ETV Bharat / international

ಭಾರತ ನಮಗಾಗಿ ಇತ್ತು, ಇದೀಗ ನಾವು ಅವರಿಗಾಗಿ ಇರುತ್ತೇವೆ: ಅಮೆರಿಕ ಅಧ್ಯಕ್ಷರ ವಾಗ್ದಾನ - ಭಾರತಕ್ಕೆ ಯುಎಸ್​ ಸಹಾಯ

ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವು ನೀಡಲು ಬೈಡೆನ್ ಆಡಳಿತ ಮುಂದಾಗುತ್ತಿದ್ದಂತೆಯೇ ಉಭಯ ನಾಯಕರು ಸೋಮವಾರ ದೂರವಾಣಿ ಕರೆ ಮೂಲಕ ಮಾತನಾಡಿದ್ದರು.

US President Biden
ಜೋ ಬೈಡನ್-ನರೇಂದ್ರ ಮೋದಿ
author img

By

Published : Apr 27, 2021, 8:46 AM IST

ವಾಷಿಂಗ್ಟನ್: ಅಮೆರಿಕದ ಜನರ ಸಂಕಷ್ಟದ ಸಮಯದಲ್ಲಿ ಭಾರತ ಸಹಕಾರ ನೀಡಿದೆ. ಇದೀಗ ಭಾರತ ಅತ್ಯಂತ ಕೆಟ್ಟ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು,ಅಮೆರಿಕ ಸಕಲ ರೀತಿಯಲ್ಲೂ ಬೆಂಬಲ ನೀಡಲಿದೆ ಎಂದು ಅಧ್ಯಕ್ಷ ಜೋ ಬೈಡನ್ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ದೂರವಾಣಿ ಕರೆಯ ಬಳಿಕ ಭರವಸೆ ಕೊಟ್ಟರು.

ಶ್ವೇತಭವನವು ಘೋಷಿಸಿದ ತುರ್ತು ಸಹಾಯವಾದ ಆಮ್ಲಜನಕ ಸರಬರಾಜು, ಕೊರೊನಾ ಲಸಿಕೆಗಳ ತಯಾರಿಕೆಗೆ ಕಚ್ಚಾ ವಸ್ತುಗಳು ಪೂರೈಕೆ, ಪಿಪಿಯ ಕಿಟ್​ಗಳು ಭಾರತಕ್ಕೆ ಏ.26ರಂದು ಆಗಮಿಸಿದೆ.

"ಭಾರತ ನಮಗಾಗಿ ಇತ್ತು. ಇದೀಗ ನಾವು ಅವರಿಗಾಗಿ ಇರುತ್ತೇವೆ. ನಾನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೇನೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ತುರ್ತು ನೆರವು ಮತ್ತು ಸಂಪನ್ಮೂಲಗಳನ್ನು ಒದಗಿಸಲು ಅಮೆರಿಕ ಸಂಪೂರ್ಣ ಬೆಂಬಲ ನೀಡಲಿದೆ" ಎಂದು ಬೈಡೆನ್ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

  • Just as India sent assistance to the United States as our hospitals were strained early in the pandemic, we are determined to help India in its time of need. https://t.co/SzWRj0eP3y

    — President Biden (@POTUS) April 25, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಭಾರತಕ್ಕೆ ಕಚ್ಚಾ ವಸ್ತು ಪೂರೈಕೆಗೆ ಯುಎಸ್​​ ಒಪ್ಪಿಗೆ: ಬೈಡನ್​​ ಜೊತೆ ನಮೋ ಮಾತು

ಜನವರಿ 20 ರಂದು ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡನ್ ಪ್ರಮಾಣವಚನ ಸ್ವೀಕರಿಸಿದ ನಂತರ ಉಭಯ ನಾಯಕರ ನಡುವಿನ ಎರಡನೇ ದೂರವಾಣಿ ಸಂಭಾಷಣೆ ಇದಾಗಿದೆ. ಉಭಯ ನಾಯಕರ ನಡುವೆ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆದಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.