ಹ್ಯೂಸ್ಟನ್: ಪ್ರಧಾನಿ ಮೋದಿ ಅಮೆರಿಕ ಪ್ರವಾಸದಲ್ಲಿದ್ದು, ಇಂದು 'ಹೌಡಿ ಮೋದಿ' ಎನ್ನುವ ಸಮಾರಂಭದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಜನಗಣಮನ ಹಾಡಲಿದ್ದಾರೆ ಈ ವಿಶೇಷ ಚೇತನ!
'ಹೌಡಿ ಮೋದಿ' ಕಾರ್ಯಕ್ರಮ ಆಯೋಜನೆಯಾದ ದಿನದಿಂದ ಭಾರೀ ಪ್ರಚಾರ ಪಡೆದುಕೊಳ್ಳುತ್ತಿದ್ದು, ಇದನ್ನು ಗಮನಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವೇ ಮುತುವರ್ಜಿ ವಹಿಸಿ ಸಮಾರಂಭದಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ.
ಎಲ್ಲಿ, ಯಾವಾಗ, ಎಷ್ಟು ಗಂಟೆಗೆ..?
'ಹೌಡಿ ಮೋದಿ' ಎನ್ನುವ ಕಾರ್ಯಕ್ರಮ ಅಮೆರಿಕರನ್ನು ಮಾತ್ರವಲ್ಲದೇ ವಿಶ್ವದ ಗಮನವನ್ನೇ ತನ್ನತ್ತ ಸೆಳೆದಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿಯ ಭಾಷಣಕ್ಕೆ ಅಮೆರಿಕ ಹೌಸ್ಟನ್ ನಗರ ಸಾಕ್ಷಿಯಾಗಲಿದೆ.
ಹ್ಯೂಸ್ಟನ್ನಲ್ಲಿ ಪ್ರಧಾನಿ ಮೋದಿ... ಈ ನಡೆ ಕಂಡು 'ನಮೋ' ಅಂದ್ರು ನೆಟಿಜನ್ಗಳು!
ಹೌಸ್ಟನ್ನ ಎನ್ಆರ್ಜಿ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ರಾತ್ರಿ 8.30ಕ್ಕೆ ಆರಂಭವಾಗಲಿದ್ದು, 11.30ರ ತನಕ ನಡೆಯಲಿದೆ.
-
Are your ready for #HowdyModi!
— BJP Gujarat (@BJP4Gujarat) September 22, 2019 " class="align-text-top noRightClick twitterSection" data="
Prime Minister Shri @narendramodi will address a historic community summit at NRG Stadium in Houston, Texas, USA on 22nd September 2019 from 8.30 pm onwards.
Stay tuned. pic.twitter.com/1U6UJcyxyP
">Are your ready for #HowdyModi!
— BJP Gujarat (@BJP4Gujarat) September 22, 2019
Prime Minister Shri @narendramodi will address a historic community summit at NRG Stadium in Houston, Texas, USA on 22nd September 2019 from 8.30 pm onwards.
Stay tuned. pic.twitter.com/1U6UJcyxyPAre your ready for #HowdyModi!
— BJP Gujarat (@BJP4Gujarat) September 22, 2019
Prime Minister Shri @narendramodi will address a historic community summit at NRG Stadium in Houston, Texas, USA on 22nd September 2019 from 8.30 pm onwards.
Stay tuned. pic.twitter.com/1U6UJcyxyP
ಆರಂಭದ 90 ನಿಮಿಷ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 'ವೋವೆನ್: ದಿ ಇಂದಿಯನ್- ಅಮೆರಿಕನ್ ಸ್ಟೋರಿ' ಎನ್ನುವ ಹೆಸರಿನಲ್ಲಿ ಜರುಗಲಿದೆ.
