ಲಾಸ್ ಏಂಜಲೀಸ್: ಪೂರ್ವ ಲಾಸ್ ಏಂಜಲೀಸ್ನಲ್ಲಿ ಖಾಸಗಿ ಏರ್ ಆ್ಯಂಬುಲೆನ್ಸ್ ಶುಕ್ರವಾರ ಅಪಘಾತಕ್ಕೀಡಾಗಿದೆ.
ದಾನ ಮಾಡಿದ ಅಂಗಾಂಗಗಳನ್ನು ಹೊತ್ತು ತರುತ್ತಿದ್ದ ಏರ್ ಆ್ಯಂಬುಲೆನ್ಸ್ ಅಪಘಾತಕ್ಕೀಡಾಗಿದೆ. ವರದಿಗಳ ಪ್ರಕಾರ ಆಸ್ಪತ್ರತೆಯ ಮೇಲ್ಛಾವಣಿಗೆ ಏರ್ ಆ್ಯಂಬುಲೆನ್ಸ್ ಅಪ್ಪಳಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೊಯೆಲ್ ಹೈಟ್ಸ್ನ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕೆಕ್ ಆಸ್ಪತ್ರೆಯ ಹೆಲಿಪ್ಯಾಡ್ನಲ್ಲಿ ಅಪಘಾತ ಜರುಗಿದೆ.
ಪೈಲಟ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಏರ್ ಆ್ಯಂಬುಲೆನ್ಸ್ನಲ್ಲಿದ್ದ ಇತರ ಇಬ್ಬರು ಸುರಕ್ಷಿತರಾಗಿದ್ದಾರೆ ಎಂದು ಅಗ್ನಿಶಾಮಕ ವಕ್ತಾರ ಮಾರ್ಗರೇಟ್ ಸ್ಟೀವರ್ಟ್ ಹೇಳಿದ್ದಾರೆ.
ದಾನ ಮಾಡಿದ ಅಂಗವನ್ನು LAFD ಅಗ್ನಿಶಾಮಕ ದಳದವರು ಸುರಕ್ಷಿತವಾಗಿ ಯುಎಎಸ್ಸಿ - ಕೌಂಟಿ ಆಸ್ಪತ್ರೆಯ ಸಿಬ್ಬಂದಿಗೆ ಹಸ್ತಾಂತರಿಸಿದರು ಎಂದು ಅಗ್ನಿಶಾಮಕ ಇಲಾಖೆ ಟ್ವೀಟ್ ಮಾಡಿದೆ.