ETV Bharat / international

ಕೊಲಂಬಿಯಾ ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಮೇಲೆ ಗುಂಡಿನ ದಾಳಿ

ಇದು ಹೇಡಿಗಳ ದಾಳಿಯಾಗಿದ್ದು, ನಾವು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮೇಲೆ ಗುಂಡುಗಳು ಗುರುತು ಬಿದ್ದಿರುವುದನ್ನು ಕಾಣಬಹುದಾಗಿದೆ ಎಂದು ಕೊಲಂಬಿಯಾ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ.

author img

By

Published : Jun 26, 2021, 12:20 PM IST

Helicopter carrying Colombia's president attacked, all safe
ಕೊಲಂಬಿಯಾ ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಮೇಲೆ ಗುಂಡಿನ ದಾಳಿ

ಬೊಗೊಟಾ, ಕೊಲಂಬಿಯಾ: ತಾವು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಹೆಲಿಕಾಪ್ಟರ್​ನಲ್ಲಿ ಇದ್ದ ಯಾರಿಗೂ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಕೊಲಂಬಿಯಾ ಅಧ್ಯಕ್ಷರಾದ ಐವಾನ್ ಡ್ಯೂಕ್ ವಿಡಿಯೋ ಸಂದೇಶವೊಂದರಲ್ಲಿ ಹೇಳಿದ್ದಾರೆ.

ಕೊಲಂಬಿಯಾದ ಕಟಟುಂಬೋ ಪ್ರದೇಶದಿಂದ ನಾರ್ಟೆ ಡಿ ಸ್ಯಾಂಟಂಡರ್ ಪ್ರಾಂತ್ಯದ ಕುಕುಟಾ ನಗರಕ್ಕೆ ತೆರಳಬೇಕಾದರೆ ದಾಳಿ ನಡೆಸಲಾಗಿದೆ ಎಂದು ಐವಾನ್ ಡ್ಯೂಕ್ ಮಾಹಿತಿ ನೀಡಿದ್ದಾರೆ.

ಇದು ಹೇಡಿಗಳ ದಾಳಿಯಾಗಿದ್ದು, ನಾವು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮೇಲೆ ಗುಂಡುಗಳು ಮಾರ್ಕ್ ಬಿದ್ದಿರುವುದನ್ನು ಕಾಣಬಹುದಾಗಿದೆ ಎಂದು ಐವಾನ್ ಡ್ಯೂಕ್ ಹೇಳಿಕೆ ನೀಡಿದ್ದಾರೆ.

ಡ್ಯೂಕ್ ಜೊತೆಯೆಲ್ಲಿ ಹಲವು ಅಧಿಕಾರಿಗಳು ಹೆಲಿಕಾಪ್ಟರ್​ನಲ್ಲಿದ್ದರು. ರಕ್ಷಣಾ ಸಚಿವ ಡಿಯಾಗೋ ಮಲಾನೋ, ಗೃಹ ಸಚಿವ ಡೇನಿಯಲ್ ಪಲಾಸಿಯೋಸ್, ನಾರ್ಟೆ ಡಿ ಸ್ಯಾಂಟಂಡರ್​​​ನ ಗವರ್ನರ್​​ ಸಿಲ್ವಾನೋ ಸೆರ್ರಾನೋ ಹೆಲಿಕಾಪ್ಟರ್​ನಲ್ಲಿ ಇದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಅಥಣಿಯಲ್ಲಿ ಆರ್​ಎಸ್​ಎಸ್ ಹಿರಿಯ ಮುಖಂಡರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ

ಎಡಪಂಥೀಯ ನ್ಯಾಷನಲ್ ಲಿಬರೇಷನ್ ಆರ್ಮಿ (ಇಎಲ್​ಎನ್​​​) ದಾಳಿ ನಡೆಸಿರಬಹುದು ಎಂದು ಊಹಿಸಲಾಗಿದ್ದು, ಹೆಲಿಕಾಪ್ಟರ್​ ಮೇಲೆ ನಡೆದ ದಾಳಿಯ ತನಿಖೆ ನಡೆಸಲು ಅಲ್ಲಿನ ಪೊಲೀಸರು ಮುಂದಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.