ಈ ಕಾರ್ಯಕ್ರಮ ನರೇಂದ್ರ ಮೋದಿ ಹಾಗೂ ಪಿಎಂಒ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾತ್ರವಲ್ಲದೆ 'ಹೌಡಿ ಮೋದಿ' ಎನ್ನುವ ಫೇಸ್ಬುಕ್ ಖಾತೆಯಲ್ಲಿಯೂ ನೇರ ಪ್ರಸಾರ ವೀಕ್ಷಿಸಬಹುದು.
-
I had a special interaction with Kashmiri Pandits in Houston. pic.twitter.com/07coxdg0oS
— Narendra Modi (@narendramodi) September 22, 2019 " class="align-text-top noRightClick twitterSection" data="
">I had a special interaction with Kashmiri Pandits in Houston. pic.twitter.com/07coxdg0oS
— Narendra Modi (@narendramodi) September 22, 2019I had a special interaction with Kashmiri Pandits in Houston. pic.twitter.com/07coxdg0oS
— Narendra Modi (@narendramodi) September 22, 2019
ಐವತ್ತು ಸಾವಿರ ಜನರು ಪ್ರತ್ಯಕ್ಷ ಸಾಕ್ಷಿ..!
ಮೋದಿ ಭಾಷಣಕ್ಕೆ ಭಾರಿ ಬೇಡಿಕೆ ಇದ್ದು, ಒಂದು ಅಂದಾಜಿನ ಪ್ರಕಾರ ಇಂದಿನ 'ಹೌಡಿ ಮೋದಿ' ಕಾರ್ಯಕ್ರಮವನ್ನು ಬರೋಬ್ಬರಿ ಐವತ್ತು ಸಾವಿರ ಮಂದಿ ಪ್ರತ್ಯಕ್ಷವಾಗಿ ವೀಕ್ಷಣೆ ಮಾಡಲಿದ್ದಾರೆ.
'ಹೌಡಿ ಮೋದಿ' ಸಮಾವೇಶಕ್ಕೆ ಟ್ರಂಪ್ ಎಂಟ್ರಿ, ಚೀನಾ, ಪಾಕ್ಗೆ ತಲೆನೋವೇಕೆ?
ಕುತೂಹಲ ಮೂಡಿಸಿದ ಟ್ರಂಪ್ ಭಾಷಣ:
ಆರಂಭದಲ್ಲಿ ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷರ ಭಾಗವಹಿಸುವಿಕೆ ಇರಲಿಲ್ಲ. ಆದರೆ ಸಮಾರಂಭದ ಮಹತ್ವವನ್ನು ಕಂಡು ಸ್ವತಃ ಟ್ರಂಪ್ ಭಾಗವಹಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
-
The Dawoodi Bohra community has distinguished itself across the world. In Houston, I had the opportunity to spend time with them and speak about a wide range of issues. pic.twitter.com/zxHXa9Ka9Z
— Narendra Modi (@narendramodi) September 22, 2019 " class="align-text-top noRightClick twitterSection" data="
">The Dawoodi Bohra community has distinguished itself across the world. In Houston, I had the opportunity to spend time with them and speak about a wide range of issues. pic.twitter.com/zxHXa9Ka9Z
— Narendra Modi (@narendramodi) September 22, 2019The Dawoodi Bohra community has distinguished itself across the world. In Houston, I had the opportunity to spend time with them and speak about a wide range of issues. pic.twitter.com/zxHXa9Ka9Z
— Narendra Modi (@narendramodi) September 22, 2019
ಇಂದಿನ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಸುಮಾರು ಅರ್ಧ ಗಂಟೆ ಕಾಲ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ. ಈ ಭಾಷಣದಲ್ಲಿ ಉಭಯ ದೇಶಗಳ ಸಂಬಂಧದ ಬಗ್ಗೆ ಹೆಚ್ಚು ಒತ್ತನ್ನು ನೀಡಲಿದ್ದಾರೆ ಎಂದು ವೈಟ್ಹೌಸ್ ಮೂಲಗಳು ತಿಳಿಸಿದೆ.