವ ರೋವರ್, ಒಂದು ದಿನದ ಬಳಿಕ ಕೆಲವು ಚಿತ್ರಗಳನ್ನು ನಾಸಾಗೆ ಕಳುಹಿಸಿದೆ.

rover
ರೋವರ್​​ ಕಳುಹಿಸಿದ ಚಿತ್ರ

ಪರ್ಸೆವೆರೆನ್ಸ್ ರೋವರ್‌ನ ಕ್ಯಾಮೆರಾಗಳು ಸೆರೆಹಿಡಿದ ಇವು ವರ್ಣರಂಜಿತವಾಗಿದ್ದು, ಈ ಹಿಂದಿನ ರೋವರ್ ಕೇವಲ ಕಪ್ಪು-ಬಿಳುಪು ಫೋಟೋಗಳನ್ನು ಕಳುಹಿಸುತ್ತಿತ್ತು. ನಾಸಾ ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳ ಪರಿಶ್ರಮದ ಫಲವಾದ ರೋವರ್​, ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಮಾಹಿತಿಗಳನ್ನು ರವಾನಿಸಲಿದೆ ಎಂಬ ವಿಶ್ವಾಸ ನಾಸಾದ್ದಾಗಿದೆ.

rover
ರೋವರ್​​ ಕಳುಹಿಸಿದ ಚಿತ್ರ

ಇದನ್ನೂ ಓದಿ: ಮಂಗಳನಲ್ಲಿ ರೋವರ್ ಲ್ಯಾಂಡಿಂಗ್​: ಭಾರತೀಯ ಮೂಲದ ವಿಜ್ಞಾನಿಯ ಮಹತ್ವದ ಪಾತ್ರ

ಮಂಗಳನ ಅಂಗಳದಲ್ಲಿ ಪರ್ಸೆವೆರೆನ್ಸ್ ಹೆಸರಿನ ರೊಬಾಟಿಕ್‌ ರೋವರ್​ ಅನ್ನು ಯಶಸ್ವಿಯಾಗಿ ನಾಸಾ ಇಳಿಸಿದೆ. ಮಂಗಳ ಗ್ರಹದಲ್ಲಿನ ಸೂಕ್ಷ್ಮಾಣು ಜೀವಿಗಳ ಕುರುಹು, ಅಲ್ಲಿನ ಮಣ್ಣು ಹಾಗೂ ವಾತಾವರಣದ ಬಗ್ಗೆ ಅಧ್ಯಯನ ನಡೆಸಲು ಈ ರೋವರ್ ಸಹಾಯಕವಾಗಲಿದೆ. ಮಂಗಳ ಅಂಗಳ ತಲುಪಿದ ಬಳಿಕ ಅಲ್ಲಿನ ಮೊದಲ ಫೋಟೋವನ್ನು ರೋವರ್ ಕಳುಹಿಸಿತ್ತು.

rover
ರೋವರ್​​ ಕಳುಹಿಸಿದ ಚಿತ್ರ

ಇನ್ನು ಭಾರತೀಯ-ಅಮೆರಿಕ ಮೂಲದ ಡಾ.ಸ್ವಾತಿ ಮೋಹನ್ ಅವರು ಮಂಗಳ ಗ್ರಹದಲ್ಲಿ ರೋವರ್ ಲ್ಯಾಂಡ್ ಮಾಡುವ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

Last Updated : Feb 20, 2021, 3:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.