ಒಟ್ಟಾವ: ಕೆನಡಾ ಸಂಸತ್ತಿನ ಸಾಮಾನ್ಯ ಸಭೆಗೆ ಭಾರತೀಯ ಮೂಲದ ಜಗಮೀತ್ ಸಿಂಗ್ ಪ್ರತಿಪಕ್ಷದ ಪ್ರಥಮ ಬಿಳಿಯರಲ್ಲದ ಮುಖಂಡನೆಂಬ ಶ್ರೇಯಸ್ಸಿಗೆ ಪಾತ್ರವಾಗಿದ್ದಾರೆ. ಈ ಮೂಲಕ ಸಾಗರದಾಚೆ ಭಾರತೀಯನೋರ್ವ ಇತಿಹಾಸ ಸೃಷ್ಟಿಸಿದ್ದಾರೆ.
40 ವರ್ಷದ ಜಗಮೀತ್ ಸಿಂಗ್ 'ನ್ಯೂ ಡೆಮಾಕ್ರಟಿಕ್ ಪಾರ್ಟಿ'ಯ ನಾಯಕರಾಗಿ ಸಿಖ್ ಪೇಟ ಧರಿಸಿ ಸಂಸತ್ತು ಪ್ರವೇಶಿಸಿದ್ದಾರೆ. ಫೆ. 25ರಂದು ನಡೆದ ಫೆಡರಲ್ ಉಪ ಚುನಾವಣೆಯಲ್ಲಿ ಸಿಂಗ್ ಸಂಸತ್ತಿಗೆ ಆಯ್ಕೆಯಾಗಿದ್ದರು.
ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡು ಅವರ ಸಂಪುಟಕ್ಕೆ ಭಾರತೀಯ ಮಹಿಳೆಯೊಬ್ಬರ ಸೇರ್ಪಡೆಯ ನಂತರ, ಸಿಂಗ್ ನ್ಯೂ ಡೆಮಾಕ್ರಟಿಕ್ ಪಾರ್ಟಿಯ ನಾಯಕರಾಗಿ ನೇಮಕಗೊಂಡಿದ್ದು ಕಾಕತಾಳೀಯವಾಗಿದೆ. ಚುನಾಯಿತರಾಗಿ ಸಂಸತ್ಗೆ ಪ್ರವೇಶಿಸಿದ ಬಳಿಕ ಸಿಂಗ್ ಅವರು, ವಾರದ ಹಿಂದೆ ಮಸೀದಿ ಮೇಲೆ ನಡೆದ ಭಯೋತ್ಪಾದಕರ ದಾಳಿ ಖಂಡಿಸಿ ಮಾತನಾಡಿದರು.