ವಾಷಿಂಗ್ಟನ್ : ಯೂರೋಪಿನ ಕೊಲಂಬಸ್ ಪ್ರಯೋಗಾಲಯದಲ್ಲಿ ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ (ನಾಸಾ) ಹೊಸ ಸಂಶೋಧನೆಯನ್ನು ಕೈಗೊಂಡಿದ್ದು, ಸೂಕ್ಷ್ಮ ಗುರುತ್ವದಲ್ಲಿ ಸಸ್ಯಗಳನ್ನು ಬೆಳೆಸಲು ಮುಂದಾಗಿದೆ.
ಗಗನಯಾತ್ರಿಗಳಿಗೆ ತಾಜಾ ಆಹಾರ ಅವಶ್ಯವಿದ್ದು, ಅವರ ದೇಹಕ್ಕೆ ಜೀವಸತ್ವಗಳನ್ನು ಒದಗಿಸುವ ಸಲುವಾಗಿ ತರಕಾರಿಯನ್ನು ಬೆಳೆಯಲು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಯತ್ನಿಸುತ್ತಿದೆ.
ಕೆಲವು ಸಸ್ಯಗಳು ಕೆಂಪು ಮತ್ತು ನೀಲಿ ಬೆಳಕಿಗೆ ಉತ್ತಮವಾಗಿ ಸ್ಪಂದಿಸುತ್ತವೆ ಎಂದು ಸಂಶೋಧನೆಯಿಂದ ಗೊತ್ತಾಗಿದ್ದು, ಸಸಿಗಳನ್ನು ಬೆಳೆಯಲು ಸೂಕ್ಷ್ಮ ಗುರುತ್ವ ಅನುಕೂಲಕರವಾಗಿದೆ.
ಈಗ ಸದ್ಯಕ್ಕೆ ಮೂಲಂಗಿಯನ್ನು ಬೆಳೆಯಲು ನಿರ್ಧರಿಸಲಾಗಿದ್ದು, ಮಣ್ಣಿಗೆ ಬೇರೂರಲು ಗುರುತ್ವಾಕರ್ಷಣೆ ಇರದ ಕಾರಣ, ದಿಂಬುಗಳಲ್ಲಿ ಬೆಳೆಸಲಾಗುತ್ತಿದೆ. ಇದು ಗೊಬ್ಬರ ಹಾಗೂ ನೀರನ್ನು ಸಸಿಗಳಿಗೆ ಉಣಿಸಲು ಸಹಕಾರಿಯಾಗಿದೆ.
ಮೂಲಂಗಿ ಅವು ಅಲ್ಪಾವಧಿಯಲ್ಲಿ ಬೆಳೆಯುವ ತರಕಾರಿಯಾಗಿದ್ದು, ಪೌಷ್ಟಿಕ ಆಹಾರವಾಗಿದೆ. ಈಗ ಬೆಳೆದ ಮೂಲಂಗಿಯನ್ನು ಅಧ್ಯಯನಕ್ಕಾಗಿ ಭೂಮಿಗೆ ಕಳುಹಿಸಲಾಗುತ್ತದೆ.
ಅಮೆರಿಕದ ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸಸ್ಯಗಳ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಇದನ್ನು ನಿಯಂತ್ರಿಸಲಾಗುತ್ತಿದೆ. ಎಲ್ಇಡಿ ದೀಪಗಳು, ಜೇಡಿಮಣ್ಣು, 180ಕ್ಕೂ ಹೆಚ್ಚು ಸೆನ್ಸಾರ್ಗಳು, ಕ್ಯಾಮೆರಾಗಳನ್ನು ಇದು ಹೊಂದಿದೆ.