ETV Bharat / international

ಮರೆಯಲಾಗುತ್ತಿಲ್ಲ ಭಾರತದ ಪ್ರವಾಸ...ಟ್ವಿಟ್ಟರ್​​ನಲ್ಲಿ ಸವಿನೆನಪು ಮೆಲಕು ಹಾಕಿದ ಮೆಲಾನಿಯಾ!

author img

By

Published : Feb 29, 2020, 4:54 PM IST

Updated : Feb 29, 2020, 5:04 PM IST

ಭಾರತದ ಪ್ರವಾಸ ಯಶಸ್ವಿಯಾಗಿ ಮುಗಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಆತನ ಪತ್ನಿ ಮೆಲಾನಿಯಾ ಈಗಾಗಲೇ ಸ್ವದೇಶಕ್ಕೆ ತೆರಳಿದ್ದು, ಇದರ ಮಧ್ಯೆ ಕೂಡ ಟ್ರಂಪ್​ ಪತ್ನಿ ಭಾರತದ ಪ್ರವಾಸದ ಬಗ್ಗೆ ಮೆಲಕು ಹಾಕಿದ್ದಾರೆ.

Melania trump recalls india vistit in her tweets

ನ್ಯೂಯಾರ್ಕ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಭಾರತದ ಪ್ರವಾಸ ಮುಗಿಸಿ ವಾರಗಳು ಕಳೆದುಹೋಗಿವೆ. ಇಷ್ಟಾದರೂ ಸವಿನೆನಪು ಮಾತ್ರ ಅವರ ಮನದಲ್ಲಿ ಇನ್ನುಹಾಗೇ ಉಳಿದುಕೊಂಡಿವೆ.

ಅಮೆರಿಕ ತೆರಳಿದ ಬಳಿಕ ಭಾರತದ ಪ್ರವಾಸದ ಕುರಿತು ಮೆಲಾನಿಯಾ ಸರಣಿ ಟ್ವೀಟ್​ ಮಾಡಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಅವರಿಗೆ ಧನ್ಯವಾದ ಹೇಳಿದ್ದಾರೆ.

ತಮ್ಮ ಟ್ಟಿಟ್ಟರ್​​ನಲ್ಲಿ ರಾಷ್ಟ್ರಪತಿ ಭವನದಲ್ಲಿ ತಮಗೆ ಸಿಕ್ಕ ಅದ್ಧೂರಿ ಸ್ವಾಗತ, ಔತಣಕೂಟ, ಹಾಗೂ ಅಹಮದಾಬಾದ್​ಗೆ ಬಂದಿಳಿದ ವೇಳೆ, ಪ್ರಧಾನಿ ನರೇಂದ್ರ ಮೋದಿ ಸ್ವಾಗತ ಮಾಡಿಕೊಂಡ ರೀತಿಗೆ ಫಿದಾ ಆಗಿದ್ದು, ಸುಂದರವಾದ ದೇಶದಲ್ಲಿ ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿರುವುದಕ್ಕೆ ಧನ್ಯವಾದ ಎಂದಿದ್ದಾರೆ.

  • Thank you President @Rashtrapatibhvn and First Lady Savita Kovind for the warm welcome to the Presidential Palace. It was a beautiful day celebrating the friendship between our two nations 🇮🇳🇺🇸 pic.twitter.com/ZvzD0ghFXg

    — Melania Trump (@FLOTUS) February 28, 2020 " class="align-text-top noRightClick twitterSection" data=" ">

ಇದೇ ವೇಳೆ ಅವರು ದೆಹಲಿ ಶಾಲೆಗೆ ಭೇಟಿ ನೀಡಿದ್ದ ವೇಳೆ ಮಾಹಿತಿ ನೀಡಿರುವ ಅಲ್ಲಿನ ಶಿಕ್ಷಕಿ ಮನು ಗುಲಾಟಿ ಅವರಿಗೂ ಥ್ಯಾಂಕ್ಸ್​ ಹೇಳಿದ್ದು, "Thank you - Loved meeting you all! Continue to #BeBest," ಎಂದು ಬರೆದುಕೊಂಡಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಟ್ರಂಪ್​ ಮಗಳು ಇವಾಂಕಾ ಕೂಡ ಇನ್​ಸ್ಟಾಗ್ರಾಮ್​ನಲ್ಲಿ ಭಾರತದಲ್ಲಿನ ಪ್ರವಾಸದ ಕೆಲವೊಂದು ಫೋಟೋ ಹಾಕಿಕೊಂಡಿದ್ದರು.

Last Updated : Feb 29, 2020, 5:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.