ETV Bharat / international

ಬೈಡನ್​ ಕೋವಿಡ್​ ಪ್ಯಾಕೇಜ್​; ಮಕ್ಕಳಿಗಾಗಿ 1.9 ಟ್ರಿಲಿಯನ್ ಡಾಲರ್ ಅನುದಾನ - ಅಮೆರಿಕದ ಮಕ್ಕಳಿಗಾಗಿ 3,000 ಡಾಲರ್ ಮೌಲ್ಯದ ಹೊಸ ಆ್ಯಕ್ಟ್​

ಯುಎಸ್​ ಅಧ್ಯಕ್ಷ ಜೋ ಬೈಡನ್ 1.9 ಟ್ರಿಲಿಯನ್ ಯುಎಸ್​ ಡಾಲರ್ ಕೋವಿಡ್​ ರಿಲೀಫ್​ ಪ್ಯಾಕೇಜ್​ನಲ್ಲಿ 1.9 ಟ್ರಿಲಿಯನ್ ಹಣ ನೀಡುವ ಅಮೆರಿಕನ್ ಫ್ಯಾಮಿಲಿ ಮಸೂದೆಗೆ ಒಪ್ಪಿಗೆ ನೀಡಲಿದ್ದಾರೆ.

House Democrats to introduce USD 3,000 child benefit legislation as part of Biden's relief package
ಕೋವಿಡ್​ ರಿಲೀಫ್​ ಪ್ಯಾಕೇಜ್​
author img

By

Published : Feb 8, 2021, 2:34 PM IST

ವಾಷಿಂಗ್​​ಟನ್: ಜೋ ಬೈಡನ್​ ಘೋಷಿಸಿದ 1.9 ಟ್ರಿಲಿಯನ್ ಯುಎಸ್ ಡಾಲರ್ ಕೋವಿಡ್​ ರಿಲೀಫ್​ ಪ್ಯಾಕೇಜ್​ನಿಂದ ಲಕ್ಷಾಂತರ ಕುಟುಂಬಗಳಿಗೆ ಅನುಕೂಲವಾಗಲಿದ್ದು, ಕುಟುಂಬದ ಪ್ರತೀ ಮಗುವಿಗೆ ನಿರ್ದಿಷ್ಟ ಮೊತ್ತದ ಹಣ ನೀಡುವ ಅಮೆರಿಕನ್ ಫ್ಯಾಮಿಲಿ ಆಕ್ಟ್ ಅನ್ನು ಅನುಮೋದನೆಗೊಳಿಸಲಿದ್ದಾರೆ.

22 ಪುಟಗಳ ಮಸೂದೆಯ ಪ್ರಕಾರ, ಈ ಶಾಸನವು ಆರು ವರ್ಷದೊಳಗಿನ ಪ್ರತಿ ಮಗುವಿಗೆ 3,600 ಯುಎಸ್ ಡಾಲರ್ ಮತ್ತು ಆರು ವರ್ಷದಿಂದ 17 ವರ್ಷದೊಳಗಿನ ಪ್ರತಿ ಮಗುವಿಗೆ 3,000 ಡಾಲರ್​​ಗಳನ್ನು ಒಂದೇ ವರ್ಷಕ್ಕೆ ಒದಗಿಸುತ್ತದೆ.

ಕೋವಿಡ್​ ಸಾಂಕ್ರಾಮಿಕ ರೋಗವು ಕುಟುಂಬಗಳನ್ನು ಬಡತನದ ಆಳಕ್ಕೆ ತಳ್ಳಿದ್ದು, ಇದು ವಿನಾಶಕಾರಿಯಾಗಿದೆ. ಹೀಗಾಗಿ ನಾವು ಮಕ್ಕಳ ತೆರಿಗೆ ಸಾಲವನ್ನು ಹೆಚ್ಚು ಉದಾರವಾಗಿ ನೀಡುತ್ತಿದ್ದು, ಮಾಸಿಕ ಪಾವತಿಸುವ ಯೋಜನೆ ರೂಪಿಸಿದ್ದೇವೆ ಎಂದು ವೇಸ್ ಅಂಡ್ ಮೀನ್ಸ್ ಸಮಿತಿಯ ಅಧ್ಯಕ್ಷ ರಿಚರ್ಡ್​ ನೀಲ್​ ತಿಳಿಸಿದ್ದಾರೆ. ಕುಟುಂಬಗಳು ಮಾಸಿಕ ಆಧಾರದ ಮೇಲೆ ಮಕ್ಕಳ ತೆರಿಗೆ ಕ್ರೆಡಿಟ್ ಪಾವತಿಗಳನ್ನು ಸ್ವೀಕರಿಸಬಹುದು, ವಾರ್ಷಿಕವಾಗಿ 75,000 ಯುಎಸ್ ಡಾಲರ್ ಗಳಿಸುವ ಸಿಂಗಲ್​ ಪೋಷಕರಿಗೆ ಮತ್ತು 1,50,000 ಯುಎಸ್ ಡಾಲರ್ ವರೆಗೆ ಗಳಿಸುವ ದಂಪತಿಗೆ ಇದರ ಸಂಪೂರ್ಣ ಲಾಭ ಲಭ್ಯವಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರ ಈ ಮಸೂದೆ ಪ್ರಸ್ತಾಪವು ಕಡಿಮೆ ಆದಾಯದ ಕಾರ್ಮಿಕರಿಗೆ ಗಳಿಸಿದ ಆದಾಯ ತೆರಿಗೆ ಸಾಲವನ್ನು ವಿಸ್ತರಿಸುವುದರ ಜೊತೆಗೆ ನಿರುದ್ಯೋಗ ನಿವಾರಣೆ ಮತ್ತು ವಸತಿ ನೆರವು ಇತರ ಕ್ರಮಗಳನ್ನೂ ಒಳಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.